Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 10 January 2007 03:24 PM

ಲಂಚಕೋರ ಸಂಸದರ ವಜಾ ಸರಿ: ಸುಪ್ರೀಂ ಕೋರ್ಟ್

 

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ೧೧ ಸಂಸದರನ್ನು ವಜಾಗೊಳಿಸಿದ ಸಂಸತ್ತಿನ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ನೀಡಿದ ನಿರ್ಣಯದಲ್ಲಿ ಎತ್ತಿ ಹಿಡಿದಿದೆ.
 

ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಂಸತ್ತು ನಿಯೋಜಿಸಿದ ತನಿಖಾ ಆಯೋಗ ತಾವು ನಿರ್ದೋಶಿಗಳು ಎಂದು ಸಾಬೀತು ಪಡಿಸಲು ಸಾಕಷ್ಟು ಕಾಲಾವಕಾಶ ನೀಡದೆ ತಮ್ಮನ್ನು ವಜಾಗೊಳಿಸುವ ನಿರ್ಣಯ ಕೈಗೊಂಡಿದೆ ಎಂದು ಲಂಚ ಪಡೆದು ಪ್ರಶ್ನೆ ಕೇಳುವ ಆರೋಪ ಹೊತ್ತ ಸಂಸದರು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
 

ಸರ್ವೋಚ್ಚ ನ್ಯಾಯಾಲಯದ ಐದು ಸದಸ್ಯರನ್ನು ಒಳಗೊಂಡ ನ್ಯಾಯ ಪೀಠ ೪-೧ ಬಹುಮತದಲ್ಲಿ ಲಂಚಕೋರ ಸಂಸದರನ್ನು ವಜಾಗೊಳಿಸಿದ ಸಂಸತ್ತು ನಿರ್ಣಯ ಸರಿಯಾದುದು. ಪ್ರಶ್ನೆ ಕೇಳಲು ಲಂಚ ಪಡೆಯುವಂಥ ತಪ್ಪು ಕೆಲಸ ಮಾಡಿದ ಸಂಸದರನ್ನು ವಜಾಗೊಳಿಸುವ ಅಧಿಕಾರ ಸಂಸತ್ತಿಗೆ ಇದ್ದೇ ಇದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
 

ಸುದ್ದಿ ವಾಹಿನಿಯೊಂದು ಬಿಜೆಪಿಯ ಆರು, ಬಿಎಸ್‌ಪಿಯ ಮೂರು ಮತ್ತು ಕಾಂಗ್ರೆಸ್ ಹಾಗೂ ಆರ್‌ಜೆಡಿಯ ಒಬ್ಬ ಸದಸ್ಯರು ಲಂಚ ಪಡೆಯುತ್ತಿದ್ದ ವಿಡಿಯೋ ಚಿತ್ರೀಕರಣವನ್ನು ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ೨೦೦೫ರಲ್ಲಿ ೧೦ ಸಂಸದರು ಮತ್ತು ಒಬ್ಬ ರಾಜ್ಯಸಭಾ ಸದಸ್ಯರನ್ನು ಸಂಸತ್ತು ವಜಾಗೊಳಿಸಿತ್ತು.

 

ಇನ್ನಷ್ಟು

ಪಶ್ಚಿಮ ಬಂಗಾಳ ಬಂದ್ ಯಶಸ್ವಿ

ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ರಾಷ್ಟ್ರಪತಿ?

ಇಮ್ರಾನ್ ಬಂಧನ: ಬೆಳಕಿಗೆ ಬಂದ ಇನ್ನಷು ಮಾಹಿತಿ

ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ ಉಗ್ರಗಾಮಿ

ಬೆಂಗಳೂರಿನಲ್ಲಿ ಸೈಬರ್ ಸೆಕ್ಯೂರಿಟಿ ಲ್ಯಾಬ್

ಶಾಸ್ತ್ರೋಕ್ತವಾಗಿ ಪ್ರಾರಂಭವಾದ ಬನಶಂಕರಿ ಜಾತ್ರೆ

ವಿಕಾಲಾಂಗರಿಗೆ ಉದ್ಯೋಗ ತರಬೇತಿ

ಕೆಪಿಎಸ್‌ಸಿ ನೇಮಕದಲ್ಲಿ ಅವ್ಯವಹಾರ: ಧರಣಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com