|
ರಾಜ್ಯಕ್ಕೆ ಕೈಕೊಟ್ಟ ಮುಂಗಾರು ಮಳೆ
ಬೆಂಗಳೂರು: ೨೦೦೧ರಿಂದ ೨೦೦೩ರ ವರೆಗೆ ಇದ್ದ ಬರಗಾಲಕ್ಕಿಂತ
ಈ ಸಲ ಬಂದ ಬರಗಾಲ ಬಹಳ ತೀವ್ರವಾಗಿದೆ.
ಈ ವರ್ಷ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ೨೯ ಲಕ್ಷ
ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಲಾಗಿದ್ದ ಬೆಳೆ ನಾಶವಾಗಿದೆ.
ಈ ವರ್ಷ ಮುಂಗಾರು ಮಳೆ ಆರಂಭದಲ್ಲಿ ಉತ್ತಮವಾಗಿತ್ತು. ಆದರೆ
ಜೂನ್‌ನಿಂದ ಸೆಪ್ಟೆಂಬರ್ ತಿಂಗಳ ಪ್ರಾರಂಭದವರೆಗೂ ಒಣಹವೆ
ಮುಂದುವರಿದಿತ್ತು.
ರಾಜ್ಯದಲ್ಲಿ ೯೯ ಮೀ. ನಷ್ಟು ಮಳೆಯಾಗಿದ್ದು ಶೇ. ೪೫ರಷ್ಟು
ಕೊರತೆಯಾಗಿದೆ. ಹಿಂಗಾರು ಮಳೆಯೂ ಸರಿಯಾಗದ ಕಾರಣ
ರಾಜ್ಯದ ದಕ್ಷಿಣ ಒಳನಾಡಿನ ೨೭ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳೂ ಮುಂಗಾರು ಮಳೆಯ ಕೊರತೆ
ಅನುಭವಿಸಿವೆ. ಆದರೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ,
ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ಚಾಮರಾಜ
ನಗರ ಮತ್ತು ಚಿತ್ರದುರ್ಗಗಳಲ್ಲಿ ಹಿಂಗಾರು ಮಳೆ ದುರ್ಬಲವಾಗಿ, ಈ
ಪ್ರದೇಶಗಳಲ್ಲಿ ಬೆಳೆಯಲಾಗುವ ಬತ್ತ, ರಾಗಿ, ಜೋಳ,
ಮೆಕ್ಕೆಜೋಳ, ತೊಗರಿ, ಕಡಲೆಕಾಯಿ, ಗೋಧಿ, ಹೆಸರು ಮುಂತಾದ
ಬೆಳೆಗಳು ಹಾನಿಗೀಡಾಗಿವೆ.
ಈ ವರ್ಷದ ಬರಗಾಲದಿಂದ ರಾಜ್ಯದ ಒಟ್ಟೂ ಉತ್ಪನ್ನದಲ್ಲಿ ಶೇ. ೨೫ರಿಂದ
೩೦ರಷ್ಟು ಉತ್ಪನ್ನ ಕಡಿಮೆಯಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಇನ್ನಷ್ಟು
ಚುನಾವಣೆ ಗೆಲ್ಲಲು ಅಡ್ಡದಾರಿ
ಹಿಡಿದ ಪಕ್ಷಗಳು
ಮಮತಾ-ಮೇಧಾರನ್ನು
ತಡೆದ ಪೊಲೀಸ್
ಇ-ಸರ್ಕಾರ ನಿರ್ಮಿಸಲು
ಕೈಜೋಡಿಸಿದ ಎಚ್‌ಪಿ
ಮಂಗಳೂರಿಗೆ ಬಂದಿಳಿದ
ಮೊದಲ ಸಖಾಲಿನ್ ತೈಲ
ನೀತಿ ಸಂಹಿತೆ
ಉಲ್ಲಂಘನೆಯಾಗಿಲ್ಲ : ಕುಮಾರಸ್ವಾಮಿ
ವಿಧ್ಯುಕ್ತವಾಗಿ ಚಾಲನೆಗೊಂಡ
ದತ್ತ ಜಯಂತಿ
ನಿಮ್ಮ ಸಾಧನೆ ದಾಖಲೆ
ಪುಸ್ತಕಕ್ಕೆ ನೀಡಿ
|