|
ಸಿಎಮ್ ಕಾರ್ಯವೈಖರಿ ಟೀಕಿಸಿದ ಶಾಸಕರು
ಬೆಂಗಳೂರು: ಶುಕ್ರವಾರ ನಡೆದ ಜನತಾದಳ ಶಾಸಕಾಂಗ
ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೆಲಸವನ್ನು
ಪಕ್ಷದ ಕೆಲವು ಶಾಸಕರು ನೇರವಾಗಿ ಟೀಕಿಸಿದರು. ನಿಗಮ
ಮಂಡಳಿಗೆ ನೇಮಕಾತಿಗೆ ಅನಗತ್ಯ ವಿಳಂಬ ಮಾಡುತ್ತಿರುವುರ
ಬಗ್ಗೆಯೂ ಶಾಸಕರು ಅಸಮಧಾನ ವ್ಯಕ್ತಪಡಿಸಿದರು.
`ಚಾಡಿಕೋರರನ್ನು ದೂರವಿಡಿ. ಇಲ್ಲದಿದ್ದರೆ ಪಕ್ಷವು ದುರ್ಬಲವಾಗುವ
ಸಾದ್ಯತೆ ಇದೆ' ಎಂದು ಎಚ್ಚರಿಕೆ ನೀಡಿದರು. ನಮ್ಮ ಮಾತಿಗೆ ಬೆಲೆ
ನೀಡಿ. ನಿಮ್ಮನ್ನು ನಂಬಿ ಬಂದ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳಿ.
ಈಗಲಾದರೂ ನಿಮ್ಮ ಕಾರ್ಯ ವೈಖರಿಯನ್ನು ಬದಲಿಸಿಕೊಳ್ಳಿ' ಎಂದು
ಕಿವಿಮಾತು ಹೇಳಿದರು.
ಶಾಸಕರಾದ ಮಾಗಡಿ ಬಾಲಕೃಷ್ಣ, ಟಿ. ಜಿ. ದೇವೇಗೌಡ, ಚಂದ್ರಣ್ಣ,
ಮಾಜಿ ಸಚಿವ ಅಮರೇ ಗೌಡ ಬಯ್ಯಾಪುರ ನೇರವಾಗಿ ತಮ್ಮ
ಅಸಮಧಾನವನ್ನು ಕುಮಾರಸ್ವಾಮಿಯವರಲ್ಲಿ ವ್ಯಕ್ತಪಡಿಸಿದರು.
ಶಾಸಕರ ಒತ್ತಾಯಕ್ಕೆ ಮಣಿದ ಕುಮಾರಸ್ವಾಮಿ
ನಿಗಮ-ಮಂಡಳಿಗಳ ನೇಮಕಕ್ಕೆ ಮತ್ತು ಪಕ್ಷ ಶಾಸಕರ
ಕ್ಷೇತ್ರಗಳ ಅಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ
ನೀಡಿದರು.
ಇನ್ನಷ್ಟು
ಗೆಲುವಿನ ಹಾದಿಗೆ
ಮರಳುತ್ತಿರುವ ಕಾಂಗ್ರೆಸ್
೧೧ನೇ
ಸುತ್ತಿನ ಮತ ಎಣಿಕೆಯಲ್ಲೂ ಜೆಡಿಎಸ್‌ನದೇ ಮೇಲುಗೈ
೯ ನೇ
ಸುತ್ತಿನ ಮತ ಎಣಿಕೆ: ಸಿದ್ದು ಹಿಂದೆ
ಉಪಚುನಾವಣೆ ೮ನೇ ಸುತ್ತಿನಲ್ಲಿ ಸಿದ್ದು ಮುನ್ನಡೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್‌ಗೆ ಜೀವಾವಧಿ
ಶಿಕ್ಷೆ
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್‌ಗೆ ಎಕ್ಸ್‌ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
|