|
ಕರ್ನಾಟಕದಲ್ಲಿ ಹಾಲಿಗೆ ಕಡಿಮೆ ದರ
ಹೊಸದಿಲ್ಲಿ: ಭಾರತದ ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ
ಕರ್ನಾಟಕದಲ್ಲಿ ಹಾಲಿನ ದರ ಬಹಳ ಕಡಿಮೆ ಇದೆ.
ಕೃಷಿ ಸಚಿವ ಶರದ್ ಪವಾರ್ ರಾಜ್ಯ ಸಭೆಯಲ್ಲಿ ಶುಕ್ರವಾರ
ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದರು.
ರಾಷ್ಟ್ರದಲ್ಲಿ ಹಾಲು ಉತ್ಪಾದಕರು ಉತ್ತಮ ದರವನ್ನು
ಪಡೆಯುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸದ್ಯ ಹಾಲಿನ ದರ ಸರಾಸರಿ
ಪ್ರತಿ ಲೀಟರ್‌ಗೆ ೧೭.೫೭ ರೂ. ಇದೆ.
ಹಾಲನ್ನು ಸಿಮ್ಲಾದಲ್ಲಿ ಪ್ರತಿ ಲೀಟರ್‌ಗೆ ೧೬ ರೂ. ಲೂಧಿಯಾನಾ ಹಾಗೂ
ಅಹಮದಾ ಬಾದ್‌ನಲ್ಲಿ ೨೦ ರೂ. ದಿಲ್ಲಿಯಲ್ಲಿ ೧೭ ರೂ. ಗೆ ಮಾರಾಟ
ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ಹಾಲಿನ ಮಾರಾಟ ದರ ಪ್ರತಿ ಲೀಟರ್‌ಗೆ
೧೫ ರಿಂದ ೨೧ ರೂ. ಅಂತರದಲ್ಲಿದೆ. ಆದರೆ ರಾಜ್ಯದಲ್ಲಿ ಪ್ರತಿ ಲೀಟರ್‌ಗೆ ೧೪
ರೂ. ಇದೆ.
೨೦೦೬-೦೭ ನೇ ಸಾಲಿನಲ್ಲಿ ರಾಷ್ಟ್ರದಲ್ಲಿ ೧೦ ಕೋಟಿ ಟನ್ ಹಾಲು
ಉತ್ಪಾದನೆಯಾಗುವ ಅಂದಾಜಿದೆ. ಕಸಾಯಿ ಖಾನೆ ಸೇರಿದಂತೆ ಇನ್ನಿತರ
ಕಡೆಗಳಲ್ಲಿ ಗೋವು ಹತ್ಯೆ ನಿಯಂತ್ರಿಸಲು ಕಾನೂನು
ಜಾರಿಗೊಳಿಸಲಾಗಿದೆ.
ಕೇವಲ ಪಶು ಸಂಗೋಪನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿ
ರೂಪಿಸುವ ಬಗ್ಗೆ ಸರ್ಕಾರ ಇನ್ನೂ ಚಿಂತನೆ ನಡೆಸಿಲ್ಲ. ಆದರೆ, ಪಶು
ಸಂಗೋಪನೆ ಒಳಗೊಂಡಂತೆ ರಾಷ್ಟ್ರೀಯ ಜೀವ ಚರಗಳ ನೀತಿ
ರೂಪಿಸಲಾಗುತ್ತಿದೆ ಎಂದು ಶರದ್‌ಪವಾರ್ ತಿಳಿಸಿದರು.
ಇನ್ನಷ್ಟು
ಸಾರಾಯಿ ವಿರುದ್ಧ `ಮತ'
ಪ್ರತಿಭಟನೆ
ಸಿಎಮ್ ಕಾರ್ಯವೈಖರಿ
ಟೀಕಿಸಿದ ಶಾಸಕರು
ರಾಜ್ಯದಲ್ಲಿ ೬೭ ಪದವಿ
ಕಾಲೇಜು ಸ್ಥಾಪನೆ
ನವಜೋತ್ ಸಿಧುಗೆ ೩
ವರ್ಷಗಳ ಶಿಕ್ಷೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್‌ಗೆ ಜೀವಾವಧಿ
ಶಿಕ್ಷೆ
|