|
ಯಶಸ್ವಿಯಾದ ರಕ್ಷಣಾ ವೇದಿಕೆಯ ಕಾಲ್ನಡಿಗೆ ಜಾಥ
ಚಿತ್ರ ಕೃಪೆ : ಈ ಸಂಜೆ
ಬೆಂಗಳೂರು: ಡಾ|| ಸರೋಜಿನಿ ಮಹಿಷಿ ವರದಿ ಜಾರಿ,
ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಮತ್ತು ಕನ್ನಡ
ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನ ನೀಡುವಂತೆ ಒತ್ತಾಯಿಸಿ
ಕರ್ನಾಟಕ ರಕ್ಷಣಾ ವೇದಿಕೆ ಡಿ.೯ರಂದು ಏರ್ಪಡಿಸಿದ್ದ `ಬೃಹತ್ ಕಾಲ್ನಡಿಗೆ
ಜಾಥ' ಅಭೂತ ಪೂರ್ವ ಯಶಸ್ಸನ್ನು ಕಂಡಿತು.
ಬಸವನಗುಡಿಯ ನ್ಯಾಶನಲ್ ಕಾಲೇಜಿನಿಂದ ಕರ್ನಾಟಕ ರಕ್ಷಣಾ
ವೇದಿಕೆಯ ಮೆರವಣಿಗೆ ಪ್ರಾರಂಭವಾಗಿ ರವೀಂದ್ರ ಕಲಾಕ್ಷೇತ್ರ,
ಟೌನ್ ಹಾಲ್, ಕಾರ್ಪೊರೇಶನ್ ಮಾರ್ಗವಾಗಿ ಸಾಗಿದ ಕನ್ನಡದ ದಂಡು
ಮೈಸೂರು ಬ್ಯಾಂಕ್ ಬಳಿ ಇರುವ ಮೈದಾನದಲ್ಲಿ ಸೇರಿತು.
`ಮನೆಗೊಬ್ಬ ಧೀರ; ಮುನ್ನುಗ್ಗಿ ಬಾರ', `ಮನೆಗೊಬ್ಬ ಓಬವ್ವ;
ಮತ್ತೆ ಹುಟ್ಟಿ ಬಾರವ್ವ', `ರಕ್ತವನ್ನು ಚೆಲ್ಲುತ್ತೇವೆ;
ಕನ್ನಡವನ್ನು ಉಳಿಸುತ್ತೇವೆ' ಹೀಗೆ ಮುಂತಾದ ಕನ್ನಡ ಪ್ರೇಮ
ಪ್ರಚೋದಿಸುವ ಘೋಷಣೆಗಳನ್ನು ಕೂಗುತ್ತಾ ಮೆರವಣಿಕೆ ಸಾಗಿತು.
ಮೈಸುರು
ಬ್ಯಾಂಕಿನ ಮೈದಾನದಲ್ಲಿ ನೆರೆದಿದ್ದ ಜನ ಸಾಗರವನ್ನು ಉದ್ದೇಶಿಸಿ
ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ
ಟಿ.ಎ.ನಾರಾಯಣಗೌಡರು `ಕನ್ನಡ ನಾಡಿಗೆ, ನೆಲಕ್ಕೆ, ಜಲಕ್ಕೆ ಧಕ್ಕೆ
ಬರುವಂತಹ ಕೆಲಸ ಯಾರೇ ಮಾಡಿದರೂ ಅವರ ವಿರುದ್ಧ ಕರ್ನಾಟಕ
ರಕ್ಷಣಾ ವೇದಿಕೆ ಸಿಡಿದೇಳುತ್ತದೆ. ಯಾವುದೇ ಶಕ್ತಿಗಳು ಬಂದರೂ
ಕನ್ನಡದ ಸೈನಿಕರ ಬಲವನ್ನು ಕುಗ್ಗಿಸಲು ಸಾಧ್ಯವಿಲ್ಲ' ಎಂದು
ಹೇಳಿದರು.
`ಡಾ|| ಸರೋಜಿನಿ ಮಹಿಷಿ ವರದಿ ಪ್ರಕಟವಾಗಿ ೨೦ ವರುಷಗಳಾದರೂ
ನಮ್ಮ ಘನ ಸರ್ಕಾರಗಳು ಅದನ್ನು ಜಾರಿಗೆ ತರಲು
ವಿಫಲವಾಗಿರುವುದು ನಾಚಿಕೆಗೇಡಿನ ಕೆಲಸ ಎಂದು ಛೀಮಾರಿ ಹಾಕಿದರು.
ಕನ್ನಡದ ವಿದ್ಯುತ್, ಕನ್ನಡದ ನೀರು, ಗಾಳಿ, ಬೆಳಕು, ಕನ್ನಡದ
ಜನರ ಜಮೀನುಗಳಲ್ಲಿ ತಮ್ಮ ಉದ್ಯಮಗಳನ್ನು ಆರಂಭಿಸುತ್ತಿರುವ
ಉದ್ಯಮಿಗಳು ಕನ್ನಡದ ಮಕ್ಕಳಿಗೆ ಕೆಲಸವನ್ನು ಕೊಡದ
ಪಕ್ಷದಲ್ಲಿ ಅಂತಹ ಉದ್ಯಮಗಳು ಕನ್ನಡದ ಮಣ್ಣಿನಲ್ಲಿ ಇರಲು
ಯೋಗ್ಯವೇ ಅಲ್ಲ' ಎಂದು ಖಾರವಾಗಿ ಹೇಳಿದರು.

ಕನ್ನಡ ಭಾಷೆಯ ಜನ ಬಹು ಸಂಖ್ಯೆಯಲ್ಲಿರುವ
ಕಾಸರಗೋಡನ್ನು ಕೇರಳ ಸರ್ಕಾರ ಕಬಳಿಸಿಕೊಂಡಿರುವುದನ್ನು
ಖಂಡಿಸಿದ ಅವರು, ಮಹಾಜನ್ ವರದಿಯ ಪ್ರಕಾರ ಕಾಸರಗೋಡನ್ನು
ಕರ್ನಾಟಕಕ್ಕೆ ಸೇರಿಸಲು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು,
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಯದೇವ ಪ್ರಸನ್ನ,
ಬೆಂಗಳೂರು ನಗರ ಅಧ್ಯಕ್ಷರಾದ ಡಾ.ಕೃ.ದೇವರಾಜ್,
ಬೆಂಗಳೂರು ನಗರ ಉಪಾಧ್ಯಕ್ಷರಾದ ಬಸವರಾಜ ಪಡುಕೋಟೆ,
ಕಾನೂನು ಘಟಕದ ಅಧ್ಯಕ್ಷರಾದ ಪ್ರೊ. ಬಿ.ಬಸವರಾಜು, ಸಾಂಸ್ಕೃತಿಕ
ಘಟಕದ ಅಧ್ಯಕ್ಷರಾದ ಗುರುರಾಜ ಹೊಸಕೋಟೆ ಮುಂತಾದ ಗಣ್ಯರು
ರಾಜಭವನಕ್ಕೆ ನಿಯೋಗದಲ್ಲಿ ತೆರಳಿ ರಾಜ್ಯಪಾಲರಿಗೆ
ಮನವಿಪತ್ರಗಳನ್ನು ಸಲ್ಲಿಸಿದರು.
ಇನ್ನಷ್ಟು
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
ಶಿವಮೊಗ್ಗದಲ್ಲಿ
ಹೆಚ್ಚುತ್ತಿರುವ `ನುಡಿಹಬ್ಬ'ದ ಸಡಗರ
ಬಹರೈನ್‌ನಲ್ಲಿ `ಬುರುಡೆ
ಭವಿಷ್ಯ' ಹಾಸ್ಯ ರೂಪಕ
೭೦೦ ಕೋಟಿ ರೂ. ಐಟಿ
ರಫ್ತು ಮಾಡಿದ ಮೈಸೂರು
ಕೇಂದ್ರದ ಮಲತಾಯಿ
ಧೋರಣೆಗೆ ವಿರೋಧ
ವಿಮಾನ ಅಪಹರಣ
ಭಯ: ಬಿಗಿ ಭದ್ರತೆ
|