Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 18 December 2006 11:56 AM

ಗೌಡರ ಜೊತೆ ಸೇರುವ ಆಸೆ ಇತ್ತು ಆದರೆ...

 

ಶಿವಮೊಗ್ಗ: `ದೇವೇಗೌಡರ ಜಾತ್ಯಾತೀತ ಜನತಾದಳದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸಿತ್ತು. ಆದರೆ ಕಾಂಗ್ರೆಸ್ ಹಾಗೂ ಕೋಮುವಾದಿ ಪಕ್ಷ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದರಿಂದ ನನ್ನ ನಿಲುವು ಬದಲಾಯಿತು' ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಎಸ್.ಬಂಗಾರಪ್ಪ ಹೇಳಿದ್ದಾರೆ. ಅವರು ಶಿವಮೊಗ್ಗದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
 

`ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಸರಿಯಾದ ನಾಯಕತ್ವವಿಲ್ಲದೆ ಸೊರಗುತ್ತಿದೆ. ಬಿಜೆಪಿ-ಜೆಡಿಎಸ್ ತಮ್ಮ ದುರಾಡಳಿತದಿಂದ ಈಗಾಗಲೇ ತನ್ನ ಹೆಸರು ಕೆಡಿಸಿಕೊಂಡಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಉತ್ತಮವಾದ ಭವಿಷ್ಯವಿದೆ' ಎಂದು ಆಶಾವಾದ ವ್ಯಕ್ತಪಡಿಸಿದರು.
 

`ಸಮಾಜವಾದಿ ಪಕ್ಷ ವಿಧಾನಸಭೆಯ ೨೦೦ಕ್ಕೂ ಹೆಚ್ಚು ಸ್ಥಾನಗಳಿಗೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಅಷ್ಟು ಅಗತ್ಯವಿದ್ದಲ್ಲಿ ಸಿಪಿಐ, ಸಿಪಿಎಂಗಳ ಜತೆಗೆ ಸಣ್ಣ ಪ್ರಮಾಣದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು' ಎಂದು ಬಂಗಾರಪ್ಪ ವಿವರಿಸಿದರು.
 

ಇನ್ನಷ್ಟು

ರಾಜ್ಯದ ಮೇಲೆ ಚುನಾವಣಾ ಆಯೋಗದ ದೂರು

ಬಿಜೆಪಿ ಜಿಲ್ಲಾಮುಖಂಡರ ಅಭಿಪ್ರಾಯ ಕೇಳಿ ಮೈತ್ರಿ

`ಲಾಡೆನ್'ಗೆ ಕಂಡಲ್ಲಿ ಗುಂಡಿಕ್ಕಲು ಸರ್ಕಾರ ಆಜ್ಞೆ

ರವಿವಾರ ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ

ಮಾನವಾಭಿವೃದ್ಧಿಯಲ್ಲಿ ಕರ್ನಾಟಕಕ್ಕೆ ಏಳನೆ ಸ್ಥಾನ

ಝಂಕ್ ಆಹಾರ ಕೋಲಾಗಳ ಮೇಲೆ ನಿರ್ಬಂಧ?

AIIMS ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com