|
ಆಟೊ ಚಾಲಕರ ಪ್ರತಿಭಟನೆ ಡಿ.೧೪ಕ್ಕೆ
ಬೆಂಗಳೂರು, ಡಿ. ೮- ಆಟೊ ರಿಕ್ಷಾ ಚಾಲನೆಗೆ ಸಂಬಂಧಿಸಿ ಸರ್ಕಾರ
ವಿಧಿಸಿರುವ ಷರತ್ತುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ
ಆಟೊರಿಕ್ಷಾ ಡ್ರೈವರ್‍ಸ್ ಸಂಘಟನೆ ಡಿ.೧೪ರಂದು ರಾಜ್ಯಾದ್ಯಂತ
ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಸಂಘಟನೆಯ ಅಧ್ಯಕ್ಷ
ಎಚ್.ಜಿ.ಶ್ರೀನಿವಾಸ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ
ತಿಳಿಸಿದರು.
ಆಟೊ ರಿಕ್ಷಾ ಚಾಲನೆಗೆ ಸಂಬಂಧಿಸಿ ರಹದಾರಿ ನಿಯಮಾವಳಿಗೆ ತಿದ್ದುಪಡಿ
ತಂದು ಹೊಸದಾಗಿ ಎಂಟು ಷರತ್ತುಗಳನ್ನು ವಿಧಿಸಿದೆ. ಇವುಗಳಲ್ಲಿ
ಯಾವುದೇ ನಿಯಮ ಉಲ್ಲಂಘಿಸಿದರೂ ಚಾಲಕರಿಗೆ ೧೦ ಸಾವಿರ ರೂ.
ದಂಡ ಹಾಗೂ ಕಠಿಣ ಜೈಲು ಶಿಕ್ಷೆ ಆಗಲಿದೆ. ಇದರಿಂದ ಆಟೊ ಚಾಲಕರ
ಮೇಲೆ ಇನ್ನೂ ಹೆಚ್ಚು ಹೊರೆ ಬೀಳಲಿದೆ ಎಂದು ಶ್ರೀನಿವಾಸಮೂರ್ತಿ
ಕಳವಳ ವ್ಯಕ್ತಪಡಿಸಿದ್ದಾರೆ.
ಹಿಂದಿನ ನಿಯಮಾವಳಿ ಪ್ರಕಾರ, ನಿಯಮ ಉಲ್ಲಂಘಿಸಿದ ಚಾಲಕರಿಗೆ
ಗರಿಷ್ಠ ೩೦೦ರೂ. ದಂಡ ಹಾಗೂ ೧ ವಾರ ಜೈಲು ಶಿಕ್ಷೆ ಮಾತ್ರ
ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ತಿದ್ದುಪಡಿಯಂತೆ ದಂಡದ
ಮೊತ್ತ ಹಾಗೂ ಶಿಕ್ಷೆಯ ಅವಧಿ ಎರಡನ್ನೂ ಹೆಚ್ಚಿಸಲಾಗಿದೆ. ಕಠಿಣ
ನಿಯಮಗಳನ್ನು ಜಾರಿಗೊಳಿಸಿ ಆಟೊ ಚಾಲಕರನ್ನು ಬೀದಿಗೆ ತಳ್ಳಲು
ಸರಕಾರ ಹುನ್ನಾರ ನಡೆಸಿದೆ ಎಂದು ದೂರಿದರು.
ಆಟೊ ಚಾಲಕರಿಗೆ ಸರಕಾರ ಸರಿಯಾದ ಸೌಲಭ್ಯ ಒದಗಿಸುತ್ತಿಲ್ಲ. ಈ
ಬಗ್ಗೆ ಹಲವು ಬಾರಿ ಹೋರಾಟ ನಡೆಸಿದರೂ ಯಾವುದೇ
ಪ್ರಯೋಜನವಾಗಿಲ್ಲ. ಆಟೊ ಚಾಲಕರ ಅಭಿವೃದ್ಧಿ ಮಂಡಳಿ ರಚಿಸಿ ಅದರ
ಮೂಲಕ ಅಪಘಾತ ಪರಿಹಾರ, ವೈದ್ಯ ಸೌಲಭ್ಯ ಮತ್ತಿತರ
ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಅವರು ಆಗ್ರಹಿಸಿದರು.
ಇನ್ನಷ್ಟು
ಸಾರಾಯಿ ವಿರುದ್ಧ `ಮತ'
ಪ್ರತಿಭಟನೆ
ಸಿಎಮ್ ಕಾರ್ಯವೈಖರಿ
ಟೀಕಿಸಿದ ಶಾಸಕರು
ರಾಜ್ಯದಲ್ಲಿ ೬೭ ಪದವಿ
ಕಾಲೇಜು ಸ್ಥಾಪನೆ
ನವಜೋತ್ ಸಿಧುಗೆ ೩
ವರ್ಷಗಳ ಶಿಕ್ಷೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್‌ಗೆ ಜೀವಾವಧಿ
ಶಿಕ್ಷೆ
|