|
ಝಂಕ್ ಆಹಾರ ಕೋಲಾಗಳ ಮೇಲೆ ನಿರ್ಬಂಧ?
ನವದೆಹಲಿ: ರಾಷ್ಟ್ರದಾದ್ಯಂತ ಶಾಲಾ ಆವರಣಗಳಲ್ಲಿ ಝಂಕ್
ಆಹಾರ ಮತ್ತು ಕೋಲಾಗಳನ್ನು ನಿಷೇಧಿಸುವ ಬಗ್ಗೆ ಕೇಂದ್ರ
ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ.
`ಮಕ್ಕಳ ಆರೋಗ್ಯದ ಮೇಲೆ ಝಂಕ್ ಆಹಾರ ಮತ್ತು ಕೋಲಾ
ವಿಪರೀತ ದುಷ್ಪರಿಣಾಮವನ್ನು ಉಂಟುಮಾಡುತ್ತಿದೆ. ಆದ್ದರಿಂದ ಝಂಕ್
ಆಹಾರ ಮತ್ತು ಕೋಲಾಗಳನ್ನು ಶಾಲಾ ಆವರಣದಲ್ಲಿ ನಿಷೇಧಿಸಲು
ಬಯಸುತ್ತೇವೆ' ಎಂದು ಕೇಂದ್ರ ಆರೋಗ್ಯ ಸಚಿವ ರಾಮ್‌ದಾಸ್
ಹೇಳುತ್ತಾರೆ.
`ಈ ನಿಷೇಧವನ್ನು ಜಾರಿ ತರುವ ಬಗ್ಗೆ ಈಗಾಗಲೇ ಕೇಂದ್ರ ಮಾನವ
ಸಂಪನ್ಮೂಲ ಸಚಿವಾಲಯದ ಜೊತೆ ಮಾತುಕತೆ ನಡೆಸಿಯಾಗಿದೆ.
ಅಲ್ಲದೆ ಕೋಲಾ-ಝಂಕ್ ಆಹಾರಗಳ ದುಷ್ಪರಿಣಾಮಗಳನ್ನು
ಮಕ್ಕಳಿಗೆ ತಿಳಿ ಹೇಳುವ ಕಾರ್ಯಕ್ರಮವನ್ನೂ
ಹಮ್ಮಿಕೊಳ್ಳಲಾಗುತ್ತದೆ' ಎಂದು ರಾಮ್‌ದಾಸ್ ವಿವರಿಸಿದರು.
ಈ ವಿಷಯವನ್ನು ಚರ್ಚಿಸಲು ಮುಂದಿನ ವಾರ ರಾಜ್ಯ ಆರೋಗ್ಯ
ಸಚಿವಾಲಯದ ಪ್ರತಿನಿಧಿಗಳ ಸಭೆ ಕರೆಯಲಾಗಿದೆ.
`ಒಮ್ಮಿಂದೊಮ್ಮೆಲೆ ಈ ನಿಷೇಧವನ್ನು ಜಾರಿತರಲಾಗದು. ಇನ್ನೂ
ನಿಷೇಧ ಉಲ್ಲಂಘಿಸಿದ ಶಾಲೆಗಳಿಗೆ ಯಾವ ರೂಪದ ದಂಡ ವಿಧಿಸಬೇಕು
ಎನ್ನುವ ವಿಷಯಗಳನ್ನೆಲ್ಲ ಚರ್ಚಿಸಬೇಕಾಗಿದೆ' ಎಂದು ರಾಮ್‌ದಾಸ್
ತಿಳಿಸಿದರು.
ಇನ್ನಷ್ಟು
ಶ್ರೀಗಂಧ ಅಂಚೆ ಚೀಟಿ
ಬಿಡುಗಡೆ
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
ಇನ್‌ಫಿ ಕ್ಯಾಂಪಸಿನಲ್ಲಿ ಕಟ್ಟಡ
ಕುಸಿತ ಐವರ ಸಾವು
ಜನವರಿಯಲ್ಲಿ ಕಸ್ತೂರಿ
ವಾಹಿನಿ ಪ್ರಾರಂಭ
ಅಣುಬಂಧಕ್ಕೆ ಬಿಜೆಪಿ
ಅಸಮಧಾನ
ಯಶಸ್ವಿಯಾದ ರಕ್ಷಣಾ
ವೇದಿಕೆಯ ಕಾಲ್ನಡಿಗೆ ಜಾಥ
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
|