|
ಜನವರಿಯಲ್ಲಿ ಕಸ್ತೂರಿ ವಾಹಿನಿ ಪ್ರಾರಂಭ
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ
ಕನ್ನಡ ವಾಹಿನಿ `ಕಸ್ತೂರಿ' ೨೦೦೭ರ ಜನವರಿ ಕೊನೆಯ ವಾರ
ಪ್ರಾರಂಭವಾಗುವ ಸಂಭವವಿದೆ.
`ಕಸ್ತೂರಿ' ಹಿಂದಿನ ವರ್ಷವೇ ಪ್ರಾರಂಭವಾಗಬೇಕಿತ್ತು. ಆದರೆ ಗೌಡರ
ಕುಟುಂಬ ರಾಜಕೀಯದಲ್ಲಿ ವ್ಯಸ್ತವಾಗಿತ್ತು. ಈಗ `ಅಮೋಘ
ಬ್ರೋಡ್‌ಬ್ಯಾಂಡ್ ಸರ್ವೀಸ್' ಎನ್ನುವ ಬ್ಯಾನರ್ ಹೆಸರಿನಡಿಯಲ್ಲಿ
`ಕಸ್ತೂರಿ' ಪ್ರಾರಂಭವಾಗಲಿದೆ.
`ಇದು ಶೇ. ೬೦ ಮನೋರಂಜನೆ ಮತ್ತು ಶೇ.೪೦ ಸುದ್ದಿಯನ್ನು
ಪ್ರಸಾರ ಮಾಡಲಿರುವ ಕನ್ನಡ ವಾಹಿನಿಯಾಗಿದೆ. ಚಲನಚಿತ್ರಗಳ
ಹಕ್ಕು ಖರೀದಿ ಜಾರಿಯಲ್ಲಿದೆ' ಎಂದು ಅಮೋಘದ ನಿರ್ದೇಶಕ ಎಮ್.ವಿ.
ಪ್ರಸಾದ್ ಬಾಬು ಹೇಳುತ್ತಾರೆ.
ಕಸ್ತೂರಿ ವಾಹಿನಿಯು ದಕ್ಷಿಣ ಮತ್ತು ಉತ್ತರ ಕರ್ನಾಟಕದ
ವೀಕ್ಷಕರನ್ನು ಗೆಲ್ಲಲು ಯೋಜನೆ ತಯಾರಿಸುತ್ತಿದೆ. ಅದರಲ್ಲೂ
ಮುಖ್ಯವಾಗಿ ದಾವಣಗೆರೆ ಮತ್ತು ಗುಲ್ಬರ್ಗಾದ ವೀಕ್ಷಕರನ್ನು ತನ್ನ
ಗುರಿಯನ್ನಾಗಿಸಿಕೊಂಡಿದೆ.
ಇನ್ನಷ್ಟು
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
ಶಿವಮೊಗ್ಗದಲ್ಲಿ
ಹೆಚ್ಚುತ್ತಿರುವ `ನುಡಿಹಬ್ಬ'ದ ಸಡಗರ
ಬಹರೈನ್‌ನಲ್ಲಿ `ಬುರುಡೆ
ಭವಿಷ್ಯ' ಹಾಸ್ಯ ರೂಪಕ
೭೦೦ ಕೋಟಿ ರೂ. ಐಟಿ
ರಫ್ತು ಮಾಡಿದ ಮೈಸೂರು
ಕೇಂದ್ರದ ಮಲತಾಯಿ
ಧೋರಣೆಗೆ ವಿರೋಧ
ವಿಮಾನ ಅಪಹರಣ
ಭಯ: ಬಿಗಿ ಭದ್ರತೆ
|