|
ಬಾಹ್ಯಾಕಾಶಕ್ಕೆ ಸೇರಿದ ಸುನೀತ ವಿಲಿಯಮ್ಸ್
ವಾಷಿಂಗ್ಟನ್: ಭಾರತೀಯ ಮೂಲದ ಸುನಿತಾ ವಿಲಿಯಮ್ಸ್
ಸೇರಿದಂತೆ ೭ ಜನರನ್ನು ಹೊತ್ತ ಬಹುನಿರೀಕ್ಷಿತ `ಡಿಸ್ಕವರಿ' ಬಾಹ್ಯಾಕಾಶ
ನೌಕೆಯನ್ನು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ
ಭಾರತೀಯ ಕಾಲಮಾನ ರವಿವಾರ ಬೆಳಿಗ್ಗೆ ೭.೧೭ಕ್ಕೆ ಹಾರಿಬಿಡಲಾಯಿತು.
ದಿವಂಗತ ಕಲ್ಪನಾ ಚಾವ್ಲಾ ಅವರ ನಂತರ ಸುನೀತ ವಿಲಿಯಮ್ಸ್
ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿರುವ ಎರಡನೆಯ
ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.
ಭಾರತದಿಂದ ವಲಸೆ ಹೋದ ವೈದ್ಯ ದೀಪಕ್ ಎನ್. ಪಾಂಡ್ಯಾ
ದಂಪತಿಗಳ ಪುತ್ರಿಯಾದ ಸುನೀತ ವಿಲಿಯಮ್ಸ್ ಅಮೇರಿಕಾದ
ನೇವಲ್ ಅಕಾಡೆಮಿಯಿಂದ ಬಿ.ಎಸ್.ಸಿ ಪದವಿ, ಫ್ಲೋರಿಡಾ ಇನ್ಸ್ಟಿಟ್ಯೂಟ್
ಆಫ್ ಟೆಕ್ನಾಲಜಿಯಿಂದ ಎಂ.ಎಸ್ ಪದವಿ, ಕಳೆದ ಜುಲೈವರೆಗೆ
ಬಾಹ್ಯಾಕಾಶಯಾನದ ತರಬೇತಿ ಪಡೆದಿದ್ದಾರೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮರುನಿರ್ಮಾಣ ಮತ್ತು
ದುರಸ್ತಿ ಕಾರ್ಯಕ್ಕಾಗಿ `ಡಿಸ್ಕವರಿ'ಯನ್ನು ಹಾರಿ ಬಿಡಲಾಗಿದೆ.
ಸುಮಾರು ೧೨ ದಿನಗಳ ಕಾಲ ದುರಸ್ತಿ ಕೆಲಸ ನಡೆಯಲಿದೆ. ಡಿ.೨೧ಕ್ಕೆ
ನೌಕೆ ಭೂಮಿಗೆ ವಾಪಾಸ್ಸಾಗಲಿದೆ. ಸುನಿತಾ ವಿಲಿಯಮ್ಸ್ ಮುಂದಿನ ಆರು
ತಿಂಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ.
ಇನ್ನಷ್ಟು
ವಿಮಾನ ಅಪಹರಣ ಭಯ: ಬಿಗಿ ಭದ್ರತೆ
ಸಚಿವೆ ರೇಣುಕಾ ಚೌಧರಿ
ಹೇಳಿಕೆಗೆ ವಿರೋಧ
ರಾಜ್ಯ
ಮಹಿಳಾ ಆಯೋಗಕ್ಕೆ ಹೊಸ ಅಧ್ಯಕ್ಷರು?
ಆಟೊ ಚಾಲಕರ ಪ್ರತಿಭಟನೆ
ಡಿ.೧೪ಕ್ಕೆ
ಮಾನಸ ಯಾತ್ರಿಗಳಿಗೆ
ಹೆಚ್ಚಿನ ಸಬ್ಸಿಡಿಯ ಸಾಧ್ಯತೆ
ಗೌಡರ ಮೇಲೆ ಹರಿಹಾಯ್ದ
ಸಿಂಧ್ಯಾ
ಕರ್ನಾಟಕದಲ್ಲಿ ಹಾಲಿಗೆ
ಕಡಿಮೆ ದರ
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ
ಟ್ಯಾಲಿ ಸಾಫ್ಟ್‌ವೇರ್
ಸಾರಾಯಿ ವಿರುದ್ಧ `ಮತ'
ಪ್ರತಿಭಟನೆ
|