|
೭೦೦ ಕೋಟಿ ರೂ. ಐಟಿ ರಫ್ತು ಮಾಡಿದ ಮೈಸೂರು
ಮೈಸೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶೀಘ್ರವಾಗಿ
ಬೆಳೆಯುತ್ತಿರುವ ಮೈಸೂರು ಈ ವರ್ಷ ಮಾಹಿತಿ ತಂತ್ರಜ್ಞಾನ
ಕ್ಷೇತ್ರದಲ್ಲಿ ಸುಮಾರು ೭೦೦ ಕೋಟಿ ರೂ. ದಾಖಲೆ ರಫ್ತು ಮಾಡಿದೆ.
ಮುಂದಿನ ೨-೩ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ರಫ್ತು ಪ್ರಮಾಣ
ಶೇ. ೫೦ರಷ್ಟು ಹೆಚ್ಚಳವಾಗಲಿದೆ ಎಂದು ಎಸ್‌ಟಿಪಿಐ ಹೈದರಾಬಾದ್
ಮತ್ತು ಬೆಂಗಳೂರು ಶಾಖೆಯ ನಿರ್ದೇಶಕ ಬಿ.ವಿ.ನಾಯ್ಡು
ತಿಳಿಸಿದರು.
ಮೈಸೂರಿನಲ್ಲಿ ಶನಿವಾರ ಆರಂಭವಾದ ಮಾರ್ಲ್ಯಾಬ್ಸ್ ಸಾಫ್ಟ್‌ವೇರ್
ಕಂಪನಿ ಕಚೇರಿ ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಸರಕಾರ ಮೈಸೂರನ್ನು ಭವಿಷ್ಯದ ಸಾಫ್ಟ್‌ವೇರ್
ನಗರವಾಗಿ ರೂಪಿಸಲು ಹೆಚ್ಚು ಒತ್ತು ನೀಡುತ್ತಿದೆ ಎಂದರು.
ಮೈಸೂರಿನಲ್ಲಿ ಡಿ-ಟಾರ್ಗೆಟ್ ಸಾಫ್ಟ್ ವೇರ್ ಕಂಪನಿ ಮಾರ್ಚ್ ವೇಳೆಗೆ
ಕಾರ್ಯಾರಂಭ ಮಾಡಲಿದೆ. ಈ ಘಟಕಕ್ಕೆ ೧೫ ಮಿಲಿಯನ್ ಡಾಲರ್ ಹಣ
ಹೂಡಲಾಗುತ್ತಿದೆ. ಇನ್ನೂ ೧೨ ಸಾಫ್ಟ್‌ವೇರ್ ಕಂಪನಿಗಳ ಸ್ಥಾಪನೆಗೆ
ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರಿಂದ ಇನ್ನೂ ಹಲವು
ಉದ್ಯೋಗ ಸೃಷ್ಟಿಯಾಗಲಿದೆ. ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್
ಇಂಡಿಯಾ(ಎಸ್‌ಟಿಪಿಐ) ಇಲ್ಲಿ ತನ್ನ ಕೇಂದ್ರ ಆರಂಭಿಸಲಿದೆ ಎಂದು
ನಾಯ್ಡು ತಿಳಿಸಿದರು.
ಇನ್ನಷ್ಟು
ವಿಮಾನ ಅಪಹರಣ ಭಯ: ಬಿಗಿ ಭದ್ರತೆ
ಸಚಿವೆ ರೇಣುಕಾ ಚೌಧರಿ
ಹೇಳಿಕೆಗೆ ವಿರೋಧ
ರಾಜ್ಯ
ಮಹಿಳಾ ಆಯೋಗಕ್ಕೆ ಹೊಸ ಅಧ್ಯಕ್ಷರು?
ಆಟೊ ಚಾಲಕರ ಪ್ರತಿಭಟನೆ
ಡಿ.೧೪ಕ್ಕೆ
ಮಾನಸ ಯಾತ್ರಿಗಳಿಗೆ
ಹೆಚ್ಚಿನ ಸಬ್ಸಿಡಿಯ ಸಾಧ್ಯತೆ
ಗೌಡರ ಮೇಲೆ ಹರಿಹಾಯ್ದ
ಸಿಂಧ್ಯಾ
ಕರ್ನಾಟಕದಲ್ಲಿ ಹಾಲಿಗೆ
ಕಡಿಮೆ ದರ
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ
ಟ್ಯಾಲಿ ಸಾಫ್ಟ್‌ವೇರ್
ಸಾರಾಯಿ ವಿರುದ್ಧ `ಮತ'
ಪ್ರತಿಭಟನೆ
|