|
ನಾಗಾರ್ಜುನ ಸ್ಥಾವರ ವಾರಗಳ ಕಾಲ ಸ್ಥಗಿತ
ಬೆಂಗಳೂರು: ನಾಗಾರ್ಜುನ ಶಾಖೋತ್ಪನ್ನ ವಿದ್ಯುತ್
ಕೇಂದ್ರದಿಂದ ಮೀನುಗಾರಿಕೆಯ ಮೇಲೆ ಆಗುವ ದುಷ್ಪರಿಣಾಮ
ಅಧ್ಯಯನಕ್ಕೆ ಅನುಕೂಲವಾಗಲು ಒಂದುವಾರ ಕಾಮಗಾರಿಯನ್ನು
ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಬುಧವಾರ ವಿಧಾನಸೌಧ ಸಮ್ಮೇಳನ
ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯನ್ನು ಕುರಿತು ಅವರು
ಮಾತನಾಡುತ್ತಿದ್ದರು. ಮೀನುಗಾರರ ಸಮಸ್ಯೆ ಚರ್ಚಿಸಲು ಕರೆದ ಈ
ಸಭೆ ಕರೆಯಲಾಗಿದ್ದರೂ ನಾಗಾರ್ಜುನ ಯೋಜನೆಯಿಂದ
ಮೀನುಗಾರಿಕೆಯ ಮೇಲಾಗುವ ಸಮಸ್ಯೆಯನ್ನೇ ಹೆಚ್ಚಾಗಿ
ಚರ್ಚಿಸಲಾಯಿತು.
ನಾಗಾರ್ಜುನ ಯೋಜನೆಯನ್ನು ಶಾಶ್ವತವಾಗಿ ಕೈ ಬಿಡಬೇಕು ಎನ್ನುವ
ಒತ್ತಾಯವನ್ನು ಕುಮಾರಸ್ವಾಮಿ ತಳ್ಳಿಹಾಕಿದರು.
`ಮೀನುಗಾರರನ್ನು ರಕ್ಷಿಸಿವ ಸಲುವಾಗಿ ಈ ಯೋಜನೆಯನ್ನು
ವಿರೋಧಿಸುತ್ತಿರುವುದಾಗಿ ಕೆಲವರು ಹೇಳುತ್ತಿದ್ದಾರೆ. ವಿದ್ಯುತ್
ಉತ್ಪಾದನೆಗೆ ಆಧುನಿಕ ತಂತ್ರಜ್ಞಾನ ಬಳಸುವುದರಿಂದ
ಮೀನುಗಾರಿಕೆಯ ಮೇಲೆ ಯಾವ ರೀತಿಯ ದುಷ್ಪರಿಣಾಮವೂ
ಆಗುವುದಿಲ್ಲ' ಎಂದು ಅವರು ಹೇಳಿದರು.
ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ಕೊರತೆ ಪ್ರಾರಂಭವಾಗಿದೆ. ನಾಗಾರ್ಜುನ
ಸ್ಥಾವರದಿಂದ ಯುನಿಟ್‌ಗೆ ೨.೩೦ ರೂ.ಅಂತೆ ವಿದ್ಯುತ್ ಖರೀದಿಸಲು
ನಿರ್ಧರಿಸಲಾಗಿದೆ. ಈ ಹಂತದಲ್ಲಿ ಕಾಮಗಾರಿ ಸ್ಥಗಿತಗೊಳಿಸಿದರೆ
ಹೂಡಿಕೆದಾರರು ಉತ್ಸಾಹ ಕಳೆದುಕೊಳ್ಳುತ್ತಾರೆ' ಎಂದು ಅವರು
ಹೇಳಿದರು.
ಈ ಒಂದು ವಾರದೊಳಗೆ ಹೊರ ರಾಜ್ಯಗಳ ಉಷ್ಣ ಸ್ಥಾವರಗಳಿಗೆ
ಭೇಟಿನೀಡಿ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಮಾಡುವಂತೆ
ದಕ್ಷಿಣ ಕನ್ನಡ, ಉಡುಪಿಯ ಜನಪ್ರತಿನಿಧಿ ಮತ್ತು ಮೀನುಗಾರರ
ಸಂಘಟನೆಗಳಿಗೆ ಸೂಚಿಸಿದರು.
ಇನ್ನಷ್ಟು
ಪಶ್ಚಿಮ ಬಂಗಾಳ ಬಂದ್
ಯಶಸ್ವಿ
ವಿಶ್ವ ಕನ್ನಡ ಸಮ್ಮೇಳನ
ಉದ್ಘಾಟನೆಗೆ ರಾಷ್ಟ್ರಪತಿ?
ಇಮ್ರಾನ್ ಬಂಧನ:
ಬೆಳಕಿಗೆ ಬಂದ ಇನ್ನಷು ಮಾಹಿತಿ
ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ
ಉಗ್ರಗಾಮಿ
ಬೆಂಗಳೂರಿನಲ್ಲಿ ಸೈಬರ್
ಸೆಕ್ಯೂರಿಟಿ ಲ್ಯಾಬ್
ಶಾಸ್ತ್ರೋಕ್ತವಾಗಿ
ಪ್ರಾರಂಭವಾದ ಬನಶಂಕರಿ ಜಾತ್ರೆ
ವಿಕಾಲಾಂಗರಿಗೆ ಉದ್ಯೋಗ
ತರಬೇತಿ
ಕೆಪಿಎಸ್‌ಸಿ ನೇಮಕದಲ್ಲಿ
ಅವ್ಯವಹಾರ: ಧರಣಿ
|