|
ಯುವರಾಜ್ ಹುಟ್ಟುಹಬ್ಬದಲ್ಲಿ ಗಲಾಟೆ
ಗುರಗಾಂವ್: ೨೫ನೇ ಹುಟ್ಟುಹಬ್ಬ ಭಾರತದ ಕ್ರಿಕೇಟಿಗ
ಯುವರಾಜ್ ಸಿಂಗ್‌ಗೆ ಸಿಹಿಗಿಂತ ಕಹಿಯನ್ನೇ ಉಣಿಸಿದೆ.
ತಮ್ಮ ಹುಟ್ಟು ಹಬ್ಬಕ್ಕೆ ಬಂದ ಅತಿಥಿಗೆ ಯುವರಾಜ್ ಮತ್ತು ಅವರ
ಸ್ನೇಹಿತರು ಥಳಿಸಿದ ಘಟನೆ ಮಂಗಳವಾರ ದೆಹಲಿ ಸಮೀಪದ
ಡಿಎಲ್‌ಎಫ್ ಪ್ರದೇಶದಲ್ಲಿರುವ ಬಾರ್ ಒಂದರಲ್ಲಿ ನಡೆದಿದೆ.
ಹಲ್ಲೆಗೊಳಗಾದ ಅತಿಥಿ ಸಿದ್ದಾರ್ಥ್ ಮಹಾಜನ್ ಯುವರಾಜ್ ಸಿಂಗ್ ವಿರುದ್ಧ
ಪೊಲೀಸ್ ಕಂಪ್ಲೆಂಟ್ ನೀಡಿದ್ದಾರೆ. ಸಿದ್ದಾರ್ಥ್ ತಾಯಿ ನೀಲಂ ಮಹಾಜನ್ ಕೂಡಾ
ತಮ್ಮ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದಾಗಿ ಆರೋಪಿಸಿದ್ದಾರೆ.
ಸಿದ್ದಾರ್ಥ್ ಮಹಾಜನ್ ಕುಡಿದ ಮತ್ತಿನಲ್ಲಿ ಭಾರತದ ಕ್ರಿಕೇಟ್ ತಂಡ
ಮತ್ತು ಆಗಮಿಸಿದ ಅತಿಥಿಗಳ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದೇ ಈ
ಗಲಾಟೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಗಲಾಟೆಯ ವೇಳೆ ಯುವರಾಜ್ ಸೇರಿದಂತೆ ಅನೇಕರಿಗೆ
ಗಾಯವಾಗಿದೆ.
ನಂತರ ಸಂಧಾನ ಏರ್ಪಟ್ಟು ಸಿದ್ದಾರ್ಥ್ ದೂರನ್ನು ವಾಪಾಸ್ ಪಡೆದಿದ್ದಾರೆ
ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
ಶಿವಮೊಗ್ಗದಲ್ಲಿ
ಹೆಚ್ಚುತ್ತಿರುವ `ನುಡಿಹಬ್ಬ'ದ ಸಡಗರ
ಬಹರೈನ್‌ನಲ್ಲಿ `ಬುರುಡೆ
ಭವಿಷ್ಯ' ಹಾಸ್ಯ ರೂಪಕ
೭೦೦ ಕೋಟಿ ರೂ. ಐಟಿ
ರಫ್ತು ಮಾಡಿದ ಮೈಸೂರು
ಕೇಂದ್ರದ ಮಲತಾಯಿ
ಧೋರಣೆಗೆ ವಿರೋಧ
ವಿಮಾನ ಅಪಹರಣ
ಭಯ: ಬಿಗಿ ಭದ್ರತೆ
|