|
ಸಾರಾಯಿ ವಿರುದ್ಧ `ಮತ' ಪ್ರತಿಭಟನೆ
ಈಚಲಕರಂಜಿ(ಮಹಾರಾಷ್ಟ್ರ) : `ಆಯ್ಕೆ' ಮಾಡಲು ಮತದಾನ
ಮಾಡುವುದು ಸ್ವಾಭಾವಿಕ ಆದರೆ ಮಹಾರಾಷ್ಟ್ರದ ಶಿರಟ್ಟಿ ಗ್ರಾಮದಲ್ಲಿ
`ತೆಗೆದುಹಾಕಲು' ಮತದಾನ ಮಾಡಲಾಯಿತು!
ಈ ಮತದಾನ ಯಾವುದೇ ರಾಜಕಾರಣಿಯ ವಿರುದ್ಧವಾಗಿರಲಿಲ್ಲ.
ಸಾರಾಯಿ ಅಂಗಡಿಯನ್ನು ಮುಚ್ಚಿಸುವ ಸಲುವಾಗಿ ಶಿರಟ್ಟಿ ಗ್ರಾಮದ
ಮಹಿಳೆಯರು ಮತದಾನದ ರೂಪದಲ್ಲಿ ಪ್ರತಿಭಟನೆ
ಕೈಗೊಂಡಿದ್ದರು.

ಈ ವಿಶೇಷ ಚುನಾವಣೆಯಲ್ಲಿ ಎರಡು ಚಿನ್ಹೆಗಳಿದ್ದವು; `ನಿಂತ ಬಾಟಲಿ'
ಮತ್ತು `ಅಡ್ಡ ಮಲಗಿದ ಬಾಟಲಿ'.
ಯಾವುದಾರೂ
ಒಂದಕ್ಕೆ ಮತಚಲಾಯಿಸಬೇಕಿತ್ತು. ಈ ಚುನಾವಣೆಯ ಮತ್ತೊಂದು
ವಿಶೇಷವೇನೆಂದರೆ ಮಹಿಳೆಯರು ಮಾತ್ರ ಮತ
ಚಲಾಯಿಸಬಹುದಾಗಿತ್ತು.
ಶುಕ್ರವಾರ ಮತ ಎಣಿಕೆ ನಡೆಯಿತು. ಗ್ರಾಮದ ೧,೩೩೪
ಮಹಿಳೆಯರು ತಮ್ಮ ಮತ ಚಲಾಯಿಸಿದ್ದರು. ಇದರಲ್ಲಿ ೧,೨೪೦
ಮಹಿಳೆಯರು `ಅಡ್ಡ ಮಲಗಿದ ಬಾಟಲಿ'ಗೆ ತಮ್ಮ ಮತ
ಚಲಾಯಿಸಿದರು. ಕೇವಲ ೬೪ ಮಹಿಳೆಯರು ಬಾಟಲಿಯ ಪರವಾಗಿ
ತಮ್ಮ ಮತ ನೀಡಿದ್ದರು.
೩೫ ವರ್ಷಗಳಿಂದ ಗ್ರಾಮದಲ್ಲಿ ಸಾರಾಯಿ ಮಾರಾಟವು ನಡೆಯುತ್ತಿತ್ತು.
ತಮ್ಮ ಗಂಡಂದಿರ ವ್ಯಸನಕ್ಕೆ ಕಡಿವಾಣ ಹಾಕಲು ಮಹಿಳೆಯರು
ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂಪಾ ಬಂಢಾರೆಯವರ
ನೇತೃತ್ವದಲ್ಲಿ ಈ ಮತದಾನವನ್ನು ಏರ್ಪಡಿಸಿದ್ದರು.
ಇನ್ನಷ್ಟು
ಗೆಲುವಿನ ಹಾದಿಗೆ
ಮರಳುತ್ತಿರುವ ಕಾಂಗ್ರೆಸ್
೧೧ನೇ
ಸುತ್ತಿನ ಮತ ಎಣಿಕೆಯಲ್ಲೂ ಜೆಡಿಎಸ್‌ನದೇ ಮೇಲುಗೈ
೯ ನೇ
ಸುತ್ತಿನ ಮತ ಎಣಿಕೆ: ಸಿದ್ದು ಹಿಂದೆ
ಉಪಚುನಾವಣೆ ೮ನೇ ಸುತ್ತಿನಲ್ಲಿ ಸಿದ್ದು ಮುನ್ನಡೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್‌ಗೆ ಜೀವಾವಧಿ
ಶಿಕ್ಷೆ
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್‌ಗೆ ಎಕ್ಸ್‌ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
|