|
ಹೊಸ ರೈಲುಮಾರ್ಗಕ್ಕೆ ರಾಜ್ಯದ ಮನವಿ
ಬೆಂಗಳೂರು: ರಾಜ್ಯಕ್ಕೆ ಐದು ಹೊಸ ರೈಲು ಮಾರ್ಗ
ನಿರ್ಮಿಸಲು ಅನಿಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ
ಮನವಿ ಮಾಡಿಕೊಂಡಿದೆ.
ಚಾಮರಾಜನಗರ-ಕನಕಪುರ-ಬೆಂಗಳೂರು,
ಕಡೂರು-ಚಿಕ್ಕಮಗಳೂರು, ತಾಳಗುಪ್ಪ-ಹೊನ್ನಾವರ,
ಶಹಬಾದ್-ಬಾಗಲಕೋಟೆ-ಕುಡುಪಿ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ
ನಿರ್ಮಿಸಲು ಮುಂದಿನ ಬಜೆಟ್‌ನಲ್ಲಿ ಮಂಜುರಾತಿ ನೀಡುವಂತೆ ರೇಲ್ವೆ
ಇಲಾಖೆಯನ್ನು ಕೋರಿರುವುದಾಗಿ ರಾಜ್ಯ ಮೂಲಭೂತ ಸೌಕರ್ಯ
ಸಚಿವ ಶ್ರೀರಾಮುಲು ಗುರುವಾರ ತಿಳಿಸಿದ್ದಾರೆ.
`ಬೆಂಗಳೂರು ಮೈಸೂರು ನಡುವಿನ ಜೋಡಿಮಾರ್ಗ ಮಾರ್ಚ
ತಿಂಗಳಿನಲ್ಲಿ ಪೂರ್ತಿಗೊಂಡ ನಂತರ ಪ್ರಾಯೋಗಿಕ ರೈಲು
ಸಂಚಾರವನ್ನು ಪ್ರಾರಂಭಿಸಲಾಗುವುದು. ಬೆಳಗಾವಿ ಮತ್ತು
ಗುಲ್ಬರ್ಗಾ ವಿಮಾನ ನಿಲ್ದಾಣಗಳನ್ನು ಅಭಿವೃದ್ದಿಗೊಳಿಸಲು ತಲಾ ೬.೪೪
ಕೋಟಿ ರೂ. ಮತ್ತು ೧ ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ, ಬಳ್ಳಾರಿ, ತುಮಕೂರು, ದಾವಣಗೆರೆ ಹೀಗೆ ಮೊದಲಾದ
ಕಡೆ ರೇಲ್ವೆ ಮೇಲು ಸೇತುವೆ ನಿರ್ಮಾಣಕ್ಕಾಗಿ ೨೫ ಕೋಟಿ ರೂ.
ಬಿಡುಗಡೆ ಮಾಡಿದ್ದಾಗಿ ರಾಮುಲು ತಿಳಿಸಿದ್ದಾರೆ.
ಇನ್ನಷ್ಟು
ಜೆಸ್ಸಿಕಾ ಲಾಲ್ ಹತ್ಯೆ:
ಮನು ದೋಷಿ
ಅಕ್ರಮ ಆಸ್ತಿ ಪ್ರಕರಣ
ಗೆದ್ದ ಲಾಲೂ ದಂಪತಿಗಳು
ರಜತ ಕಳೆದುಕೊಳ್ಳುವ
ಭಯದಲ್ಲಿ ಶಾಂತಿ
ಗೌಡರ ಜೊತೆ ಸೇರುವ
ಆಸೆ ಇತ್ತು ಆದರೆ...
ಫೆ.೧೧ಕ್ಕೆ ವಿಶ್ವ ಹಿಂದೂ
ಅಧಿವೇಶನ
ರಾಜ್ಯದ ಮೇಲೆ ಚುನಾವಣಾ
ಆಯೋಗದ ದೂರು
ಬಿಜೆಪಿ ಜಿಲ್ಲಾಮುಖಂಡರ
ಅಭಿಪ್ರಾಯ ಕೇಳಿ ಮೈತ್ರಿ
|