|
ಸಾರಾಯಿ ನಿಷೇಧಕ್ಕೆ ಗಂಭೀರ ಚಿಂತನೆ
ಬೆಂಗಳೂರು: ರಾಜ್ಯದಲ್ಲಿ ಸಾರಾಯಿ ನಿಷೇಧಿಸುವ ಕುರಿತು
ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಉಪ ಮುಖ್ಯಮಂತ್ರಿ
ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ಶನಿವಾರ ಆರ್‌ಬಿಎ ಎನ್‌ಎಂಎಸ್ ಆಟದ ಮೈದಾನದಲ್ಲಿ ಕೇಶವ
ಸೇವಾ ಸಮಿತಿ ಹಿಂದುಳಿದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ
`ಬಾಲಸಂಗಮ೨೦೦೬' ಕಾರ್ಯಕ್ರಮದ ಸಮಾರೋಪ ಸಮಾರಂಭ
ಉದ್ಘಾಟಿಸಿ ಮಾತನಾಡುತ್ತಿದ್ದರು.
`ಸಾರಾಯಿ ಮಾರಾಟದಿಂದ ಸರಕಾರಕ್ಕೆ ಪ್ರತಿವರ್ಷ ೨ ಸಾವಿರ ಕೋಟಿ ರೂ.
ಆದಾಯ ಬರುತ್ತಿದೆ. ಆದರೆ ಇದು ಪಾಪದ ಹಣ. ಇದನ್ನು ಬಳಸಿ
ನಾಡನ್ನು ಕಟ್ಟುವ ಅಗತ್ಯ ಇಲ್ಲ. ಈ ಹಣ ಬಳಸಿ ರಾಜ್ಯದ ಅಭಿವೃದ್ಧಿ
ಕಾರ್ಯಕೈಗೊಂಡರೆ ಒಳ್ಳೆಯದಾಗದು. ಭಾನುವಾರ ಈ ಕುರಿತು
ನಗರದಲ್ಲಿ ಪತ್ರಿಕಾಗೋಷ್ಠಿ ಕರೆದು ಸರಕಾರದ ಸ್ಪಷ್ಟ ನಿಲುವು
ತಿಳಿಸುವುದಾಗಿ ಅವರು ತಿಳಿಸಿದರು.
ಇದಲ್ಲದೆ, ರಾಜ್ಯದಲ್ಲಿರುವ ಕೊಳೆಗೇರಿಗಳನ್ನು ಅಭಿವೃದ್ಧಿಪಡಿಸಲು
ನೂತನ ಯೋಜನೆಗಳನ್ನು ರೂಪಿಸಲಾಗಿದೆ. ಎರಡು ವರ್ಷದಲ್ಲಿ ಎಲ್ಲ
ಕೊಳಗೇರಿಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು
ಯಡಿಯೂರಪ್ಪ ತಿಳಿಸಿದರು.
ಸಮಾರಂಭದಲ್ಲಿ ಗಾಯಕ ಸಿ. ಅಶ್ವತ್ಥ್ ಹಾಡಿ ಮಕ್ಕಳನ್ನು
ರಂಜಿಸಿದರು. ಡಿಜಿಪ್ರೋ ಸಂಸ್ಥೆ ಆಡಳಿತ ನಿರ್ದೇಶಕ ಎಸ್.
ರಾಮಚಂದ್ರನ್, ಶಾಸಕ ನಿರ್ಮಲ್ ಸುರಾನಾ ಹಾಗೂ ಸಮಿತಿಯ
ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ. ಮೋಹನ್‌ಕುಮಾರ್ ಸಭೆಯಲ್ಲಿ
ಉಪಸ್ಥಿತರಿದ್ದರು.
ಇನ್ನಷ್ಟು
ಸಹಪಾಠಿಯನ್ನೇ ಕೊಂದ
ವಿದ್ಯಾರ್ಥಿಗಳು
ಹೊಸ ರೈಲುಮಾರ್ಗಕ್ಕೆ
ರಾಜ್ಯದ ಮನವಿ
ಕೃಷಿ ಉತ್ಪನ್ನಗಳ ಬೆಲೆ
ಕುಸಿಯಬಹುದು: ಪವಾರ್
ಯಶ್‌ರ ಚಿತ್ರದಲ್ಲಿ
ಮರಳಲಿರುವ ಮಾಧುರಿ
ಜೆಸ್ಸಿಕಾ ಲಾಲ್ ಹತ್ಯೆ:
ಮನುಗೆ ಜೀವಾವಧಿ ಶಿಕ್ಷೆ
ಕಾರ್ಟೂನ್ ಪ್ರಿಯರಿಗೆ
ವಿಷಾದದ ಸುದ್ದಿ
ಚಂಪಾರ ವರ್ತನೆ ಖಂಡಿಸಿದ
ಕುಮಾರಸ್ವಾಮಿ
ಜೆಸ್ಸಿಕಾ ಲಾಲ್ ಹತ್ಯೆ:
ಮನು ದೋಷಿ
|