|
ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ರಾಷ್ಟ್ರಪತಿ?
ಬೆಳಗಾವಿ: ಫೆಬ್ರವರಿ ಕೊನೆಯ ವಾರದಲ್ಲಿ ಬೆಳಗಾವಿಯಲ್ಲಿ
ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಯನ್ನು
ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ನೆರವೇರಿಸಲು ರಾಜ್ಯ ಸರ್ಕಾರ
ಚಿಂತಿಸುತ್ತಿದೆ.
ವಿಶ್ವ ಕನ್ನಡ ಸಮ್ಮೇಳನಕ್ಕೆ ರಾಷ್ಟ್ರವ್ಯಾಪಿ ಪ್ರಾಮುಖ್ಯತೆ
ದೊರಕಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ರಾಷ್ಟ್ರಪತಿಯವರನ್ನು
ಆಹ್ವಾನಿಸಲು ಯೋಜಿಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸುಮಾರು ೩೫ ಸಾವಿರ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ
ಆಗಮಿಸಬಹುದು ಎಂದು ಸರ್ಕಾರ ನಿರೀಕ್ಷಿಸುತ್ತಿದೆ.
ಸಮ್ಮೇಳನಕ್ಕೆ ಆಗಮಿಸಿದವರ ವಾಸ್ತವ್ಯಕ್ಕಾಗಿ ಜಿಲ್ಲಾಡಳಿತ ಹೊಟೆಲ್,
ಕಲ್ಯಾಣ ಮಂಪಟ, ವಸತಿಗೃಹಗಳನ್ನು ಕಾಯ್ದಿರಿಸಿದೆ. ಅಲ್ಲದೆ, ಪಟ್ಟಣದ
ಹೊರ ವಲಯದಲ್ಲಿ ಸುಮಾರು ೩ ಸಾವಿರ ಜನರಿಗೆ ಆಗುವಷ್ಟು
ಗುಡಾರಗಳನ್ನು ನಿರ್ಮಿಸಲಿದೆ.
ಜನವರಿ ೧೧ರಂದು ಬೆಂಗಳೂರಿನಲ್ಲಿ ಸಮ್ಮೇಳನಕ್ಕೆ ಅಂತಿಮ ರೂಪ
ಕೊಡಲು ಉನ್ನತ ಮಟ್ಟದ ಸಭೆ ಕರೆಯಲಾಗಿದೆ.
ಯುಕೆ ಕನ್ನಡ ಸಂಘದ ಅಧ್ಯಕ್ಷೆ ಡಾ. ಭಾನುಮತಿ
ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಯುಕೆ, ಯುಎಸ್‌ಎ, ಸಿಂಗಾಪೂರ್,
ಬಹರೇನ್, ಗಲ್ಫ್ ದೇಶಗಳ ಕನ್ನಡಿಗರನ್ನು ಸಮ್ಮೇಳನಕ್ಕೆ
ಆಹ್ವಾನಿಸಲಾಗಿದೆ. ಅಲ್ಲದೆ ಭಾರತದಲ್ಲಿರುವ ಇತರ ದೇಶಗಳ
ರಾಯಭಾರಿಗಳನ್ನೂ ಆಹ್ವಾನಿಸುವ ಉದ್ದೇಶವಿದೆ ಎಂದು ಸರ್ಕಾರಿ
ಮೂಲಗಳು ತಿಳಿಸಿವೆ.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್‌ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|