Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 10 December 2006 02:16 PM

ವಿಮಾನ ಅಪಹರಣ ಭಯ: ಬಿಗಿ ಭದ್ರತೆ

 

ಬೆಂಗಳೂರು: ಭಯೋತ್ಪಾದಕರು ವಿಮಾನ ಅಪಹರಣದ ಸಂಚು ಮಾಡಿದ್ದಾರೆನ್ನುವ ಬೇಹುಗಾರಿಕಾ ಮಾಹಿತಿ ಹಿನ್ನೆಲೆಯಲಿ ರಾಷ್ಟ್ರದಾದ್ಯಂತ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
 

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯೊಂದು ಭಾರತೀಯ ವಿಮಾನವನ್ನು ಅಪಹರಣ ಮಾಡಿ ಬಾಂಗ್ಲಾದೇಶಕ್ಕೆ ಒಯ್ಯುವ ಸಂಚು ರೂಪಿಸಿದೆ ಎಂದು ಬೇಹುಗಾರಿಕಾ ದಳಗಳು ಮಾಹಿತಿ ಪಡೆದಿದ್ದರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೂಡಾ ಭದ್ರತೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.
 

ನಿಲ್ದಾಣದ ಹೊರವಲಯದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ' ಎಂದು ನಗರ ಪೊಲೀಸ್ ಆಯುಕ್ತ ಎನ್. ಅಚ್ಯುತರಾವ್ ತಿಳಿಸಿದ್ದಾರೆ.
 

ವಿಮಾನ ನಿಲ್ದಾಣಕ್ಕೆ ಬರುವವರನ್ನು ಕೂಲಂಕುಶವಾಗಿ ತಪಾಸಣೆ ಮಾಡಲಾಗುತ್ತಿದೆ. ನಿಲ್ದಾಣದ ಎಲ್ಲಾ ಮುಖ್ಯ ದ್ವಾರಗಳ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಿದೆ.
 

ನಿಲ್ದಾಣದಲ್ಲಿ ಗೌಪ್ಯ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪ್ರಯಾಣಿಕರು ಭಯ ಪಡುವ ಅಗತ್ಯವಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

 

ಇನ್ನಷ್ಟು

ಸಾರಾಯಿ ವಿರುದ್ಧ `ಮತ' ಪ್ರತಿಭಟನೆ

ಸಿಎಮ್ ಕಾರ್ಯವೈಖರಿ ಟೀಕಿಸಿದ ಶಾಸಕರು

ರಾಜ್ಯದಲ್ಲಿ ೬೭ ಪದವಿ ಕಾಲೇಜು ಸ್ಥಾಪನೆ

ನವಜೋತ್ ಸಿಧುಗೆ ೩ ವರ್ಷಗಳ ಶಿಕ್ಷೆ

ಮದುವೆಯಾಗಿ ಮೋಸಹೋದ ಉ.ಕ ಹುಡುಗಿಯರು

ರಾಜ್ಯದ ಆರು ಜಿಲ್ಲೆಗಳಿಗೆ ೨,೬೮೯ ಕೋಟಿ ರೂ.

ಶಿಬು ಸೊರೇನ್‌ಗೆ ಜೀವಾವಧಿ ಶಿಕ್ಷೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com