Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 11 December 2006 11:57 AM

ಕುಮಾರಸ್ವಾಮಿಯ ಹೊಸ ಅವತಾರ

 

ನವದೆಹಲಿ: ಚಾಮುಂಡೇಶ್ವರಿ ಉಪಚುನಾವಣೆಯ ಸೋಲು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಇನ್ನಷ್ಟು ಬಿಸಿ ಮುಟ್ಟಿಸಿದೆ. ಇಷ್ಟುದಿನ ಹಳ್ಳಿ-ಹಳ್ಳಿ ತಿರುಗಿ `ಜನತಾದರ್ಶನ' ಮಾಡಿದರು. ಇನ್ನು ಮುಂದೆ ಕುಮಾರಸ್ವಾಮಿಯವರ ಕಾರ್ಯವೈಖರಿಯೇ ಬದಲಾಗಲಿದೆ.
 

ತಮ್ಮ ೧೦ ತಿಂಗಳ ಅಧಿಕಾರಾವಧಿಯಲ್ಲಿ ಪ್ರಕಟಿಸಿರುವ ಕಾರ್ಯಕ್ರಮಗಳು ಜಾರಿಯಲ್ಲಿ ಬರುವಲ್ಲಿ ತಡೆಯಾದ ಅಧಿಕಾರಿಗಳ ಮೇಲೆ ಧಾಳಿಮಾಡಲಿದ್ದಾರಂತೆ. ಇನ್ನು ಉಳಿದಿರುವ ಹತ್ತು ತಿಂಗಳನ್ನು ಇನ್ನೂ ಸಮರ್ಪಕವಾಗಿ ಬಳಸಿಕೊಂಡು ಜನಸೇವೆ ಮಾಡಲಿದ್ದಾರಂತೆ. ಇದಕ್ಕಾಗಿ ಐದು ಅಂಶಗಳ ಕಾರ್ಯಕ್ರವನ್ನು ಕೂಡಾ ಸಿದ್ಧಪಡಿಸಿಕೊಂಡಿದ್ದಾರಂತೆ.
 

ಮುಖ್ಯಮಂತ್ರಿ ಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹ ಘಟಕ ಸ್ಥಾಪನೆ, ಸರ್ಕಾರದ ಸಂಪೂರ್ಣ ವೆಚ್ಚದಲ್ಲಿ ಆಶ್ರಯ ಮನೆಗಳ ನಿರ್ಮಾಣ, ಬಾಂಗ್ಲಾದೇಶದ ಮಾದರಿಯಲ್ಲಿ ರಾಜ್ಯಾದ್ಯಂತ ಸಣ್ಣ ಸಾಲ ವಿತರಣೆ, ವಿಧವೆ ಮತ್ತು ವಿಕಲಾಂಗರ ವೇತನವನ್ನು ೨೦೦ರಿಂದ ೫೦೦ ರೂ.ಗೆ ಹೆಚ್ಚಳ, ಲೋಕಾಯುಕ್ತರಿಗೆ ಇನ್ನೂ ಹೆಚ್ಚಿನ ಅಧಿಕಾರ ಹೀಗೆ ಮುಂತಾದ ವಿಷಯಗಳನ್ನು ಈ ಐದು ಅಂಶಗಳ ಕಾರ್ಯಕ್ರಮ ಹೊಂದಿದೆ.
 

ಭ್ರಷ್ಟ ಅಧಿಕಾರಿಗಳಿಗೆ ಇನ್ನು ಉಳಿಗಾವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 

ಇನ್ನಷ್ಟು

ವಿಮಾನ ಅಪಹರಣ ಭಯ: ಬಿಗಿ ಭದ್ರತೆ

ಸಚಿವೆ ರೇಣುಕಾ ಚೌಧರಿ ಹೇಳಿಕೆಗೆ ವಿರೋಧ

ರಾಜ್ಯ ಮಹಿಳಾ ಆಯೋಗಕ್ಕೆ ಹೊಸ ಅಧ್ಯಕ್ಷರು?

ಆಟೊ ಚಾಲಕರ ಪ್ರತಿಭಟನೆ ಡಿ.೧೪ಕ್ಕೆ

ಮಾನಸ ಯಾತ್ರಿಗಳಿಗೆ ಹೆಚ್ಚಿನ ಸಬ್ಸಿಡಿಯ ಸಾಧ್ಯತೆ

ಗೌಡರ ಮೇಲೆ ಹರಿಹಾಯ್ದ ಸಿಂಧ್ಯಾ

ಕರ್ನಾಟಕದಲ್ಲಿ ಹಾಲಿಗೆ ಕಡಿಮೆ ದರ

ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಟ್ಯಾಲಿ ಸಾಫ್ಟ್‌ವೇರ್

ಸಾರಾಯಿ ವಿರುದ್ಧ `ಮತ' ಪ್ರತಿಭಟನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com