|
ಮುಲಾಯಂ ಸರ್ಕಾರದ ಮೇಲೆ ತೂಗುತ್ತಿರುವ ಕತ್ತಿ
ನವದೆಹಲಿ: ಉತ್ತರ ಪ್ರದೇಶದ ಅಧಿಕಾರ ಚುಕ್ಕಾಣಿ
ಹಿಡಿಯಲು ಸಮಾಜವಾದಿ ಪಕ್ಷದೊಂದಿಗೆ ಕೈ ಜೋಡಿಸಿದ್ದ ರಾಷ್ಟ್ರೀಯ
ಲೋಕದಳ(ಆರ್‌ಎಲ್‌ಡಿ)ದ ನಾಲ್ವರು ಸಚಿವರು ಮೈತ್ರಿ ತೊರೆದಿದ್ದಾರೆ.
ತಮ್ಮ ರಾಜೀನಮೆಯನ್ನು ಆರ್‌ಎಲ್‌ಡಿ ಪಕ್ಷದ ಅಧ್ಯಕ್ಷ ಅಜಿತ್
ಸಿಂಗ್‌ಗೆ ಮಂಗಳವಾರ ಹಸ್ತಾಂತರಿಸಿದ್ದಾರೆ.
ಕಬ್ಬಿಗೆ ನ್ಯಾಯಯುತ ಬೆಲೆ ನೀಡಲು ಮತ್ತು ರಾಜ್ಯದಲ್ಲಿ ಶಿಸ್ತು
ಹಾಗೂ ನ್ಯಾಯ ಪಾಲನೆ ಮಾಡಲು ಸರ್ಕಾರ ವಿಫಲವಾಗಿದೆ ಎನ್ನುವ
ಕಾರಣಕ್ಕೆ ರಾಜೀನಾಮೆಯನ್ನು ನೀಡಲಾಗಿದೆ.
ಈ ಬೆಳವಣಿಗೆಯಿಂದ ಮುಲಾಯಂ ಸಿಂಗ್ ಯಾದವ್‌ರ ಸರ್ಕಾರ
ಸಂದಿಗ್ಧತೆಗೆ ಸಿಲುಕಿದೆ. ೪೦೧ ಸದಸ್ಯತ್ವ ಹೊಂದಿರುವ ಉತ್ತರ
ಪ್ರದೇಶ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷ ೧೬೭ ಸದಸ್ಯ
ಬಲವನ್ನು ಹೊಂದಿದೆ. ಕಾಂಗ್ರೆಸ್, ಬಿಎಸ್‌ಪಿ ಬಂಡಾಯ ಬಣ, ಆರ್‌ಎಲ್‌ಡಿ
ಮತ್ತು ಕೆಲವು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಮುಲಾಯಂ
ಸಿಂಗ್ ಯಾದವ್ ಸರ್ಕಾರ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೆ ನಡೆದ ಬಲಪರೀಕ್ಷೆಯಲ್ಲಿ ೨೪೨ ಮತಗಳನ್ನು
ಮುಲಾಯಂ ಸಾಬೀತುಪಡಿಸಿದ್ದರು.
ಇನ್ನಷ್ಟು
ಪಶ್ಚಿಮ ಬಂಗಾಳ ಬಂದ್
ಯಶಸ್ವಿ
ವಿಶ್ವ ಕನ್ನಡ ಸಮ್ಮೇಳನ
ಉದ್ಘಾಟನೆಗೆ ರಾಷ್ಟ್ರಪತಿ?
ಇಮ್ರಾನ್ ಬಂಧನ:
ಬೆಳಕಿಗೆ ಬಂದ ಇನ್ನಷು ಮಾಹಿತಿ
ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ
ಉಗ್ರಗಾಮಿ
ಬೆಂಗಳೂರಿನಲ್ಲಿ ಸೈಬರ್
ಸೆಕ್ಯೂರಿಟಿ ಲ್ಯಾಬ್
ಶಾಸ್ತ್ರೋಕ್ತವಾಗಿ
ಪ್ರಾರಂಭವಾದ ಬನಶಂಕರಿ ಜಾತ್ರೆ
ವಿಕಾಲಾಂಗರಿಗೆ ಉದ್ಯೋಗ
ತರಬೇತಿ
ಕೆಪಿಎಸ್‌ಸಿ ನೇಮಕದಲ್ಲಿ
ಅವ್ಯವಹಾರ: ಧರಣಿ
|