Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 11 January 2007 05:20 PM

ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಘೋಷಿಸಿದ ಅಕಾಡೆಮಿ

 

ಖ್ಯಾತ ಪತ್ತೇದಾರಿ ಲೇಖಕ ಎನ್.ನರಸಿಂಹಯ್ಯ ಸೇರಿದಂತೆ ಐವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೦೬ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿದೆ.
 

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಗೀತಾ ನಾಗಭೂಷಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ೨೦೦೬ರ ಗೌರವ ಪ್ರಶಸ್ತಿ ಮತ್ತು ೧೮ ಕೃತಿಗಳಿಗೆ ೨೦೦೫ನೇ ಸಾಲಿನ ಪುಸ್ತಕ ಬಹುಮಾನವನ್ನು ಪ್ರಕಟಿಸಿತು.
 

೨೦೦೬ನೇ ಗೌರವ ಪ್ರಶಸ್ತಿಗೆ ಆಯ್ಕೆ ಆದವರು:
ಜಾನಪದ ಮತ್ತು ಸಾಹಿತ್ಯ ಸಂಶೋಧಕ ಪ್ರೊ.ಸುಧಾಕರ್, ಲೇಖಕಿ ಎ.ಪಿ ಮಾಲತಿ, ಸಂಶೋಧಕ ಮತ್ತು ವಿಮರ್ಷಕ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್.
 

ತಮ್ಮ ಕೃತಿಗೆ ೨೦೦೫ನೇ ಸಾಲಿನ ಪುಸ್ತಕ ಬಹಮಾನ ಪುರಸ್ಕೃತರು:
 

* ಜಿ.ಪಿ.ಬಸವರಾಜು-ಭೂಮಿಗಂಧ (ಕಾವ್ಯ)
* ಆರ್.ಸುನಂದಮ್ಮ-ದ್ವಿತ್ವ (ಕಾದಂಬರಿ)
* ಕೇಶವರೆಡ್ಡಿ ಹಂದ್ರಾಳ-ಒಂದು ಹಿಡಿ ಮಣ್ಣು (ಸಣ್ಣ ಕಥೆ)
* ಕೆ.ವೈ.ನಾರಾಯಣಸ್ವಾಮಿ-ಪಂಪ ಭಾರತ (ನಾಟಕ)
* ಗಂಗಾಧರ ಮೊದಲಿಯಾರ್-ನಾಲ್ಕು ಜನರಿಗೆ ನಮಸ್ಕಾರ (ಲಲಿತ ಪ್ರಬಂಧ)
* ಸಿ.ಎಸ್.ದ್ವಾರಕಾನಾಥ್-ಗಾಂಧಿ ಮೆಟ್ಟಿದ ನಾಡಿನಲ್ಲಿ (ಪ್ರವಾಸ ಸಾಹಿತ್ಯ)
* ನಿಂಗಪ್ಪ ಮುದೇನೂರು-ಬುರ್ರಕಥಾ ಈರಮ್ಮ (ಆತ್ಮಕಥೆ/ಜೀವನ ಚರಿತ್ರೆ)
* ವಿ.ಚಂದ್ರಶೇಖರ್ ನಂಗಲಿ-ಆಲಿಸಯ್ಯ ಮಲೆಯ ಕವಿ (ಸಾಹಿತ್ಯ ವಿಮರ್ಶೆ)
* ಡಾ.ವೀರಣ್ಣ ರಾಜೂರ-ಶ್ರೀ ತೋಂಟದ ಸಿದ್ಧಲಿಂಗೇಶ್ವರ ಸಮಗ್ರ ಸಾಹಿತ್ಯ (ಗ್ರಂಥ ಸಂಪಾದನೆ)
* ಆನಂದ ವಿ.ಪಾಟೀಲ-ಡಂ ಡಂ ಊರಿಗೆ ಡಿಂ ಡಿಂ ಗಾಡಿ (ಮಕ್ಕಳ ಸಾಹಿತ್ಯ)
* ಟಿ.ಎಸ್.ವಿವೇಕಾನಂದ ತೋವಿನಕೆರೆ-ಭೂಮಿಗೀತೆ (ವಿಜ್ಞಾನ ಸಾಹಿತ್ಯ)
* ಮಂಗ್ಳೂರು ವಿಜಯ-ಟಿಬೆಟ್ ಅರ್ಧ ಶತಮಾನದ ಆರ್ತಮೊರೆ (ಮಾನವಿಕ)
* ತಾಳ್ತಜೆ ವಸಂತಕುಮಾರ-ಬೌದ್ಧಾಯನ (ಸಂಶೋಧನೆ)
* ಎಂ.ಆರ್.ಕಮಲಾ-ಉತ್ತರ ನಕ್ಷತ್ರ (ಸೃಜನಶೀಲ ಅನುವಾದ)
* ಡಾ.ಮಾಧವ ಪರಾಜೆ-ತೌಲನಿಕ ದ್ರಾವಿಡ ವ್ಯಾಕರಣ (ಸೃಜನೇತರ ಅನುವಾದ)
* ಕಮಲಾ ಹೆಮ್ಮಗೆ-ಪಂಚಮುಖ (ಸಂಕೀರ್ಣ)
* ಆರ್.ಸ್ವಾಮಿ ಆನಂದ್-ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ (ಲೇಖಕರ ಮೊದಲ ಕೃತಿ)
* ಎಸ್.ಸುಗತ-ಫಿನಿಕ್ಸ್ ಅಂಡ್ ಫೋರ್ ಅದರ್ ಮೈಮ್ ಪ್ಲೇಸ್ (ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ)
 

Dr. C.S. Dwarakanathಪ್ರಸಿದ್ಧ ವಕೀಲರೂ, ಪತ್ರಕರ್ತರೂ ಆದ ಡಾ. ಸಿ.ಎಸ್. ದ್ವಾರಕಾನಾಥ್ ಅವರ `ಗಾಂಧಿ ಮೆಟ್ಟಿದ ನಾಡಿನಲ್ಲಿ' ಪ್ರವಾಸ ಕಥನಕ್ಕೆ ೨೦೦೫ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಡಾ. ಸಿ.ಎಸ್. ದ್ವಾರಕಾನಾಥ್‌ರವರು `ವಿಕ್ರಾಂತ ಕರ್ನಾಟಕ' ವಾರಪತ್ರಿಕೆಯ ಓದುಗರಿಗೂ ಸುಪರಿಚತರು ಹಾಗೂ ನಮ್ಮ ಪತ್ರಿಕೆಯ ಕಾನೂನು ಸಲಹೆಗಾರರೂ ಆಗಿದ್ದಾರೆನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
 

ಗೌರವ ಪ್ರಶಸ್ತಿ ೧೦ ಸಾವಿರ ರೂ. ನಗದು, ಶಾಲು, ಫಲಕಗಳನ್ನು ಮತ್ತು ೨೦೦೫ನೇ ಸಾಲಿನ ಪುಸ್ತಕ ಬಹುಮಾನ ೫ ಸಾವಿರ ರೂ.ನಗದು, ಪ್ರಮಾಣ ಪತ್ರಗಳನ್ನು ಒಳಗೊಂಡಿದ್ದು ಮಾರ್ಚ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
 

ಇನ್ನಷ್ಟು

ಪಶ್ಚಿಮ ಬಂಗಾಳ ಬಂದ್ ಯಶಸ್ವಿ

ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ರಾಷ್ಟ್ರಪತಿ?

ಇಮ್ರಾನ್ ಬಂಧನ: ಬೆಳಕಿಗೆ ಬಂದ ಇನ್ನಷು ಮಾಹಿತಿ

ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ ಉಗ್ರಗಾಮಿ

ಬೆಂಗಳೂರಿನಲ್ಲಿ ಸೈಬರ್ ಸೆಕ್ಯೂರಿಟಿ ಲ್ಯಾಬ್

ಶಾಸ್ತ್ರೋಕ್ತವಾಗಿ ಪ್ರಾರಂಭವಾದ ಬನಶಂಕರಿ ಜಾತ್ರೆ

ವಿಕಾಲಾಂಗರಿಗೆ ಉದ್ಯೋಗ ತರಬೇತಿ

ಕೆಪಿಎಸ್‌ಸಿ ನೇಮಕದಲ್ಲಿ ಅವ್ಯವಹಾರ: ಧರಣಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com