|
ವಿಧ್ಯುಕ್ತವಾಗಿ ಚಾಲನೆಗೊಂಡ ದತ್ತ ಜಯಂತಿ
ಚಿಕ್ಕಮಗಳೂರು: ಬಾಬಾಬುಡನ್‌ಗಿರಿ ದತ್ತಪೀಠದಲ್ಲಿ ಶನಿವಾರ
೫೦ಕ್ಕೂ ಹೆಚ್ಚು ಮಾತೆಯರು ದತ್ತಪಾದುಕೆ ಮತ್ತು
ಅನಸೂಯಾದೇವಿ ದರ್ಶನ ಪಡೆದು ಡಿ.೪ರಂದು ನಡೆಯುವ ದತ್ತ
ಜಯಂತಿಗೆ ಚಾಲನೆ ನೀಡಿದರು.
ಪೊಲೀಸ್ ಕಾವಲಿನ ನಡುವೆ ಭಗವಾಧ್ವಜ ಹಿಡಿದು ಪೀಠಕ್ಕೆ ಸ್ವಲ್ಪ
ದೂರದಿಂದ ದತ್ತ ಭಜನೆಯೊಂದಿಗೆ ಮೆರವಣಿಗೆಯಲ್ಲಿ ತೆರಳಿದ
ಮಾತೆಯರು ಗುಹೆಯೊಳಗೆ ದತ್ತಪಾದುಕೆ ಮತ್ತು
ಅನಸೂಯದೇವಿ ದರ್ಶನ ಪಡೆದರು.
ಮೂರು ಕಡೆಗಳಲ್ಲಿ ಲೋಹಶೋಧಕ ಯಂತ್ರಗಳನ್ನು
ಅಳವಡಿಸಲಾಗಿದ್ದು, ಪ್ರತಿಯೊಬ್ಬರೂ ಏಕಸಾಲಿನಲ್ಲಿ ಸಾಗಿ ದರ್ಶನ
ಪಡೆಯುವಂತೆ ಬ್ಯಾರಿಕೇಡ್ ನಿರ್ಮಿಸಲಾಗಿದೆ.
ಪ್ರತಿವರ್ಷ ಪತ್ರಕರ್ತರಿಗೆ ದತ್ತಪೀಠದ ಗುಹೆ ಬಾಗಿಲಿನವರೆಗೆ
ತೆರಳಲು ಅವಕಾಶ ನೀಡುತ್ತಿತ್ತು. ಆದರೆ, ಈ ವರ್ಷ ಪೀಠದ
ಮಾರ್ಗದ ರಸ್ತೆಯವರೆಗೆ ಮಾತ್ರ ಅವಕಾಶ ನೀಡಿ
ಪತ್ರಕರ್ತರನ್ನು ಹೊರಕ್ಕಿಟ್ಟಿದೆ. ಬ್ಯಾರಿಕೇಡ್ ಒಳಗೆ ಚಿತ್ರೀಕರಣ,
ದತ್ತ ಭಕ್ತರ ಚಲನವಲನ ಬಗ್ಗೆ ಪತ್ರಕರ್ತರು ಹೇಗೆ
ತಿಳಿದುಕೊಳಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಬಗ್ಗೆ
ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನಷ್ಟು
ಸಶಸ್ತ್ರ ಪಡೆ ಕಾಯಿದೆಗೆ
ತಿದ್ದುಪಡಿ : ಪ್ರಧಾನಿ
ಕೇರಳದಲ್ಲಿ ಹೊಸ ಚಿನ್ನದ
ಗಣಿ ಪತ್ತೆ
ಜಾತಿಗಿಂತ ತರಬೇತಿಗೆ
ಪ್ರಾಮುಖ್ಯತೆ : ಎನ್‌ಆರ್‌ಎನ್
ರವಿವಾರದಿಂದ ಬೆಂಗಳೂರು
ಹಬ್ಬ
ಬಿಜೆಪಿ ನಾಯಕನ ಹತ್ಯೆ:
ಮರುಕಳಿಸಿದ ಹಿಂಸೆ
ಸಿದ್ಧು ಮೇಲಿದ್ದ ಕೊಲೆ
ಆರೋಪ ಸಾಬೀತು
ಜನರಿಗೆ ಹೊರೆಯಾದ
ಸರ್ಕಾರದ `ಕಡ್ಡಾಯಗಳು'
ಮಹಾರಾಷ್ಟ್ರದಲ್ಲಿ
ಭುಗಿಲೆದ್ದ ಹಿಂಸಾಚಾರ
|