|
ಗೌಡರ ಮೇಲೆ ಹರಿಹಾಯ್ದ ಸಿಂಧ್ಯಾ
ಬೆಂಗಳೂರು: ಚಾಮುಂಡೇಶ್ವರಿ ಉಪಚುನಾವಣೆ
ಸಂದರ್ಭದಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಕ್ಕೆ ಮಾಜಿ ಸಚಿವ
ಪಿ. ಜಿ. ಆರ್. ಸಿಂಧ್ಯಾ ಅವರನ್ನು ಜನತಾದಳದ ಪ್ರಾಥಮಿಕ
ಸದಸ್ಯತ್ವದಿಂದ ಅಮಾನತು ಗೊಳಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ
ಸಿಂಧ್ಯಾ `ದೇವೇಗೌಡರ ದ್ವೇಷ ರಾಜಕಾರಣಕ್ಕೆ ಇದು ಮತ್ತೊಂದು
ನಿದರ್ಶನ ಎಂದು ಗೌಡರ ಮೇಲೆ ಕಿಡಿಕಾರಿದ್ದಾರೆ.
ಜಾತ್ಯತೀತ ಸಿದ್ಧಾಂತಗಳನ್ನು ಬದಿಗೊತ್ತಿ ಕೋಮುವಾದಿಗಳ ಜತೆ
ಕೈಜೋಡಿಸಿದ್ದನ್ನು ವಿರೋಧಿಸಿದಾಗಲೇ ತಮ್ಮ ವಿರುದ್ಧ ಇಂತಹ
ಕ್ರಮ ಕೈಗೊಳ್ಳುತ್ತಾರೆ ಎಂದು ಕೊಂಡಿದ್ದೆ. ಇದೇನೂ ಅನಿರೀಕ್ಷಿತವಲ್ಲ
ಎಂದು ಅವರು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಮರು ಚುನಾವಣೆಯಲ್ಲಿ ಯಾವುದೇ
ಪಕ್ಷಕ್ಕೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಿಲ್ಲ. ಜಾತ್ಯತೀತ
ಆಶಯಗಳಿಗೆ ಅನುಗುಣವಾಗಿಯೇ ಸಿದ್ದರಾಮಯ್ಯ ಅವರಿಗೆ ಬೆಂಬಲ
ನೀಡಲಾಯಿತು. ಕೇಂದ್ರ ವರಿಷ್ಠರಾದ ಸುರೇಂದ್ರ ಮೋಹನ್ ಮತ್ತು
ವೀರೇಂದ್ರ ಕುಮಾರ್ ಜತೆ ಮೊದಲೇ ಚರ್ಚಿಸಿ ಸಿದ್ಧರಾಮಯ್ಯ
ಅವರನ್ನು ಬೆಂಬಲಿಸುವ ಬಗ್ಗೆ ಜಂಟಿ ಹೇಳಿಕೆ ನೀಡಲಾಗಿತ್ತು ಎಂದು
ತಮ್ಮನ್ನು ಸಮರ್ಥಿಸಿಕೊಂಡರು.
ಏನೇ ಆದರೂ ತಾವು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಪಕ್ಷ
ವರಿಷ್ಠರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು
ಎಂದು ಸಿಂಧ್ಯಾ ಹೇಳಿದ್ದಾರೆ.
ಇನ್ನಷ್ಟು
ಸಾರಾಯಿ ವಿರುದ್ಧ `ಮತ'
ಪ್ರತಿಭಟನೆ
ಸಿಎಮ್ ಕಾರ್ಯವೈಖರಿ
ಟೀಕಿಸಿದ ಶಾಸಕರು
ರಾಜ್ಯದಲ್ಲಿ ೬೭ ಪದವಿ
ಕಾಲೇಜು ಸ್ಥಾಪನೆ
ನವಜೋತ್ ಸಿಧುಗೆ ೩
ವರ್ಷಗಳ ಶಿಕ್ಷೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್‌ಗೆ ಜೀವಾವಧಿ
ಶಿಕ್ಷೆ
|