|
ಉರುಳಿಗೆ ಕೊರಳು ನೀಡಿದ ಸದ್ದಾಂ
ಬಾಗ್ದಾದ್: ಅಮೆರಿಕಾದ ವಿರುದ್ಧ ಧೈರ್ಯದಿಂದ ಸೆಡ್ಡು
ಹೊಡೆದು ನಿಂತ, ಸಾವಿರಾರು ಮುಗ್ಧ ಜನರ ನರಮೇಧಕ್ಕೆ
ಕಾರಣವಾದ ಸದ್ದಾಂ ಹುಸೇನ್‌ರನ್ನು ಶನಿವಾರ ಬೆಳಿಗ್ಗೆ
ಗಲ್ಲಿಗೇರಿಸಲಾಯಿತು.
೧೯೮೨ರಲ್ಲಿ ೧೪೮ ಷಿಯಾ ಮುಸ್ಲಿಂರ ನರಮೇಧ ನಡೆಸಿದ ಆರೋಪದ
ಮೇಲೆ ಸದ್ದಾಂರಿಗೆ ಮರಣದಂಡನೆ ವಿಧಿಸಲಾಗಿತ್ತು.
ಬಾಗ್ದಾದ್‌ನ ಅಜ್ಞಾತ ಸ್ಥಳವೊಂದರಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ
೬ ಗಂಟೆ (ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ ೮.೩೦)ಕ್ಕೆ
ಸದ್ದಾಂರನ್ನು ನೇಣಿಗೇರಿಸಲಾಯಿತು.
ಗಲ್ಲಿಗೇರುವ ಸಂದರ್ಭದಲ್ಲೂ ಯಾವುದೇ ಭಾವನೆ ತೋರದೆ
ಸದ್ದಾಂ ನಿರ್ಲಿಪ್ತರಾಗಿದ್ದರು. ಮುಸುಕು ಧರಿಸಲು ಕೂಡಾ ಅವರು
ನಿರಾಕರಿಸಿದರು.
ಜನವರಿ ೨೫ರ ಒಳಗೆ ಸದ್ದಾಂ ಗಲ್ಲು ಏರುವ ಸಾಧ್ಯತೆ ಇಲ್ಲ ಎಂದು ಈ
ಮೊದಲು ಇರಾಕ್ ತಿಳಿಸಿತ್ತು. ಆದರೆ ಏಕಾಏಕಿ ಸದ್ದಾಂರಿಗೆ ನೇಣು
ಬಿಗಿಯಲಾಗಿದೆ.
`ಇರಾಕ್‌ನಲ್ಲಿ ಶಾಂತಿಯುತ ಪ್ರಜಾಪ್ರಭುತ್ವ ಸ್ಥಾಪಿಸಲು ಇದೊಂದು
ಮೈಲಿಗಲ್ಲಾಗಿದೆ' ಎಂದು ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಷ್ ಅಭಿಪ್ರಾಯ
ಪಟ್ಟಿದ್ದಾರೆ.
ತನ್ನ ಆಡಳಿತದ ಅವಧಿಯಲ್ಲಿ ಭಾರತದ ಮಿತ್ರರಾಗಿದ್ದ ಸದ್ದಾಂ
ಹುಸೇನರನ್ನು ಮರಣ ದಂಡನೆ ವಿಧಿಸಿದ್ದನ್ನು ಭಾರತ
ದುರದೃಷ್ಟಕರ ಎಂದು ಹೇಳಿದೆ.
ರವಿವಾರ ಬೆಳಗಿನ ಜಾವ ಸದ್ದಾಂರ ಹುಟ್ಟೂರು ತಿಕ್ರಿತ್ ಸಮೀಪದ ಔಜಾ
ಎನ್ನುವಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಇನ್ನಷ್ಟು
ಸಹಪಾಠಿಯನ್ನೇ ಕೊಂದ
ವಿದ್ಯಾರ್ಥಿಗಳು
ಹೊಸ ರೈಲುಮಾರ್ಗಕ್ಕೆ
ರಾಜ್ಯದ ಮನವಿ
ಕೃಷಿ ಉತ್ಪನ್ನಗಳ ಬೆಲೆ
ಕುಸಿಯಬಹುದು: ಪವಾರ್
ಯಶ್‌ರ ಚಿತ್ರದಲ್ಲಿ
ಮರಳಲಿರುವ ಮಾಧುರಿ
ಜೆಸ್ಸಿಕಾ ಲಾಲ್ ಹತ್ಯೆ:
ಮನುಗೆ ಜೀವಾವಧಿ ಶಿಕ್ಷೆ
ಕಾರ್ಟೂನ್ ಪ್ರಿಯರಿಗೆ
ವಿಷಾದದ ಸುದ್ದಿ
ಚಂಪಾರ ವರ್ತನೆ ಖಂಡಿಸಿದ
ಕುಮಾರಸ್ವಾಮಿ
ಜೆಸ್ಸಿಕಾ ಲಾಲ್ ಹತ್ಯೆ:
ಮನು ದೋಷಿ
|