|
ಬಿಜೆಪಿ ಜಿಲ್ಲಾಮುಖಂಡರ ಅಭಿಪ್ರಾಯದ ಮೇರೆಗೆ ಮೈತ್ರಿ
ಬೆಂಗಳೂರು: ಮುಂಬರಲಿರುವ ಸ್ಥಳೀಯ ಚುನಾವಣೆಗಳಲ್ಲಿ
ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರ ಕುರಿತು ಜಿಲ್ಲಾ
ಬಿಜೆಪಿ ಮುಖಂಡರ ಅಭಿಪ್ರಾಯ ತಿಳಿದು ನಂತರ ತೀರ್ಮಾನ
ತೆಗೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಡಿ.ವಿ
ಸದಾನಂದಗೌಡ ಹೇಳಿದ್ದಾರೆ.
ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಮಾಡಿಕೊಂಡಿರುವಂಥ
ಮೈತ್ರಿಯನ್ನು ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿಯೂ
ಮಾಡಿಕೊಳ್ಳಬೇಕೆ ಎನ್ನುವ ಬಗ್ಗೆ ೧೫ ದಿನಗಳೊಳಗೆ ಜಿಲ್ಲಾ
ಮುಖಂಡರಿಂದ ವರದಿ ತರಸಿಕೊಳ್ಳಲಾಗುವುದು ಎಂದು
ಸದಾನಂದಗೌಡ ಹೇಳಿದ್ದಾರೆ. ಅವರು ಶನಿವಾರ ಸಂಜೆ ಉಪ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಶಾಸಕರ
ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಸಭೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು
ನಿಗಮ-ಮಂಡಳಿಗಳ ನೇಮಕದ ಬಗ್ಗೆ ಚರ್ಚಿಸಲಾಯಿತು. ಇನ್ನು
ಕೆಲವು ದಿನ ಕಾದು ಜಾತ್ಯಾತೀತ ಜನತಾದಳದಿಂದ ಸರಿಯಾದ
ಪ್ರತಿಕ್ರಿಯೆ ಬಾರದಿದ್ದರೆ ಬಿಜೆಪಿ ಪಾಲಿನ ನಿಗಮ-ಮಂಡಳಿಗಳ ನೇಮಕ
ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸದಾನಂದಗೌಡ
ತಿಳಿಸಿದ್ದಾರೆ.
ಈ ಶಾಸಕರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ
ಕಾರ್ಯದರ್ಶಿ ಸಂಸದ ಅನಂತ್ ಕುಮಾರ್, ಓಂ ಪ್ರಕಾಶ್ ಮಾಥುರ್,
ಯಡಿಯೂರಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಇನ್ನಷ್ಟು
`ಲಾಡೆನ್'ಗೆ ಕಂಡಲ್ಲಿ
ಗುಂಡಿಕ್ಕಲು ಸರ್ಕಾರ ಆಜ್ಞೆ
ರವಿವಾರ ಬಿಜೆಪಿ
ರಾಜ್ಯಾಧ್ಯಕ್ಷರ ಚುನಾವಣೆ
ಮಾನವಾಭಿವೃದ್ಧಿಯಲ್ಲಿ
ಕರ್ನಾಟಕಕ್ಕೆ ಏಳನೆ ಸ್ಥಾನ
ಝಂಕ್ ಆಹಾರ ಕೋಲಾಗಳ
ಮೇಲೆ ನಿರ್ಬಂಧ?
AIIMS
ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ
ಹೊರಗಿಂದ ಬಂದ
ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ
ರಾಜ್ಯದಲ್ಲಿ ಮುಷ್ಕರಕ್ಕೆ
ನೀರಸ ಪ್ರತಿಕ್ರಿಯೆ
ಬಜೆಟ್‌ನ ಶೇ. ೨೦ರಷ್ಟು
ಕೃಷಿಗೆ ಮೀಸಲು
ಶ್ರೀಗಂಧ ಅಂಚೆ ಚೀಟಿ
ಬಿಡುಗಡೆ
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
|