|
ಪಶ್ಚಿಮ ಬಂಗಾಳ ಬಂದ್ ಯಶಸ್ವಿ
ನಂದಿಗ್ರಾಮ್: ನಂದಿಗ್ರಾಮಸ್ಥರು ಮತ್ತು ಸಿಪಿಐ(ಎಂ)
ಬೆಂಬಲಿಗರೊಂದಿಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ ೮ ಜನ
ಮೃತಪಟ್ಟಿದ್ದಾರೆ. ಈ ಹಿಂಸಾಚಾರ ವಿರೋಧಿಸಿ ಸೋಮವಾರ ಪಶ್ಚಿಮ
ಬಂಗಾಳದಾದ್ಯಂತ ಬಂದ್‌ಗೆ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್
ಪಕ್ಷಗಳು ಬಂದ್‌ಗೆ ಕರೆ ನೀಡಿತ್ತು. ಬಂದ್ ಯಶಸ್ವಿಯಾಗಿದ್ದು
ಅಂಗಡಿಗಳನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸುತ್ತಿದ್ದ ೩೫೦
ಜನರನ್ನು ಬಂಧಿಸಲಾಗಿದೆ.
ಬಂದ್ ಸಂಪೂರ್ಣ ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಘಟನೆ
ನಡೆದಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಐಜಿಪಿ ರಾಜ್
ಕನೋಜಿಯಾ ತಿಳಿಸಿದ್ದಾರೆ.
ಬುದ್ಧದೇವ್ ಭಟ್ಟಾಚಾರ್ಯರ ಸರ್ಕಾರದ ಆಡಳಿತ ವೈಖರಿಯನ್ನು
`ವಿಶೇಷ ಆರ್ಥಿಕ ವಲಯ ನಿರ್ಮಾಣ'ದ ವಿರೋಧಿಗಳು ವಿರೋದಿಸಿಧಾಗ ಈ
ಘರ್ಷಣೆ ಸಂಭವಿಸಿದೆ.
ಸಿಪಿಐ(ಎಂ) ಮತ್ತು ಭೂ ಉಚ್ಛಾಟನಾ ವಿರೋಧಿ ಸಂಘ (ಲ್ಯಾಂಡ್ ಎವಿಕ್ಷನ್
ರೆಸಿಸ್ಟನ್ಸ್ ಕಮಿಟಿ)ಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ
ಎಂಟು ಜನ ಮೃತಪಟ್ಟಿದ್ದಾರೆ ಎಂದು ಊಹಿಸಲಾಗಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
ಬುದ್ಧದೇವ ಭಟ್ಟಾಚಾರ್ಯ `ವಿರೋಧ ಪಕ್ಷವು ಗಂಭೀರ
ಸಮಸ್ಯೆಯನ್ನು ಹುಟ್ಟುಹಾಕುತ್ತಿದೆ. ಅಂತಹ ಸಮಸ್ಯೆ
ಸೃಷ್ಟಿಸುವವರನ್ನು ಗುರುತಿಸಬೇಕು' ಎಂದು ಹೇಳಿದ್ದಾರೆ.
ನಂದಿಗ್ರಾಮದ ನಿವಾಸಿ ರಫೀಕ್ `ನಾವು ನಮ್ಮ ಭೂಮಿಯನ್ನು
ಉಳಿಸಿಕೊಳ್ಳುವ ವಚನಕ್ಕೆ ಬದ್ಧರಾಗಿದ್ದೇವೆ. ನಮ್ಮ ಕೆಲವು
ಸಹೋದರರು ಈಗಾಗಲೇ ಕೊಲ್ಲಲ್ಪಟ್ಟಿದ್ದಾರೆ. ಆದರೆ ನಾವು ನಮ್ಮ
ಹೋರಾಟವನ್ನು ನಿಲ್ಲಿಸೆವು' ಎಂದು ಹೇಳುತ್ತಾರೆ.
ಹಿನ್ನೆಲೆ: ಪಶ್ಚಿಮ ಬಂಗಾಳದ ಸರ್ಕಾರವು `ವಿಶೇಷ ಆರ್ಥಿಕ
ವಲಯ' ನಿರ್ಮಿಸಲು ನಂದಿಗ್ರಾಮದ ಸುಮಾರು ೧೪ ಸಾವಿರ ಎಕರೆ
ಪ್ರದೇಶವನ್ನು ಯಾವುದೇ ಮುಂಚಿತ ನೋಟಿಸ್ ನೀಡದೆ
ಆಕ್ರಮಿಸಿಕೊಳ್ಳಲು ಪ್ರಯತ್ನಿಸಿತ್ತು. ಇದನ್ನು ಸ್ಥಳೀಯ ಜನತೆ
ವಿರೋಧಿಸುತ್ತಿದ್ದಾರೆ.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್‌ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|