Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 10 December 2006 03:06 PM

ಕೇಂದ್ರದ ಮಲತಾಯಿ ಧೋರಣೆಗೆ ವಿರೋಧ

 

ಚಾಮರಾಜನಗರ: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿಕೆಯ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
 

ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಸದಸ್ಯರು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಕೆಲಕಾಲ ರಸ್ತೆ ತಡೆ ನಡೆಸಿದರು. ಕನ್ನಡ ಭಾಷೆಯ ಇತಿಹಾಸ, ಪರಂಪರೆಯನ್ನು ಮನದಟ್ಟು ಮಾಡಿಕೊಟ್ಟಿದ್ದರೂ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನ ಮಾನ ನೀಡಲು ಅನಗತ್ಯ ವಿಳಂಬ ಮಾಡುವ ಮೂಲಕ ಕನ್ನಡಕ್ಕೆ ಅಪಮಾನ ಮಾಡುತ್ತಿದೆ ಎಂದು ಆರೋಪಿಸಿದರು.
 

ಕೇಂದ್ರ ಸರಕಾರ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಒಂದೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡಿ ಎಂದು ಒತ್ತಾಯಿಸುವ ಪರಿಸ್ಥಿತಿಯನ್ನು ಸರಕಾರ ತಂದೊಡ್ಡಿದೆ. ಇನ್ನು ವಿಳಂಬ ಮಾಡಿದರೆ ಪ್ರತಿಭಟನೆ ಸ್ವರೂಪ ಬದಲಾಗುತ್ತದೆ ಎಂದು ಎಚ್ಚರಿಸಿದರು.
 

ಸರಕಾರಗಳ ಈ ಕುತಂತ್ರದಿಂದಾಗಿ ಈಗಾಗಲೇ ತಾಳವಾಡಿ, ಕಾಸರಗೋಡು, ಅಂಕಲಕೋಟೆಯನ್ನು ಕರ್ನಾಟಕ ಕಳೆದುಕೊಂಡಿದೆ. ಇದೀಗ ಬೆಳಗಾವಿಯನ್ನು ಕಬಳಿಸುವ ಹುನ್ನಾರ ನಡೆದಿದೆ. ಏನೇ ಆದರೂ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.
 

ಕೂಡಲೇ ಮಹಾಜನ್ ಹಾಗೂ ಮಹಷಿ ವರದಿಯನ್ನು ಜಾರಿತರಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಶಾ. ಮುರುಳಿ, ಚಾ.ವೆಂ. ರಾಜಗೋಪಾಲ್, ಸುರೇಶ್ ನಾಯಕ್, ಮಾರ್ಕೆಟ್ ಗಿರೀಶ್, ಚಾ.ಸಿ. ಸೋಮನಾಯಕ, ಶ್ರೀನಿವಾಸ್ ಉಪ್ಪಾರ್, ಬಂಗಾರನಾಯಕ, ನಾರಾಯಣಗೌಡ, ಕಾರ್ಮಿಕ್ ರಮೇಶ್, ವೆಂಕಟಾದ್ರಿ, ಕಲಾವಿದ ರಾಜಪ್ಪ, ಲೋಕೇಶ್, ಚನ್ನಶೆಟ್ಟಿ, ಶಂಕರ್, ಪ್ರದೀಪ್, ಮಹೇಶ್, ರಘು, ಗಿರೀಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಇನ್ನಷ್ಟು

ವಿಮಾನ ಅಪಹರಣ ಭಯ: ಬಿಗಿ ಭದ್ರತೆ

ಸಚಿವೆ ರೇಣುಕಾ ಚೌಧರಿ ಹೇಳಿಕೆಗೆ ವಿರೋಧ

ರಾಜ್ಯ ಮಹಿಳಾ ಆಯೋಗಕ್ಕೆ ಹೊಸ ಅಧ್ಯಕ್ಷರು?

ಆಟೊ ಚಾಲಕರ ಪ್ರತಿಭಟನೆ ಡಿ.೧೪ಕ್ಕೆ

ಮಾನಸ ಯಾತ್ರಿಗಳಿಗೆ ಹೆಚ್ಚಿನ ಸಬ್ಸಿಡಿಯ ಸಾಧ್ಯತೆ

ಗೌಡರ ಮೇಲೆ ಹರಿಹಾಯ್ದ ಸಿಂಧ್ಯಾ

ಕರ್ನಾಟಕದಲ್ಲಿ ಹಾಲಿಗೆ ಕಡಿಮೆ ದರ

ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಟ್ಯಾಲಿ ಸಾಫ್ಟ್‌ವೇರ್

ಸಾರಾಯಿ ವಿರುದ್ಧ `ಮತ' ಪ್ರತಿಭಟನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com