|
ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ ಉಡಾವಣೆ
ಶ್ರೀಹರಿಕೋಟಾ: ಇಲ್ಲಿಯ ಸತೀಶ್ ಧವನ್ ಬಾಹ್ಯಾಕಾಶ
ಕೇಂದ್ರದಿಂದ ಬುಧವಾರ ಪಿಎಸ್‌ಎಲ್‌ವಿ-ಸಿ೭ (ಧ್ರುವಗಾಮಿ ಉಪಗ್ರಹ
ವಾಹನ) ನಾಲ್ಕು ಉಪಗ್ರಹಗಳನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಗೆ
ಸೇರಿಸಿದೆ.
ಬೆಳಿಗ್ಗೆ ೯.೨೩ಕ್ಕೆ ಆಗಸಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ-ಸಿ೭ ೨೦ ನಿಮಿಷಗಳಲ್ಲಿ
ಎಲ್ಲ ನಾಲ್ಕು ಉಪಗ್ರಹಗಳನ್ನು ಅವುಗಳ ಕಕ್ಷೆಗೆ ಸೇರಿಸಿತು.
ಕಕ್ಷೆಗೆ ಸೇರಿದ ಭಾರತೀಯ ದೂರ ಸಂವೇದಿ ಉಪಗ್ರಹ
`ಕಾರ್ಟೊಸ್ಯಾಟ್-೨' ಪುನಃ ಬಳಸಬಹುದಾದ ಉಪಗ್ರಹ ಎಸ್‌ಆರ್‌ಇ-೧,
ಇಂಡೋನೇಷ್ಯದ ಭೂನಿರೀಕ್ಷಣಾ ಉಪಗ್ರಹ `ಲಪನ್ ಮತ್ತು
ಟ್ಯೂಬ್‌ಸ್ಯಾಟ್' ಹಾಗೂ ಅರ್ಜೈಂಟೈನಾದ ಚಿಕ್ಕ ಉಪಗ್ರಹ `ಪುಹುಸ್ಯಾಟ್'
ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ್ತಿವೆ ಎಂದು ಇಸ್ರೋ
ಪ್ರಕಟಿಸಿದೆ.
ಪಿಎಸ್‌ಎಲ್‌ವಿ-ಸಿ೭ ಯಶಸ್ವಿ ಉಡಾವಣೆಗೆ ಇಸ್ರೋ ಅಧ್ಯಕ್ಷ ಮಾಧವ್
ನಾಯರ್ ಅತಿ ಸಂತೋಷ ವ್ಯಕ್ತ ಪಡಿಸಿದ್ದಾರೆ.
ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಪ್ರಧಾನಿ ಮನಮೋಹನ ಸಿಂಗ್
ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಇನ್ನಷ್ಟು
ಪಶ್ಚಿಮ ಬಂಗಾಳ ಬಂದ್
ಯಶಸ್ವಿ
ವಿಶ್ವ ಕನ್ನಡ ಸಮ್ಮೇಳನ
ಉದ್ಘಾಟನೆಗೆ ರಾಷ್ಟ್ರಪತಿ?
ಇಮ್ರಾನ್ ಬಂಧನ:
ಬೆಳಕಿಗೆ ಬಂದ ಇನ್ನಷು ಮಾಹಿತಿ
ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ
ಉಗ್ರಗಾಮಿ
ಬೆಂಗಳೂರಿನಲ್ಲಿ ಸೈಬರ್
ಸೆಕ್ಯೂರಿಟಿ ಲ್ಯಾಬ್
ಶಾಸ್ತ್ರೋಕ್ತವಾಗಿ
ಪ್ರಾರಂಭವಾದ ಬನಶಂಕರಿ ಜಾತ್ರೆ
ವಿಕಾಲಾಂಗರಿಗೆ ಉದ್ಯೋಗ
ತರಬೇತಿ
ಕೆಪಿಎಸ್‌ಸಿ ನೇಮಕದಲ್ಲಿ
ಅವ್ಯವಹಾರ: ಧರಣಿ
|