|
ಐಟಿಯ ಹೊಸತಾಣವಾಗುತ್ತಿರು ಜೈಪುರ್
ಬೆಂಗಳೂರು: ದೆಹಲಿಯ ಸಮೀಪವಿರುವದರಿಂದ ರಾಜಸ್ಥಾನವು
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಹೊಸ
ತಾಣವಾಗುತ್ತಿದೆ ಎಂದು ಇನ್ಫೋಸಿಸ್ ಟೆಕ್ನಾಲಜಿಯ ನಿರ್ದೇಶಕ (ಮಾನವ
ಸಂಪನ್ಮೂಲ) ಟಿ.ವಿ.ಮೋಹನ್‌ದಾಸ್ ಪೈ ಗುರುವಾರ ಹೇಳಿದರು.
ಅವರು ಡಿ.೩೧ಕ್ಕೆ ಮುಗಿದ ಇನ್ಫೋಸಿಸನ `ಮೂರನೆಯ
ತ್ರೈಮಾಸಿಕ ಫರ್‌ಫಾರ್‌ಮೆನ್ಸ್' ಘೋಷಣೆಯ ನಂತರ
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
`ರಾಜಸ್ಥಾನ ಸರ್ಕಾರವು ಐಟಿ ಉದ್ಯಮ ಬೆಳೆಯಲು ಎಲ್ಲಾ ರೀತಿಯಿಂದಲೂ
ಸಹಕರಿಸುತ್ತಿದೆ. ಆದ್ದರಿಂದ ಕೆಲವೇ ತಿಂಗಳುಗಳಲ್ಲಿ ಜೈಪುರದಲ್ಲಿ
ಐಟಿ ಉದ್ಯೋಗಿಗಳ ಸಂಖ್ಯೆ ದುಪ್ಪಟ್ಟು ಬೆಳೆದಿದೆ. ಐಟಿಗೆ ಪ್ರೋತ್ಸಾಹ
ನೀಡುವ ವಿಷಯಕ್ಕೆ ಬಂದರೆ ಆಂಧ್ರಪ್ರದೇಶ, ತಮಿಳುನಾಡು,
ಮಹಾರಾಷ್ಟ್ರ, ಕೇರಳಾ, ಓರಿಸ್ಸಾ ಮತ್ತು ಚಂಡೀಗಢ ಸರ್ಕಾರಗಳು
ಅತ್ಯುತ್ತಮದಿಂದ ಉತ್ತಮ. ಬೆಂಗಳೂರಿನ ವಿಷಯದಲ್ಲಿ ಪರವಾಗಿಲ್ಲ
ಎನ್ನಬಹುದು ಏಕೆಂದರೆ ಬೆಂಗಳೂರು ಅವಕಾಶ ಒದಗಿಸುತ್ತದೆ ಆದರೆ
ಅಗತ್ಯಗಳನ್ನು ಇನ್ನೂ ಪೂರೈಸಬೇಕಾಗಿದೆ' ಎಂದು ಅವರು
ತಿಳಿಸಿದರು.
ಬೆಂಗಳೂರಿನಲ್ಲಿ ಇನ್ಫೋಸಿಸ್‌ನ ಮುಂದಿನ ಯೋಜನೆಯ ಬಗ್ಗೆ
ಹೇಳುತ್ತಾ `ಸರ್ಜಾಪುರದಲ್ಲಿ ನಮ್ಮ ಉದ್ಯಮ ಸ್ಥಾಪಿಸಲು
ಸ್ಥಳೀಯರ ಒಪ್ಪಿಗೆ ಪಡೆದಿದ್ದೇವೆ ಮತ್ತು ಇನ್ನೂ ಹೆಚ್ಚಿನ ಭೂಮಿಗಾಗಿ
ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯನ್ನು ಕೋರಿದ್ದೇವೆ'
ಎಂದು ಹೇಳಿದರು.
ಇನ್ಫೋಸಿಸ್ ಕನ್ನಡ ವಿರೋಧಿ ಧೋರಣೆ ತಾಳಿದೆ ಎನ್ನುವ
ಆರೋಪವನ್ನು ತಳ್ಳಿಹಾಕಿದ ಅವರು ಇನನ್ಫೋಸಿಸ್‌ನ ೭೦ ಸಾವಿರ
ಉದ್ಯೋಗಿಗಳಲ್ಲಿ ೩೦ ಸಾವಿರ ಉದ್ಯೋಗಿಗಳು ಕನ್ನಡಿಗರಾಗಿದ್ದಾರೆ. ಇಂಥ
ಪ್ರಚಾರಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ಇರುವ
ಕಂಪೆನಿಗಳು ಹಿಂದೆಸರಿಯುವಂತೆ ಮಾಡುತ್ತದೆ ಎಂದು
ಅಭಿಪ್ರಾಯಪಟ್ಟರು.
ಇನ್ನಷ್ಟು
ಪಶ್ಚಿಮ ಬಂಗಾಳ ಬಂದ್
ಯಶಸ್ವಿ
ವಿಶ್ವ ಕನ್ನಡ ಸಮ್ಮೇಳನ
ಉದ್ಘಾಟನೆಗೆ ರಾಷ್ಟ್ರಪತಿ?
ಇಮ್ರಾನ್ ಬಂಧನ:
ಬೆಳಕಿಗೆ ಬಂದ ಇನ್ನಷು ಮಾಹಿತಿ
ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ
ಉಗ್ರಗಾಮಿ
ಬೆಂಗಳೂರಿನಲ್ಲಿ ಸೈಬರ್
ಸೆಕ್ಯೂರಿಟಿ ಲ್ಯಾಬ್
ಶಾಸ್ತ್ರೋಕ್ತವಾಗಿ
ಪ್ರಾರಂಭವಾದ ಬನಶಂಕರಿ ಜಾತ್ರೆ
ವಿಕಾಲಾಂಗರಿಗೆ ಉದ್ಯೋಗ
ತರಬೇತಿ
ಕೆಪಿಎಸ್‌ಸಿ ನೇಮಕದಲ್ಲಿ
ಅವ್ಯವಹಾರ: ಧರಣಿ
|