Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 10 December 2006 12:30 PM

ರಾಜ್ಯ ಮಹಿಳಾ ಆಯೋಗಕ್ಕೆ ಹೊಸ ಅಧ್ಯಕ್ಷರು?

ಬೆಂಗಳೂರು: ರಾಜ್ಯ ಮಹಿಳಾ ಆಯೋಗಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಬೇಕು ಎಂದು ಅಖಿಲ ಭಾರತ ಮಹಿಳಾ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
 

`ಮಹಿಳೆಯರ ಮೇಲೆ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅನ್ಯಾಯಕ್ಕೊಳಗಾದ ಸ್ತ್ರೀಯರು ಕೇಂದ್ರ ಮಹಿಳಾ ಆಯೋಗಕ್ಕೆ ದೂರು ನೀಡಬೇಕಾಗಿದೆ. ಇದರಿಂದ ನೊಂದ ಸ್ತ್ರೀಯರಿಗೆ ಶೀಘ್ರ ಪರಿಹಾರ ದೊರೆಯುತ್ತಿಲ್ಲ ಎಂದು ವೇದಿಕೆ ಕಾರ್ಯದರ್ಶಿ ಹೇಮಲತಾ ಮಹಿಷಿ ದೂರಿದರು' ಅವರು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
 

ತಕ್ಷಣವೇ ರಾಜ್ಯ ಮಹಿಳಾ ಆಯೋಗಕ್ಕೆ ಅಧ್ಯಕ್ಷವನ್ನು ನೇಮಿಸಬೇಕು. ಅಲ್ಲದೆ ಜಿಲ್ಲಾಮಟ್ಟದ ವರೆಗೂ ಆಯೋಗಕ್ಕೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ವೇದಿಕೆ ಕೋರಿದೆ.
 

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಹಲವು ತಿಂಗಳುಗಳೇ ಕಳೆದಿವೆ. ಆದರೆ ರಾಜ್ಯ ಮಹಿಳಾ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಿಸದೇ ಸರ್ಕಾರ ನಿರ್ಲಕ್ಷಿಸಿದೆ. ಶಾಸನ ಸಭೆಯಲ್ಲೂ ಯಾವುದೇ ಸ್ಥಾನವನ್ನು ನೀಡದೆ ಮಹಿಳೆಯರನ್ನು ದೂರವಿಡಲಾಗಿದೆ.
 

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಕೂಡಲೇ ನೇಮಕ ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವೇದಿಕೆ ಎಚ್ಚರಿಕೆ ನೀಡಿದೆ.

 

ಇನ್ನಷ್ಟು

ಸಾರಾಯಿ ವಿರುದ್ಧ `ಮತ' ಪ್ರತಿಭಟನೆ

ಸಿಎಮ್ ಕಾರ್ಯವೈಖರಿ ಟೀಕಿಸಿದ ಶಾಸಕರು

ರಾಜ್ಯದಲ್ಲಿ ೬೭ ಪದವಿ ಕಾಲೇಜು ಸ್ಥಾಪನೆ

ನವಜೋತ್ ಸಿಧುಗೆ ೩ ವರ್ಷಗಳ ಶಿಕ್ಷೆ

ಮದುವೆಯಾಗಿ ಮೋಸಹೋದ ಉ.ಕ ಹುಡುಗಿಯರು

ರಾಜ್ಯದ ಆರು ಜಿಲ್ಲೆಗಳಿಗೆ ೨,೬೮೯ ಕೋಟಿ ರೂ.

ಶಿಬು ಸೊರೇನ್‌ಗೆ ಜೀವಾವಧಿ ಶಿಕ್ಷೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com