Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 10 December 2006 01:13 PM

ಸಚಿವೆ ರೇಣುಕಾ ಚೌಧರಿ ಹೇಳಿಕೆಗೆ ವಿರೋಧ

 

ಬೆಂಗಳೂರು: ಬಾಲ ಕಾರ್ಮಿಕರ ನಿರ್ಮೂಲನೆ ಆಂತರಿಕ ವಿಷಯವಾಗಿದ್ದು, ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಸಂಬಂಧ ಕಾರ್ಯ ನಿರ್ವಹಿಸುವ ಅವಶ್ಯಕತೆ ಇಲ್ಲ. ಭಾರತದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯ ಅರಿವು ಅಂತಾರಾಷ್ಟ್ರೀಯ ಸಂಸ್ಥೆಗಳಿಗಿಲ್ಲ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ರೇಣುಕಾ ಚೌಧರಿ ನೀಡಿದ ಹೇಳಿಕೆ ಸರಿಯಿಲ್ಲ ಎಂದು ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ತನ್ನ ವಿರೋಧ ವ್ಯಕ್ತ ಪಡಿಸಿದೆ.
 

ಸುರಕ್ಷಿತ ತಾಣಗಳಲ್ಲಿ ಬಾಲಕಾರ್ಮಿಕರಿಗೆ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಬಡ ಕುಟುಂಬಗಳಲ್ಲಿ ಮಕ್ಕಳು ದುಡಿಯುವುದು ಅನಿವಾರ್ಯ ಎಂದು ಸಚಿವೆ ಹೇಳುವುದರ ಮೂಲಕ ಶ್ರೀಮಂತ ಮತ್ತು ಬಡ ಮಕ್ಕಳಲ್ಲಿ ಭೇದ ಮಾಡುತ್ತಿದ್ದಾರೆ ಎಂದು ಆಂಧೋಲನದ ಸಂಚಾಲಕ ನರಸಿಂಹ ಮೂರ್ತಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
 

ರೇಣುಕಾ ಚೌಧರಿಯವರ ಹೇಳಿಕೆ ಸಂವಿಧಾನ ಬಾಹಿರವಾಗಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
 

`ಸಾಂಪ್ರದಾಯಿಕ ಕಸುಬುಗಳು ಕೇವಲ ಕುಲಕ್ಕೆ ಮಾತ್ರ ಸೀಮಿತ ಮಾಡದೆ ಯಾವುದೇ ವರ್ಗದವರು ಅದನ್ನು ಕಲಿಯಲು ಅವಕಾಶ ಮಾಡಿಕೊಡಬೇಕು. ವಯಸ್ಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡುವುದರ ಮೂಲಕ ಬಾಲ ಕಾರ್ಮಿಕತೆಯನ್ನು ನಿಯಂತ್ರಿಸಬಹುದು' ಎಂದು ನರಸಿಂಹ ಮೂರ್ತಿ ಸಲಹೆಯನ್ನಿತ್ತರು.

 

ಇನ್ನಷ್ಟು

ಸಾರಾಯಿ ವಿರುದ್ಧ `ಮತ' ಪ್ರತಿಭಟನೆ

ಸಿಎಮ್ ಕಾರ್ಯವೈಖರಿ ಟೀಕಿಸಿದ ಶಾಸಕರು

ರಾಜ್ಯದಲ್ಲಿ ೬೭ ಪದವಿ ಕಾಲೇಜು ಸ್ಥಾಪನೆ

ನವಜೋತ್ ಸಿಧುಗೆ ೩ ವರ್ಷಗಳ ಶಿಕ್ಷೆ

ಮದುವೆಯಾಗಿ ಮೋಸಹೋದ ಉ.ಕ ಹುಡುಗಿಯರು

ರಾಜ್ಯದ ಆರು ಜಿಲ್ಲೆಗಳಿಗೆ ೨,೬೮೯ ಕೋಟಿ ರೂ.

ಶಿಬು ಸೊರೇನ್‌ಗೆ ಜೀವಾವಧಿ ಶಿಕ್ಷೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com