|
ಮದುವೆಯಾಗಿ ಮೋಸಹೋದ ಉ.ಕ ಹುಡುಗಿಯರು
ಹುಬ್ಬಳ್ಳಿ: ಉತ್ತರ ಭಾರತದ ಶ್ರೀಮಂತ ಮುದುಕರ ಜೊತೆ
ಮೋಸದ ಮದುವೆ ಮಾಡಿ ಉತ್ತರ ಕರ್ನಾಟಕದ ಹುಡುಗಿಯರನ್ನು
ಪಾಕಿಸ್ತಾನದ ಗಡಿಗಳಲ್ಲಿನ ವೇಶ್ಯಾಗೃಹಗಳಿಗೆ ಬಲವಂತವಾಗಿ ಕಳಿಸುವ
ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಕರ್ನಾಟಕ ಭಾಗದ ಅದರಲ್ಲಿಯೂ ಲಂಬಾಣಿ ಮತ್ತು ಜೈನ್
ಮತಗಳ ಹುಡುಗಿಯರು ಹೆಚ್ಚಾಗಿ ಈ ರೀತಿಯ ಮೋಸಕ್ಕೆ
ಒಳಗಾಗುತ್ತಿದ್ದಾರೆ.
ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ಗುರುನಾಥಸಾ ಬಸವ ಎಂಬುವನನ್ನು
ಪೊಲೀಸರು ಬಂಧಿಸಿದಾಗ ಈ ವಿಷಯ ಹೊರಗೆ ಬಂದಿದೆ.
ಅವನು ಹೇಳುವಂತೆ ಸ್ಥಳೀಯ ಮಧ್ಯವರ್ತಿಗಳು ಪಾಕಿಸ್ತಾನ
ಗಡಿಯ ಏಜೆಂಟರಿಗೆ ಹುಡುಗಿಯರನ್ನು ಮಾರಿದರೆ ಸಾಧಾರಣ
ಕಮೀಷನ್ ಹಣಕ್ಕಿಂತ ನಾಲ್ಕು ಪಟ್ಟು ಹೆಚ್ಚಿಗೆ ಹಣವನ್ನು
ಪಡೆಯುತ್ತಾರಂತೆ. ಲಂಬಾಣಿ ಅಥವಾ ಜೈನ್ ಹುಡುಗಿಯರಿಗೆ
ಪಾಕಿಸ್ತಾನದ ಗಡಿಗಳಲ್ಲಿ ಬಹಳ ಬೇಡಿಕೆ ಇದ್ದು ೧ ರಿಂದ ೨ ಲಕ್ಷ ರೂ.ಗೆ
ಕೊಳ್ಳಲಾಗುತ್ತದೆ. ಲಂಬಾಣಿ ಮತ್ತು ಜೈನ ಹುಡುಗಿಯರು ಉತ್ತರ
ಭಾರತದ ಭಾಷೆಗಳನ್ನು ಚೆನ್ನಾಗಿ ಮಾತನಾಡಲು ಬಲ್ಲವರಾದ್ದರಿಂದ
ಅವರಿಗೆ ಬೇಡಿಕೆ ಹೆಚ್ಚಂತೆ!
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸೌಮ್ಯ-ನೀಲಮ್ಮ
ಸಹೋದರಿಯರು, ಹುಬ್ಬಳ್ಳಿಯ ಲಕ್ಷ್ಮಿ ಮುಂತಾದವರ ಕಥೆ
ವೇಶ್ಯಾವಾಟಿಕೆಯ ಭೀಕರ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ.
೧೦ನೇ ತರಗತಿಯಲ್ಲಿ ಓದುತ್ತಿದ್ದ ಸೌಮ್ಯ-ನೀಲಮ್ಮರನ್ನು ಅವರ
ಸ್ವಂತ ತಂದೆಯೇ ೧ ಲಕ್ಷ ರೂ. ಆಸೆಗೆ ಗುಜರಾತ್‌ನ
ಮಧ್ಯವರ್ತಿಗಳಿಗೆ ಮಾರಿಬಿಟ್ಟಿದ್ದ. ಅವರಿಂದ ಹೇಗೋ ತಪ್ಪಿಸಿಕೊಂಡ
ಸೌಮ್ಯ-ನೀಲಮ್ಮ ಈಗ ಗುಜರಾತ್ ಪೊಲೀಸರ ರಕ್ಷಣೆಯಲ್ಲಿದ್ದಾರೆ.
ಲಕ್ಷ್ಮಿಯದು ಸೌಮ್ಯ-ನೀಲಮ್ಮ ಅವರ ಕಥೆಗಿಂತ ಸ್ವಲ್ಪ ಭಿನ್ನವಾಗಿದೆ.
ಲಕ್ಷ್ಮಿಯ ತಂದೆ ಪ್ರಕಾಶ್ ಬಡ್ಡಿ ಮಹಾರಾಷ್ಟ್ರದ ನಾಲ್ವರ ಜೊತೆ
ಒಪ್ಪಂದ ಮಾಡಿಕೊಂಡು ಬಹಳ ವಯಸ್ಸಾದ ರಾಜೇಶ್ ರಮಾಲಾಲ್
ಎಂಬುವವನ ಜೊತೆಗೆ ಹುಬ್ಬಳ್ಳಿಯ ಹತ್ತಿರದ ತೋಟದ ಮನೆಯಲ್ಲಿ
ಮದುವೆ ಮಾಡುವ ಪ್ರಯತ್ನದಲ್ಲಿದ್ದಾಗ ಪೊಲೀಸರು ಸಕಾಲದಲ್ಲಿ
ಆಗಮಿಸಿ ಮದುವೆಯನ್ನು ತಡೆದಿದ್ದಾರೆ. ರಮಾಲಾಲ್, ಪ್ರಕಾಶ್ ಬಡ್ಡಿ
ಮುಂತಾದವರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್‌ಗೆ ಎಕ್ಸ್‌ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
ಚುನಾವಣೆ ಗೆಲ್ಲಲು ಅಡ್ಡದಾರಿ
ಹಿಡಿದ ಪಕ್ಷಗಳು
ಮಮತಾ-ಮೇಧಾರನ್ನು
ತಡೆದ ಪೊಲೀಸ್
ಇ-ಸರ್ಕಾರ ನಿರ್ಮಿಸಲು
ಕೈಜೋಡಿಸಿದ ಎಚ್‌ಪಿ
|