|
ಸೆರೆಸಿಕ್ಕಿದ ಲಹಿರಿ ಹಂತಕರು
ಬೆಂಗಳೂರು: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಅದೀಪ್
ಲಹಿರಿ ಅವರ ಕೊಲೆಗೈದ ಇಬ್ಬರು ಹಂತಕರನ್ನು ಶನಿವಾರ ಬೆಳಗ್ಗೆ
ನಗರ ಪೊಲೀಸರು ಬಂಧಿಸಿದ್ದಾರೆ.
ವರ್ತೂರು ಶಾರದಾ ವಿದ್ಯಾಮಂದಿರ ಹತ್ತಿರದ ರಾಜು ಅಲಿಯಾಸ್
ಬಸವರಾಜು ಅಲಿಯಾಸ್ ರಾಜ್‌ಕುಮಾರ್(೨೩) ಮತ್ತು ತುಮಕೂರು
ಜಿಲ್ಲೆಯ ಭೈರಸಂದ್ರದ ವೆಂಕಟೇಶ್(೨೮) ಎಂಬುವವರೇ
ಬಂಧಿತರು.
ಹಣಕ್ಕಾಗಿಯೇ ಈ ಕೊಲೆ ಮಾಡಲಾಗಿದ್ದು ಕ್ರೆಡಿಟ್ ಮತ್ತು ಎಟಿಎಂ
ಕಾರ್ಡ್‌ಗಳು ಬಂಧಿತರನ್ನು ಕಂಡು ಹಿಡಿಯಲು ಮಹತ್ವದ ಸಹಾಯ
ಮಾಡಿವೆ.
ಬಂಧಿತರು ಕ್ರೆಡಿಟ್ ಕಾರ್ಡ್ ಬಳಸಿ ಬೆಲೆಬಾಳುವ ವಸ್ತುಗಳನ್ನು
ಖರೀದಿಸಿದ್ದರು. ಇದು ತನಿಖಾ ತಂಡ ಅಪರಾಧಿಗಳವರೆಗೆ ಹೋಗಲು
ಸಹಾಯ ಮಾಡಿತು.
ಇಬ್ಬರೂ ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಲಹಿರಿ ಕೊಲೆ ಪ್ರಕರಣವನ್ನು ಬಿಡಿಸಲು ಪೂರ್ವ ವಲಯ ಡಿಸಿಪಿ
ಮುನಿಸ್ವಾಮಿ, ಅಪರಾಧ ವಲಯದ ಡಿಸಿಪಿ ಬಿ.ಆರ್.ರವಿಕಾಂತೇಗೌಡರ
ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಆರೋಪಿಗಳನ್ನು ಸೆರೆ ಹಿಡಿದ ಪೊಲೀಸ್ ತಂಡಕ್ಕೆ ೧೦ ಸಾವಿರ ರೂ.
ಬಹುಮಾನ ನೀಡುವುದಾಗಿ ಆಯುಕ್ತ ನೀಲಂ ಅಚ್ಯುತ ರಾವ್
ಘೋಷಿಸಿದ್ದಾರೆ.
ಇನ್ನಷ್ಟು
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
ಬೌದ್ಧರ ಯಾತ್ರಾ
ಸ್ಥಳಗಳಿಗೆ ವಿಶೇಷ ರೈಲು
ಸುಪ್ರೀಂ ಕೋರ್ಟ್‌ಗೆ ಹೊಸ
ಮುಖ್ಯನ್ಯಾಯಾಧೀಶ
ಸಮಾರೋಪಕ್ಕೆ
ಆಗಮಿಸಲಿರುವ ಮುಖ್ಯಮಂತ್ರಿ
ದೇವೇಗೌಡರನ್ನು
ಹೊರನೂಕಿದ ಜೆಡಿಎಸ್
ಸಹಪಾಠಿಯನ್ನೇ ಕೊಂದ
ವಿದ್ಯಾರ್ಥಿಗಳು
|