Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 06 December 2006 01:08 PM

ಶಿಬು ಸೊರೇನ್‌ಗೆ ಜೀವಾವಧಿ ಶಿಕ್ಷೆ

 

ನವದೆಹಲಿ: ತಮ್ಮ ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ದಿಲ್ಲಿ ಸೆಷನ್ಸ್ ನ್ಯಾಯಾಲಯ ಮಾಜಿ ಕೇಂದ್ರ ಸಚಿವ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಮ್‌ಎಮ್) ಅಧ್ಯಕ್ಷ ಶಿಬು ಸೊರೇನ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ೫ ಲಕ್ಷ ರೂ. ದಂಡ ವಿಧಿಸಿದೆ.
 

ನವೆಂಬರ್ ೨೮ರಂದೇ ನ್ಯಾಯಾಲಯವು ಶಿಬು ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಮಂಗಳವಾರ ಶಿಕ್ಷೆಯ ಸ್ವರೂಪವನ್ನು ಪ್ರಕಟಿಸಿತು.
ಶಿಬು ಸೊರೇನ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತೆ ಸಿಬಿಐ ತನ್ನ ವಾದವನ್ನು ಮಂಡಿಸಿತ್ತು.
 

ಎರಡೂ ಕಡೆಯವರ ವಾದವನ್ನು ಆಲಿಸಿದ ದೆಹಲಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಿ. ಆರ್. ಕೇಡಿಯಾ ಈ ತೀರ್ಪನ್ನು ಇತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೊಲೆಯಲ್ಲಿ ಭಾಗಿಯಾದ ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ೧೫ ಸಾವಿರ ರೂ ದಂಡವಿಧಿಸಲಾಗಿದೆ.
 

ಸೊರೇನ್ ಇಲ್ಲಿಯ ವರೆಗೆ ಆರು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸೊರೇನ್‌ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೆಲ್ಮನವಿ ಸಲ್ಲಿಸಲು ಇನ್ನು ಮೂರು ತಿಂಗಳುಗಳ ಅವಕಾಶವಿದೆ.
 

ತೀರ್ಪನ್ನು ಪ್ರಕಟಿಸುತ್ತಲೇ ನ್ಯಾಯಾಲಯದ ಹೊರಗಡೆ ಸೇರಿದ್ದ ಸೊರೇನ್ ಬೆಂಬಲಿಗರು ಸೊರೇನ್ ಪರವಾಗಿ ಘೋಷಣೆ ಕೂಗಿದರು.

 

ಹಿನ್ನೆಲೆ: ಕೇಂದ್ರದಲ್ಲಿ ಪಿ. ವಿ. ನರಸಿಂಹರಾವ್ ಅವರ ಆಡಳಿತವಿದ್ದಾಗ ಅವರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಬಹುಮತಕ್ಕಾಗಿ ಜೆಎಮ್‌ಎಮ್‌ನ ನಾಲ್ಕು ಲೋಕ ಸಭಾ ಸದಸ್ಯರಿಗೆ ಭಾರೀ ಮೊತ್ತದ ಲಂಚವನ್ನು ರಾವ್ ಸರ್ಕಾರ ನೀಡಿತ್ತು. ಈ ವಿಷಯವನ್ನು ಹತ್ಯೆಯಾದ ಝಾ ಚೆನ್ನಾಗಿ ಅರಿತಿದ್ದರು. ಇದೇ ಅವರ ಕೊಲೆಗೆ ಕಾರಣವಾಯಿತು.

 

ಇನ್ನಷ್ಟು

ಕಲಾಂಗೆ ಬೆಂಬಲ ನೀಡಿದ ಬಿಜೆಪಿ

ರಾಜ್ಯಕ್ಕೆ ಕೈಕೊಟ್ಟ ಮುಂಗಾರು ಮಳೆ

ಏರ್ ಡೆಕ್ಕನ್‌ಗೆ ಎಕ್ಸ್‌ಪ್ರೆಸ್ ಟ್ರಾವೆಲ್ ಪ್ರಶಸ್ತಿ

ಮುಂಬೈಯಲ್ಲಿ ಮೊಳಗಿದ ಕನ್ನಡದ ಕೂಗು

ಚುನಾವಣೆ ಗೆಲ್ಲಲು ಅಡ್ಡದಾರಿ ಹಿಡಿದ ಪಕ್ಷಗಳು

ಮಮತಾ-ಮೇಧಾರನ್ನು ತಡೆದ ಪೊಲೀಸ್

ಇ-ಸರ್ಕಾರ ನಿರ್ಮಿಸಲು ಕೈಜೋಡಿಸಿದ ಎಚ್‌ಪಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com