|
ಚಂಪಾರ ವರ್ತನೆ ಖಂಡಿಸಿದ ಕುಮಾರಸ್ವಾಮಿ
ಬೆಂಗಳೂರು: ಶಿವಮೊಗ್ಗದಲ್ಲಿ ನಡೆಯುತ್ತಿರುವ ಅಖಿಲ
ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್
ಅಧ್ಯಕ್ಷ ಚಂದ್ರಶೇಖರ್ ಪಾಟೀಲ ಸಮ್ಮೇಳನದ ಹಿಂದಿನ ದಿನ
ಆಮಂತ್ರಣ ನೀಡಿರುವುದಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಂಪಾ
ಅವರ ಮೇಲೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳನ್ನು ೧೫
ದಿನಗಳ ಮೊದಲೇ ಆಮಂತ್ರಿಸುವುದು ಸಂಪ್ರದಾಯ ಮತ್ತು
ಶಿಷ್ಟಾಚಾರ. ಆದರೆ ಮುಖ್ಯಮಂತ್ರಿಯವರಿಗೆ ಆಹ್ವಾನ ಪತ್ರಿಕೆ
ಕಳಿಸದಿರುವ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿಯವರಿಂದ ತಿಳಿದು ಬಂದಾಗ
ಲಗುಬಗೆಯಿಂದ ಚಂಪಾ ಬೆಂಗಳೂರಿಗೆ ಧಾವಿಸಿ ಬಂದರು.
ಚಂಪಾ ಮಂಗಳವಾರ ಬೆಳಿಗ್ಗೆ ವಿಧಾನಸೌಧದಲ್ಲಿ
ಮುಖ್ಯಮಂತ್ರಿಯವರನ್ನು ಭೇಟಿಯಾದಾಗ `ನೀವು ನನಗೆ ಗೌರವ
ಕೊಡದಿದ್ದರೂ ಪರವಾಗಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾದರೂ ಗೌರವ
ನೀಡಿ' ಎಂದು ಹೇಳಿದರು.
ಮುಖ್ಯಮಂತ್ರಿಯವರನ್ನು ಓಲೈಸಲಾಗದೆ ಚಂಪಾ ಹಿಂದಿರುಗಿದರು
ಎಂದು ಮೂಲಗಳು ತಿಳಿಸಿವೆ.
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಜ್ಞಾನಪೀಠ ಪುರಸ್ಕೃತ
ಯು.ಆರ್.ಅನಂತಮೂರ್ತಿ ಇನ್ನೂ ಮುಂತಾದವರಿಗೆ ಚಂಪಾ ಆಹ್ವಾನ
ಪತ್ರಿಕೆ ನೀಡದೆ ಅವರ ಅಸಮಧಾನಕ್ಕೆ ಗುರಿಯಾಗಿದ್ದಾರೆ.
ಇನ್ನಷ್ಟು
ಜೆಸ್ಸಿಕಾ ಲಾಲ್ ಹತ್ಯೆ:
ಮನು ದೋಷಿ
ಅಕ್ರಮ ಆಸ್ತಿ ಪ್ರಕರಣ
ಗೆದ್ದ ಲಾಲೂ ದಂಪತಿಗಳು
ರಜತ ಕಳೆದುಕೊಳ್ಳುವ
ಭಯದಲ್ಲಿ ಶಾಂತಿ
ಗೌಡರ ಜೊತೆ ಸೇರುವ
ಆಸೆ ಇತ್ತು ಆದರೆ...
ಫೆ.೧೧ಕ್ಕೆ ವಿಶ್ವ ಹಿಂದೂ
ಅಧಿವೇಶನ
ರಾಜ್ಯದ ಮೇಲೆ ಚುನಾವಣಾ
ಆಯೋಗದ ದೂರು
ಬಿಜೆಪಿ ಜಿಲ್ಲಾಮುಖಂಡರ
ಅಭಿಪ್ರಾಯ ಕೇಳಿ ಮೈತ್ರಿ
|