|
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಟ್ಯಾಲಿ ಸಾಫ್ಟ್‌ವೇರ್
ಬೆಂಗಳೂರು: ಅಕೌಂಟಿಂಗ್ ಕ್ಷೇತ್ರಕ್ಕೆ ಬಹು ಉಪಯುಕ್ತ
ಸಾಫ್ಟ್‌ವೇರನ್ನು ಒದಗಿಸಿದ ಟ್ಯಾಲಿ ಇಂಡಿಯಾ ಸಂಸ್ಥೆ ಮತ್ತು
ಕರ್ನಾಟಕ ಪಾಲಿಟೆಕ್ನಿಕ್ ಹಾಗೂ ಕರ್ನಾಟಕ ತಾಂತ್ರಿಕ ಶಿಕ್ಷಣ
ನಿರ್ದೇಶನಾಲಯ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.
ಈ ಒಪ್ಪಂದದ ಪ್ರಕಾರ ಕಂಪ್ಯೂಟರ್ ಸೈನ್ಸ್ ಆಂಡ್ ಕಮರ್ಷಿಯಲ್
ಪ್ರಾಕ್ಟೀಸ್ ವಿಭಾಗದ ಪದವಿಪೂರ್ವ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಟ್ಯಾಲಿ
ಅಕೌಂಟಿಂಗ್, ಇನ್ವೆಂಟರಿ ಸಾಫ್ಟ್‌ವೇರ್‌ಗಳ ಬಗ್ಗೆ ತರಬೇತಿ
ನೀಡಲಾಗುವುದು.
ಟ್ಯಾಲಿ ತಜ್ಞರಿಂದ ತರಬೇತಿ ಪಡೆದು ಪಾಲಿಟೆಕ್ನಿಕ್ ಶಿಕ್ಷರು ವಿದ್ಯಾರ್ಥಿಗಳಿಗೆ
ಪಾಠಮಾಡಲಿದ್ದಾರೆ.
ಸರ್ಕಾರದ ಮಾನ್ಯತೆ ಪಡೆದ ೪೦ ಪಾಲಿಟೆಕ್ನಿಕ್ ಕಾಲೇಜುಗಳಿದ್ದು
ಇದರಲ್ಲಿ ೨೯ ಕಾಲೇಜುಗಳು ಈಗಾಗಲೇ ಟ್ಯಾಲಿ ಶಿಕ್ಷಣ ಅಳವಡಿಸಿಕೊಳ್ಳಲು
ಮುಂದೆ ಬಂದಿವೆ. ಎಲ್ಲಾ ಕಾಲೇಜುಗಳು ಇದನ್ನು ಅಳವಡಿಸಿಕೊಳ್ಳುವಂತೆ
ಮಾಡಲು ಟ್ಯಾಲಿ ಸಂಸ್ಥೆ ಉಚಿತ ಸಾಫ್ಟ್‌ವೇರ್‌ಗಳನ್ನು ಹಂಚುವ
ಯೋಜನೆ ಹಾಕಿಕೊಂಡಿದೆ.
ಈ ಒಪ್ಪಂದ ಮಾಡಿಕೊಂಡಿರುವುದರಿಂದ ದೇಶದಲ್ಲಿ ಪಾಲಿಟೆಕ್ನಿಕ್
ಮಟ್ಟದಲ್ಲಿ ಟ್ಯಾಲಿ ಸಾಫ್ಟ್‌ವೇರ್ ತರಬೇತಿ ಅಳವಡಿಸಿದ ಮೊದಲರಾಜ್ಯ
ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಇನ್ನಷ್ಟು
ಸಾರಾಯಿ ವಿರುದ್ಧ `ಮತ'
ಪ್ರತಿಭಟನೆ
ಸಿಎಮ್ ಕಾರ್ಯವೈಖರಿ
ಟೀಕಿಸಿದ ಶಾಸಕರು
ರಾಜ್ಯದಲ್ಲಿ ೬೭ ಪದವಿ
ಕಾಲೇಜು ಸ್ಥಾಪನೆ
ನವಜೋತ್ ಸಿಧುಗೆ ೩
ವರ್ಷಗಳ ಶಿಕ್ಷೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್‌ಗೆ ಜೀವಾವಧಿ
ಶಿಕ್ಷೆ
|