|
ವೆನಿಲ್ಲಾ: ಬೆಂಬಲ ಬೆಲೆಗೆ ಬೆಳೆಗಾರರ ಒತ್ತಾಯ
ಬೆಂಗಳೂರು: ವೆನಿಲ್ಲಾ ಬೆಲೆಯ ತೀವೃ ಕುಸಿತದಿಂದ ಬೆದರಿದ
ಬೆಳೆಗಾರರು ೧ ಕೆ. ಜಿ. ಸಂಸ್ಕರಿಸಿದ ವೆನಿಲ್ಲಾಕ್ಕೆ ಕನಿಷ್ಠ ೧೫೦೦ ರೂ.
ಬೆಂಬಲ ಬೆಲೆಯನ್ನು ನಿಗದಿಗೊಳಸಬೇಕೆಂದು ಕೇಂದ್ರ
ಸರ್ಕಾರವನ್ನು ಕೋರಿದೆ.
`ಸ್ಟೇಟ್ ಟ್ರೇಡಿಂಗ್ ಕಾರ್ಪೋರೇಶನ್ (ಎಸ್‌ಟಿಸಿ)ನ್ನು ಸ್ಥಾಪಿಸಿ, ಅದರ
ಮೂಲಕ ವಹಿವಾಟು ನಡೆಸಬೇಕೆಂದು ಮತ್ತು ನೈಸರ್ಗಿಕ ವೆನಿಲ್ಲಾ
ಸಂಬಂಧಿತ ಉತ್ಪನ್ನಗಳ ಮೇಲೆ ಸುಂಕ ವಿನಾಯಿತಿ ನೀಡಬೇಕು ಎಂದು
ಭಾರತೀಯ ವೆನಿಲ್ಲಾ ಬೆಳೆಗಾರರ ಸಂಘ ಕೇಂದ್ರದ ಮುಂದೆ
ಕೋರಿಕೆ ಸಲ್ಲಿಸಿದೆ.
ಭಾರತದಲ್ಲಿ ಅತ್ಯುತ್ತಮ ಗುಣಮಟ್ಟದ ವೆನಿಲ್ಲಾವನ್ನು
ಬೆಳೆಯಲಾಗುತ್ತಿದೆ. ಬೇಡಿಕೆಗಿಂತ ಹೆಚ್ಚಿನ ಬೆಳೆ ಅಂತರರಾಷ್ಟ್ರೀಯ
ಮಟ್ಟದಲ್ಲಿ ವೆನಿಲ್ಲಾ ಬೆಲೆ ಕುಸಿಯಲು ಕಾರಣವಾಗಿದೆ. ಇದಲ್ಲದೆ
ದೇಶೀಯವಾಗಿ ವೆನಿಲ್ಲಾವನ್ನು ಬಳಸಲಾಗುತ್ತಿಲ್ಲ. ಆದ್ದರಿಂದ
ಅಂತರರಾಷ್ಟ್ರೀಯ ಮಾರುಕಟ್ಟೆಯನ್ನೇ ಅವಲಂಬಿಸಬೇಕಾಗುತ್ತದೆ.
ಭಾರತದಲ್ಲಿ ವೆನಿಲ್ಲಾ ಬೆಳೆಗಾರರು ಸಣ್ಣ ಹಿಡುವಳಿದಾರರು. ಮತ್ತು
ಅವರು ಅದನ್ನೇ ಜೀವನೋಪಾಯವನ್ನೂ ಮಾಡಿಕೊಂಡಿದ್ದಾರೆ' ಎಂದು
ವೆನಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರಾಜೇಶ್ ಎನ್. ಜಗದಾಳೆ
ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು
ಸಶಸ್ತ್ರ ಪಡೆ ಕಾಯಿದೆಗೆ
ತಿದ್ದುಪಡಿ : ಪ್ರಧಾನಿ
ಕೇರಳದಲ್ಲಿ ಹೊಸ ಚಿನ್ನದ
ಗಣಿ ಪತ್ತೆ
ಜಾತಿಗಿಂತ ತರಬೇತಿಗೆ
ಪ್ರಾಮುಖ್ಯತೆ : ಎನ್‌ಆರ್‌ಎನ್
ರವಿವಾರದಿಂದ ಬೆಂಗಳೂರು
ಹಬ್ಬ
ಬಿಜೆಪಿ ನಾಯಕನ ಹತ್ಯೆ:
ಮರುಕಳಿಸಿದ ಹಿಂಸೆ
ಸಿದ್ಧು ಮೇಲಿದ್ದ ಕೊಲೆ
ಆರೋಪ ಸಾಬೀತು
ಜನರಿಗೆ ಹೊರೆಯಾದ
ಸರ್ಕಾರದ `ಕಡ್ಡಾಯಗಳು'
ಮಹಾರಾಷ್ಟ್ರದಲ್ಲಿ
ಭುಗಿಲೆದ್ದ ಹಿಂಸಾಚಾರ
|