|
ಬಹರೈನ್‌ನಲ್ಲಿ `ಬುರುಡೆ ಭವಿಷ್ಯ' ಹಾಸ್ಯ ರೂಪಕ
ಕಾಸರಗೋಡ್: ಈ ಟೀವಿ ಕನ್ನಡ ವಾಹಿನಿಯಲ್ಲಿ ಜನಪ್ರಿಯವಾದ
ವಿ.ಮನೋಹರ್ ನಿರ್ದೇಶನದ ಹಾಸ್ಯಪ್ರಧಾನ ಕಾರ್ಯಕ್ರಮ
ಕೊಲ್ಲಿರಾಷ್ಟ್ರದ ಬಹರೈನ್‌ನ `ಬೃಹತ್ ಕನ್ನಡ
ಸಾಂಸ್ಕೃತಿಕೋತ್ಸವ'ದ ವೇದಿಕೆಯಲ್ಲಿ ಡಿ.೧೫, ೧೬ರಂದು
ಮೂಡಿಬರಲಿದೆ. ಇದರ ನಿಜವಾದ ನಿರೂಪಕ ಹಿರಿಯ ರಂಗಕರ್ಮಿ
ಕಾಸರಗೋಡು ಚಿನ್ನಾ ಅವರೇ ಇಲ್ಲೂ ಪ್ರಧಾನ ಪಾತ್ರ "ಭೂತನಾಥ
ಜಂಬೂದಿರಿ" ಆಗಲಿದ್ದಾರೆ.
ಸುಮಾರು ೪೫ ನಿಮಿಷಗಳವರೆಗೆ ನಡೆಯಲಿರುವ ಈ
ಪ್ರದರ್ಶನಕ್ಕಾಗಿ ಖ್ಯಾತ ಕನ್ನಡ ಚಿತ್ರ ಸಂಗೀತ ನಿರ್ದೇಶಕ
ವಿ.ಮನೋಹರ್ ಮತ್ತು ಸಾಂಸ್ಕೃತಿಕ ಅಭಿಯಾನಗಳ ಮೂಲಕ
ನಾಡಿನಾದ್ಯಂತ ಖ್ಯಾತರಾದ ಚಿನ್ನಾ ಅವರು ಜಂಟಿಯಾಗಿ ಸಿದ್ಧತೆ
ನಡೆಸಿದ್ದಾರೆ.
ಈ ಬಾರಿ ಸಾಂಸ್ಕೃತಿಕೋತ್ಸವದಲ್ಲಿ ಎಡನೀರು ಮಠಾಧೀಶ ಶ್ರೀ
ಕೇಶವಾನಂದ ಭಾರತೀ ಸ್ವಾಮೀಜಿ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.
ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಯಡಿಯೂರಪ್ಪ, ಸಂಗೀತ
ನಿರ್ದೇಶಕ ಗುರುಕಿರಣ್, ವೈ.ಕೆ.ಮುದ್ದುಕೃಷ್ಣ ಮೊದಲಾದವರು
ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅವಕಾಶ ಸಿಕ್ಕಲ್ಲಿ ಕನ್ನಡ ಜಾಗೃತಿ ಬಗ್ಗೆ ಅಲ್ಲಿಯೂ ಧ್ವನಿ
ಎತ್ತುತ್ತೇನೆ ಕನ್ನಡಕ್ಕೆ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ
ಕಾಸರಗೋಡು ಚಿನ್ನಾ ಭರವಸೆ ನೀಡಿದ್ದಾರೆ.
ಇನ್ನಷ್ಟು
ವಿಮಾನ ಅಪಹರಣ ಭಯ: ಬಿಗಿ ಭದ್ರತೆ
ಸಚಿವೆ ರೇಣುಕಾ ಚೌಧರಿ
ಹೇಳಿಕೆಗೆ ವಿರೋಧ
ರಾಜ್ಯ
ಮಹಿಳಾ ಆಯೋಗಕ್ಕೆ ಹೊಸ ಅಧ್ಯಕ್ಷರು?
ಆಟೊ ಚಾಲಕರ ಪ್ರತಿಭಟನೆ
ಡಿ.೧೪ಕ್ಕೆ
ಮಾನಸ ಯಾತ್ರಿಗಳಿಗೆ
ಹೆಚ್ಚಿನ ಸಬ್ಸಿಡಿಯ ಸಾಧ್ಯತೆ
ಗೌಡರ ಮೇಲೆ ಹರಿಹಾಯ್ದ
ಸಿಂಧ್ಯಾ
ಕರ್ನಾಟಕದಲ್ಲಿ ಹಾಲಿಗೆ
ಕಡಿಮೆ ದರ
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ
ಟ್ಯಾಲಿ ಸಾಫ್ಟ್‌ವೇರ್
ಸಾರಾಯಿ ವಿರುದ್ಧ `ಮತ'
ಪ್ರತಿಭಟನೆ
|