|
ಚುನಾವಣೆ ಗೆಲ್ಲಲು ಅಡ್ಡದಾರಿ ಹಿಡಿದ ಪಕ್ಷಗಳು
ಮೈಸೂರು: ಚಾಮುಂಡೇಶ್ವರಿ ಉಪಚುನಾವಣೆಯನ್ನು
ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತಮ್ಮ ಪ್ರತಿಷ್ಠೆಯ ವಿಷಯವನ್ನಾಗಿ
ತೆಗೆದುಕೊಂಡಿವೆ. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ
ಮತದಾರರ ಓಲೈಕೆಗೆ ತೊಡಗಿವೆ.
ಮೈಸೂರಿನ ಅನೇಕ ಕಡೆ ಪೊಲೀಸರು ಮತದಾರರಿಗೆ ಪಕ್ಷಗಳು
ಹಂಚಲು ತಂದ ಹಣ, ಸೀರೆ, ಪಾತ್ರೆ ಮುಂತಾದ ವಸ್ತುಗಳನ್ನು
ವಶಪಡಿಸಿಕೊಂಡಿದ್ದಾರೆ.
ಜೆಡಿಎಸ್ ಆರೋಪದ ಮೇರೆಗೆ ಜಯಲಕ್ಮೀಪುರಂನಲ್ಲಿ ಕೆಪಿಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆಯವರನ್ನು ತಪಾಸಣೆ ನಡೆಸಿ, ೧ ಲಕ್ಷ
ರೂ.ಗಳಿದ್ದ ಸೂಟ್‌ಕೇಸ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಲವಾಲದ ಬಳಿ ಮತದಾರರಿಗೆ ಹಂಚಲೆಂದು ತೋಟದ ಮನೆಯಲ್ಲಿ
ಶೇಕರಿಸಿಟ್ಟಿದ್ದ ೮೦ ಸಾವಿರ ರೂ., ಸೀರೆ, ಪಾತ್ರೆಗಳನ್ನು ಪೊಲೀಸರು
ವಶಪಡಿಸಿಕೊಂಡು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು
ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿನ ಆರು ದೊಡ್ಡ ಮದ್ಯದಂಗಡಿಗಳಿಂದ ಭಾರೀ
ಪ್ರಮಾಣದ ಮದ್ಯ ಮಾರಾಟವಾಗಿದ್ದು ಮೈಸೂರಿನಲ್ಲಿ ಅಕ್ರಮ
ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಮದ್ಯ
ಮಾರಾಟಕ್ಕೂ, ಮೈಸೂರಿನಲ್ಲಿ ಮದ್ಯ ಪತ್ತೆಯಾಗಿರುವುದಕ್ಕೂ
ಸಂಬಂಧವಿರಬೇಕೆಂದು ಚುನಾವಣಾ ಆಯುಕ್ತರು ಅಭಿಪ್ರಾಯ
ಪಡುತ್ತಾರೆ.
ಮಾರಾಟವಾದ ಮದ್ಯಕ್ಕೆ ಹೋಲಿಸಿದರೆ ಅಲ್ಪ ಪ್ರಮಾಣ ಮದ್ಯ ಮಾತ್ರ
ಸಿಕ್ಕಿದ್ದು ಉಳಿದ ಮದ್ಯ ಎಲ್ಲಿ ಹೋಗಿದೆ ಎಂದು ಪತ್ತೆಹಚ್ಚ ಬೇಕಾಗಿದೆ.
ಜಾಗೃತ ವ್ಯವಸ್ಥೆಯನ್ನು ಬಲಪಡಿಸಿ ಅಕ್ರಮ ಮದ್ಯದ ಮೂಲವನ್ನು
ಪತ್ತೆಹಚ್ಚಲು ಆಯುಕ್ತರು ಸೂಚಿಸಿದ್ದಾರೆ.
ಇನ್ನಷ್ಟು
ಚುನಾವಣೆ ಗೆಲ್ಲಲು ಅಡ್ಡದಾರಿ
ಹಿಡಿದ ಪಕ್ಷಗಳು
ಮಮತಾ-ಮೇಧಾರನ್ನು
ತಡೆದ ಪೊಲೀಸ್
ಇ-ಸರ್ಕಾರ ನಿರ್ಮಿಸಲು
ಕೈಜೋಡಿಸಿದ ಎಚ್‌ಪಿ
ಮಂಗಳೂರಿಗೆ ಬಂದಿಳಿದ
ಮೊದಲ ಸಖಾಲಿನ್ ತೈಲ
ನೀತಿ ಸಂಹಿತೆ
ಉಲ್ಲಂಘನೆಯಾಗಿಲ್ಲ : ಕುಮಾರಸ್ವಾಮಿ
ವಿಧ್ಯುಕ್ತವಾಗಿ ಚಾಲನೆಗೊಂಡ
ದತ್ತ ಜಯಂತಿ
ನಿಮ್ಮ ಸಾಧನೆ ದಾಖಲೆ
ಪುಸ್ತಕಕ್ಕೆ ನೀಡಿ
|