|
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ೮ ತಿಂಗಳುಗಳು
ಉಳಿದಿವೆ. ನಿಧಾನವಾಗಿ ರಾಜಕೀಯ ಪಾಳೆಯದಲ್ಲಿ ಇದರ ಬಿಸಿ ಏರುತ್ತಿದೆ.
ರಾಷ್ಟ್ರಪತಿ ಅಬ್ದುಲ್ ಕಲಾಂ ಎರಡನೇ ಅವಧಿಗೆ ರಾಷ್ಟ್ರಪತಿಯಾಗಲು
ಬಿಜೆಪಿ ತನ್ನ ಬೆಂಬಲ ಸೂಚಿಸಿದೆ.
ಬಿಜೆಪಿಯ ಹಿರಿಯ ಮುಖಂಡರಾದ ರಾಜನಾಥ್ ಸಿಂಗ್, ಅಟಲ್ ಬಿಹಾರಿ
ವಾಜಪೇಯಿ, ಎಲ್. ಕೆ. ಅಡ್ವಾಣಿ, ಜಸ್ವಂತ್ ಸಿಂಗ್ ಮತ್ತು ಎನ್‌ಡಿಎ
ಸಂಚಾಲಕ ಜಾರ್ಜ್ ಫರ್ನಾಂಡಿಸ್ ಹಿಂದಿನ ವಾರ ರಾಷ್ಟ್ರಪತಿಯವರನ್ನು
ಭೇಟಿಮಾಡಿದ್ದರು. ಆದರೆ ಅವರ ಬಳಿ ರಾಷ್ಟ್ರಪತಿಯವರ ಹತ್ತಿರ
ಚರ್ಚಿಸುವಂತಹ ಯಾವುದೇ ಗಹನವಾದ ವಿಷಯವಿರಲಿಲ್ಲ. ಅಲ್ಲದೆ
ರಾಷ್ಟ್ರಪತಿಯವರೊಂದಿಗೆ ಯಾವ ವಿಷಯದ ಬಗ್ಗೆ ಚರ್ಚಿಸಲಾಯಿತು
ಎಂಬುದನ್ನೂ ಗುಟ್ಟಾಗಿಟ್ಟಿದ್ದರು.
ಬಿಜೆಪಿಯ ಅಧ್ಯಕ್ಷ ರಾಜನಾಥ್ ಸಿಂಗ್ ಭಾನುವಾರ ಕಲಾಂ ಅವರಿಗೆ
ಬಿಜೆಪಿಯ ಬೆಂಬಲವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಕರಣ್ ಸಿಂಗ್, ಲೋಕಸಭೆ ಸ್ಪೀಕರ್
ಸೋಮನಾಥ್ ಚಟರ್ಜಿ, ಸದ್ಯದ ಉಪರಾಷ್ಟ್ರಪತಿ ಬೈರೋ ಸಿಂಗ್
ಶೇಖಾವತ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್
ಕುಮಾರ್ ಶಿಂಧೆ ರಾಷ್ಟ್ರಪತಿ ಸ್ಥಾನದ ಆಕಾಂಕ್ಷಿಗಳ
ಪಟ್ಟಿಯಲ್ಲಿದ್ದಾರೆ.
ದೇಶದ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸದ್ಯವೇ
ನಡೆಯಲಿದೆ. ಮುಸ್ಲಿಂ ಮತ ಬ್ಯಾಂಕನ್ನು ಗಮನದಲ್ಲಿರಿಸಿಕೊಂಡು
ಬಿಜೆಪಿ ಈ ನಿಲುವನ್ನು ತಳೆದಿರಬಹುದು ಎಂದು ರಾಜಕೀಯ ವಿಶ್ಲೇಷಕರು
ಅಭಿಪ್ರಾಯಪಡುತ್ತಾರೆ.
ಇನ್ನಷ್ಟು
ಚುನಾವಣೆ ಗೆಲ್ಲಲು ಅಡ್ಡದಾರಿ
ಹಿಡಿದ ಪಕ್ಷಗಳು
ಮಮತಾ-ಮೇಧಾರನ್ನು
ತಡೆದ ಪೊಲೀಸ್
ಇ-ಸರ್ಕಾರ ನಿರ್ಮಿಸಲು
ಕೈಜೋಡಿಸಿದ ಎಚ್‌ಪಿ
ಮಂಗಳೂರಿಗೆ ಬಂದಿಳಿದ
ಮೊದಲ ಸಖಾಲಿನ್ ತೈಲ
ನೀತಿ ಸಂಹಿತೆ
ಉಲ್ಲಂಘನೆಯಾಗಿಲ್ಲ : ಕುಮಾರಸ್ವಾಮಿ
ವಿಧ್ಯುಕ್ತವಾಗಿ ಚಾಲನೆಗೊಂಡ
ದತ್ತ ಜಯಂತಿ
ನಿಮ್ಮ ಸಾಧನೆ ದಾಖಲೆ
ಪುಸ್ತಕಕ್ಕೆ ನೀಡಿ
|