|
ಹೊರಗಿಂದ ಬಂದ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ
ಬೆಂಗಳೂರು: ಕೇಂದ್ರದ ಸಿಬಿಎಸ್‌ಸಿ ಮತ್ತು ಐಸಿಎಸ್‌ಇ
ಪಠ್ಯಕ್ರಮದಿಂದ ರಾಜ್ಯ ಪಠ್ಯಕ್ರಮಕ್ಕೆ ವರ್ಗ ಮಾಡಿಕೊಂಡ
ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎನ್ನುವ
ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ರಾಜ್ಯ ಅನುಮತಿ ನೀಡಿದೆ.
ಗುರುವಾರ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು
ಕೈಗೊಳ್ಳಲಾಗಿದೆ.
`ಈಗ ೮ ರಿಂದ ೧೦ನೇ ತರಗತಿಯಲ್ಲಿ ಕಲಿಯುತ್ತಿರುವವರಿಗೆ ಈ
ನಿಯಮ ಅನ್ವಯವಾಗುವುದಿಲ್ಲ. ಆದರೆ ಹೊಸದಾಗಿ ೮ ನೇ ತರಗತಿಗೆ
ಸೇರುವವರಿಗೆ ಈ ನಿಯಮ ಅನ್ವಯವಾಗಲಿದೆ' ಎಂದು ಪ್ರಾಥಮಿಕ
ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಮೊದಲು ಕೇಂದ್ರ ಪಠ್ಯಕ್ರಮದಿಂದ ರಾಜ್ಯ ಪಠ್ಯಕ್ರಮಕ್ಕೆ
ಪರಿವರ್ತಿತಗೊಂಡ ವಿದ್ಯಾರ್ಥಿಗಳು ಐಚ್ಛಿಕ ಇಂಗ್ಲೀಷ್ ಭಾಷೆ ಅಥವ
ಕನ್ನಡವನ್ನು ಆರಿಸಿಕೊಳ್ಳಬಹುದಿತ್ತು.
ಅಗಸ್ಟ್‌ನಲ್ಲಿ ಸಾರ್ವಜನಿಕ ಶಿಕ್ಷಣ ಸಮಿತಿ ಐಚ್ಛಿಕ ಇಂಗ್ಲಿಷನ್ನು ರದ್ದು
ಪಡಿಸುವಂತೆ ಸುತ್ತೋಲೆ ಹೊರಡಿಸಿತ್ತು. ಇದರ ವಿರುದ್ಧ ವಿದ್ಯಾಥಿಗಳು
ಉಚ್ಚ ನ್ಯಾಯಾಲಯಲ್ಲಿ ಮನವಿ ಸಲ್ಲಿಸಿದಾಗ ನ್ಯಾಯಾಲಯ
ವಿದ್ಯಾರ್ಥಿಗಳ ಪರವಾಗಿ ಅಗಸ್ಟ್ ೧೦, ೨೦೦೬ರಲ್ಲಿ ತೀರ್ಮಾನ ನೀಡಿತ್ತು.
ಈಗ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರ್ಕಾರ
ಈ ನಿಯಮ ಜಾರಿ ತಂದಿದೆ.
ಇನ್ನಷ್ಟು
ಶ್ರೀಗಂಧ ಅಂಚೆ ಚೀಟಿ
ಬಿಡುಗಡೆ
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
ಇನ್‌ಫಿ ಕ್ಯಾಂಪಸಿನಲ್ಲಿ ಕಟ್ಟಡ
ಕುಸಿತ ಐವರ ಸಾವು
ಜನವರಿಯಲ್ಲಿ ಕಸ್ತೂರಿ
ವಾಹಿನಿ ಪ್ರಾರಂಭ
ಅಣುಬಂಧಕ್ಕೆ ಬಿಜೆಪಿ
ಅಸಮಧಾನ
ಯಶಸ್ವಿಯಾದ ರಕ್ಷಣಾ
ವೇದಿಕೆಯ ಕಾಲ್ನಡಿಗೆ ಜಾಥ
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
|