Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 10 January 2007 01:15 PM

ಮಕ್ಕಳ ಮಾಂಸ ತಿನ್ನುತ್ತಿದ್ದ ನೋಯ್ಡಾ ಹಂತಕರು

 

ಲಖನೌ: ದೇಶದಾದ್ಯಂತ ಗಮನ ಸೆಳೆದ ನೋಯ್ಡಾದ ಸರಣಿ ಹಂತಕರು ಮಕ್ಕಳನ್ನು ಅಪಹರಿಸಿ, ಲೈಂಗಿಕ ಶೋಷಣೆ ಮಾಡಿದ ಬಳಿಕ ಅವರನ್ನು ಹತ್ಯೆಗೈದು ತಿನ್ನುತ್ತಿದ್ದರು ಎನ್ನುವ ವಿಷಯ ತನಿಖೆಯ ಸಮಯದಲ್ಲಿ ದೃಢಪಟ್ಟಿದೆ.
 

ಉತ್ತರ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ಬುವಾ ಸಿಂಗ್ ಮಂಗಳವಾರ ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ.
 

ಮಂಗಳವಾರ ಪ್ರಮುಖ ಆರೋಪಿ ಮೋನಿಂದರ್ ಸಿಂಗ್ ಮತ್ತು ಅವನ ನೌಕರ ಸುರೇಂದ್ರನನ್ನು ಗುಜರಾತ್‌ನ ಗಾಂಧೀನಗರದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಬುಧವಾರ ನೋಯ್ಡಾದ ನ್ಯಾಯಾಲಯದಲ್ಲಿ ಆರೋಪಿಗಳನ್ನು ಹಾಜರು ಪಡಿಸಲಾಗುವುದು. ಬುಧವಾರ ಆರೋಪಿಗಳ ಪೊಲೀಸ್ ಹವಾಲತ್ ಮುಗಿಯಲಿದೆ.
 

ಮೋನಿಂದರ್ ಸಿಂಗ್‌ನ ಬಂಗಲೆಯಲ್ಲಿ ದಿನದಿನಕ್ಕೆ ಮತ್ತಷ್ಟು ಸಾಕ್ಷ್ಯಗಳು ದೊರೆಯುತ್ತಿವೆ. ಡಿ.೨೯ರಂದು ೧೯ ತಲೆಬುರುಡೆಗಳು ಮೋನಿಂದರ್ ಸಿಂಗ್‌ನ ಬಂಗಲೆಯ ಮೋರಿಯಲ್ಲಿ ದೊರೆತಿತ್ತು. ಪೊಲೀಸ್ ಶೋಧನೆ ಮುಂದುವರಿದಂತೆ ಇನ್ನಷ್ಟು ಮೂಳೆಗಳು ದೊರೆತಿದ್ದು ಇಲ್ಲಿಯವರೆಗೆ ಮೂವತ್ತಕ್ಕೂ ಹೆಚ್ಚು ಮೂಳೆಗಳು ದೊರೆತಿವೆ.
 

ಘಟನೆಗೆ ಸಂಬಂಧಿಸಿದಂತೆ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ಆರೋಪದ ಮೇಲೆ ಸಬ್ ಇನಸ್ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

 

ಇನ್ನಷ್ಟು

ಪಶ್ಚಿಮ ಬಂಗಾಳ ಬಂದ್ ಯಶಸ್ವಿ

ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ರಾಷ್ಟ್ರಪತಿ?

ಇಮ್ರಾನ್ ಬಂಧನ: ಬೆಳಕಿಗೆ ಬಂದ ಇನ್ನಷು ಮಾಹಿತಿ

ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ ಉಗ್ರಗಾಮಿ

ಬೆಂಗಳೂರಿನಲ್ಲಿ ಸೈಬರ್ ಸೆಕ್ಯೂರಿಟಿ ಲ್ಯಾಬ್

ಶಾಸ್ತ್ರೋಕ್ತವಾಗಿ ಪ್ರಾರಂಭವಾದ ಬನಶಂಕರಿ ಜಾತ್ರೆ

ವಿಕಾಲಾಂಗರಿಗೆ ಉದ್ಯೋಗ ತರಬೇತಿ

ಕೆಪಿಎಸ್‌ಸಿ ನೇಮಕದಲ್ಲಿ ಅವ್ಯವಹಾರ: ಧರಣಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com