|
ಮಮತಾ-ಮೇಧಾರನ್ನು ತಡೆದ ಪೊಲೀಸ್
ಸಿಂಗೂರ್: ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ಮಮತಾ
ಬ್ಯಾನರ್ಜಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ರನ್ನು
ಟಾಟಾ ಮೊಟರ್ ಸಂಸ್ಥೆಗೆ ನೀಡಲಾದ ಕೃಷಿ ಭೂಮಿಯನ್ನು
ನೀಡಿರುವುದನ್ನು ವಿರೋಧಿಸಿ ರೈತರು ಹಮ್ಮಿಕೊಂಡ
ಪ್ರತಿಭಟನೆಯಲ್ಲಿ ಭಾಗವಹಿಸಲು ಪೊಲೀಸರು
ತಡೆಯನ್ನೊಡ್ಡಿದರು.
ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ
ಇಸ್ಲಾಂಪುರ್‌ದಲ್ಲಿ ಪೊಲೀಸರು ತಡೆದು ಒತ್ತಾಯ ಪೂರ್ವಕವಾಗಿ
ಕಲ್ಕತ್ತಾಕ್ಕೆ ಮರಳಿ ಕಳಿಸಿದರು.
`ನಾನು ಸಿಂಗೂರ್‌ಗೆ ಹೋಗಲೇ ಬೇಕಿತ್ತು. ಪೊಲೀಸರು
ಅಮಾನವೀಯವಾಗಿ ನಡೆದುಕೊಂಡರು' ಎಂದು ಮಮತಾ ಬ್ಯಾನರ್ಜಿ
ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದು ಹೀಗೆ ಮುಂದುವರಿದರೆ ಗಂಭೀರ ಪರಿಣಾಮ
ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
೨೦ ಪಕ್ಷಗಳ ಮೈತ್ರಿಕೂಟದೊಂದಿಗಿನ ಮಾತುಕತೆಯ ನಂತರ
ಮುಂದಿನ ಹೆಜ್ಜೆ ನಿರ್ಧರಿಸಲಾಗುವುದು ಎಂದು ಮಮತಾ ತಿಳಿಸಿದ್ದಾರೆ.
ಪೊಲೀಸರು ಮೇಧಾ ಪಾಟ್ಕರ್‌ರನ್ನು ಶನಿವಾರವೇ ಬಂಧಿಸಿ ವ್ಯಾನಿನಲ್ಲಿ
ಕಲ್ಕತ್ತಾ ಅತಿಥಿ ಗೃಹಕ್ಕೆ ಬಲವಂತವಾಗಿ ಕೊಂಡೊಯ್ದಿದ್ದರು. ಪೊಲೀಸ್
ವ್ಯಾನಿನಿಂದ ಇಳಿಯಲು ವಿರೋಧಿಸಿ ಸಂಪೂರ್ಣರಾತ್ರಿ ವ್ಯಾನಿನಲ್ಲಿಯೇ
ಕಳೆದರು. ಮುಂಜಾನೆ ಮತ್ತೆ ಸಿಂಗೂರ್‌ಗೆ ತೆರಳಲು
ಪ್ರಯತ್ನಿಸಿದಾಗ ಚಂದನಗೋರ್ ಬಳಿ ಪೊಲೀಸರು ಮತ್ತೆ ಮೇಧಾ
ಅವರನ್ನು ಬಂಧಿಸಿದರು.
ಸಿಂಗೂರ್ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆಯನ್ನು
ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು
ಸಶಸ್ತ್ರ ಪಡೆ ಕಾಯಿದೆಗೆ
ತಿದ್ದುಪಡಿ : ಪ್ರಧಾನಿ
ಕೇರಳದಲ್ಲಿ ಹೊಸ ಚಿನ್ನದ
ಗಣಿ ಪತ್ತೆ
ಜಾತಿಗಿಂತ ತರಬೇತಿಗೆ
ಪ್ರಾಮುಖ್ಯತೆ : ಎನ್‌ಆರ್‌ಎನ್
ರವಿವಾರದಿಂದ ಬೆಂಗಳೂರು
ಹಬ್ಬ
ಬಿಜೆಪಿ ನಾಯಕನ ಹತ್ಯೆ:
ಮರುಕಳಿಸಿದ ಹಿಂಸೆ
ಸಿದ್ಧು ಮೇಲಿದ್ದ ಕೊಲೆ
ಆರೋಪ ಸಾಬೀತು
ಜನರಿಗೆ ಹೊರೆಯಾದ
ಸರ್ಕಾರದ `ಕಡ್ಡಾಯಗಳು'
ಮಹಾರಾಷ್ಟ್ರದಲ್ಲಿ
ಭುಗಿಲೆದ್ದ ಹಿಂಸಾಚಾರ
|