|
ರಂಗಕರ್ಮಿಗಳ ಉಪವಾಸ ಸತ್ಯಾಗ್ರಹ
ಬೆಂಗಳೂರು: ಜನವರಿ ೫ ೨೦೦೭ ಶುಕ್ರವಾರ ಬೆಳಿಗ್ಗೆ
ಹತ್ತರಿಂದ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ಕನ್ನಡದ
ರಂಗಕರ್ಮಿಗಳು ಶ್ರೀ ಪ್ರಸನ್ನ ಅವರ ನೇತೃತ್ವದಲ್ಲಿ ಉಪವಾಸ
ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ. ರಾಷ್ಟ್ರಕವಿ ಜಿ.ಎಸ್.
ಶಿವರುದ್ರಪ್ಪನವರು ರಂಗಕರ್ಮಿಗಳನ್ನು ಆಶೀರ್ವದಿಸಿ
ಸತ್ಯಾಗ್ರಹಕ್ಕೆ ಚಾಲನೆ ನೀಡುವವರಿದ್ದಾರೆ
ಭಾರತದ ಎಲ್ಲ ರಾಷ್ಟ್ರಭಾಷೆಗಳ ರಂಗಭೂಮಿಯನ್ನು ರಾಷ್ಟ್ರೀಯ
ರಂಗಭೂಮಿ ಎಂದು ಮಾನ್ಯತೆ ನೀಡುವುದು ಮತ್ತು ಭಾರತದ
ಎಲ್ಲ ಸರ್ಕಾರಿ ಶಾಲೆಗಳಲ್ಲಿ, ಶಿಕ್ಷಣದಲ್ಲಿ ರಂಗಭೂಮಿ ಕಾರ್ಯಕ್ರಮ
ಜಾರಿಗೆ ತರಬೇಕೆನ್ನುವುದು ರಂಕ ಕರ್ಮಿಗಳ ಬೇಡಿಕೆಯಾಗಿದೆ.
  
ರಂಗಭೂಮಿ ಹಾಗೂ ಮಾತೃಭಾಷೆಗಳು ಒಂದಕ್ಕೊಂದು
ಪೂರಕವಾಗಿವೆ. ರಂಗಭೂಮಿ, ಮಾತೃಭಾಷೆ ಹಾಗೂ ಪ್ರಾಥಮಿಕ
ಶಿಕ್ಷಣ ಒಂದಕ್ಕೊಂದು ಪೂರಕವಾಗಿ ನಿಂತಾಗ ಮಾತ್ರ ನಮ್ಮ
ಸಮಾಜವು ಆರೋಗ್ಯಕರವಾಗಿ ಬೆಳೆಯಬಲ್ಲದು. ಶಿಕ್ಷಣ ಕ್ಷೇತ್ರದ
ಬೆಂಬಲವಿಲ್ಲದೆ ಮಾತೃಭಾಷಾ ರಂಗ ಚಳುವಳಿಗಳು ಬದುಕಲಾರವು.
ರಂಗಕರ್ಮಿಗಳು ಟೆಲಿವಿಷನ್ ಹಾಗು ಸಿನಿಮಾದತ್ತ ಗುಳೆ
ಹೋಗುತ್ತಿರುವುದನ್ನು ತಡೆಯಬೇಕಾದರೆ ಅವರಿಗೆ
ರಂಗಭೂಮಿಯಲ್ಲೇ ಉದ್ಯೋಗ ದೊರಕಬೇಕು. ಅಂತಹ ಉದ್ಯೋಗ
ಲಭ್ಯವಿರುವುದು ಶಿಕ್ಷಣ ರಂಗದಲ್ಲಿ ಮಾತ್ರ ಎಂದು ಪ್ರಕಟಣೆಯಲ್ಲಿ
ತಿಳಿಸಿವೆ.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್‌ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|