Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 02 December 2006 04:19 PM

ಕೇರಳದಲ್ಲಿ ಹೊಸ ಚಿನ್ನದ ಗಣಿ ಪತ್ತೆ

 

ತಿರುವನಂತಪುರಂ: ಬೆಂಗಳೂರು ಮೂಲದ ಡೆಕ್ಕನ್ ಗೋಲ್ಡ್ ಮೈನ್ಸ್ (ಡಿಜಿಎಮ್) ಎನ್ನುವ ಕಂಪೆನಿ ಕೇರಳದಲ್ಲಿ ಹೊಸ ಚಿನ್ನದ ಗಣಿಯನ್ನು ಪತ್ತೆ ಹಚ್ಚಿದೆ.
 

ಕೆಲವು ವರ್ಷಗಳಿಂದೀಚೆಗೆ ಡಿಜಿಎಮ್ ಕೇರಳದ ಪಲಕ್ಕಾಡ್ ಜಿಲ್ಲೆಯ ಅಟಪ್ಪಾಡಿ ಕಾಡುಗಳಲ್ಲಿ ನಿಕ್ಷೇಪವನ್ನು ಹುಡುಕುತ್ತಿತ್ತು.
 

`ಭಾರತೀಯ ಭೂ ವಿಜ್ಞಾನ ಸಂಸ್ಥೆ(ಜಿಎಸ್‌ಐ)' ಅಟ್ಟಪಾಡಿಯಲ್ಲಿ ಚಿನ್ನದ ನಿಕ್ಷೇಪವನ್ನು ಹುಡುಕುವ ಪ್ರಾರಂಭಿಕ ಹಂತದ ಕೆಲಸವನ್ನು ಮಾಡಿತ್ತು. ನಾವು ಚಿನ್ನದ ನಿಕ್ಷೇಪ ಉಳ್ಳ ಇನ್ನು ಕೆಲವು ಪ್ರದೇಶಗಳನ್ನು ಕಂಡುಹಿಡಿದೆವು. ನಮ್ಮ ಭೂ ವಿಜ್ಞಾನಿಗಳು ಗಣಿಗಾರಿಕೆಗೆ ಪ್ರಾಥಮಿಕ ಸ್ಥಳವನ್ನು ಗುರುತಿಸುವಲ್ಲಿ ತೊಡಗಿದ್ದಾರೆ ' ಎಂದು ಡಿಜಿಎಮ್‌ನಲ್ಲಿ ಮುಖ್ಯ ಭೂ ವಿಜ್ಞಾನಿಯಾಗಿರುವ ವಿ. ಎನ್. ವಸುದೇವ್ ತಿಳಿಸಿದರು.
 

ಡಿಜಿಎಮ್ ಕಂಪೆನಿ ಕೇರಳದಲ್ಲಷ್ಟೇ ಅಲ್ಲದೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನಗಳಲ್ಲಿಯೂ ಚಿನ್ನ ನಿಕ್ಷೇಪವನ್ನು ಶೋಧಿಸುತ್ತಿದೆ.
 

ಭಾರತೀಯ ಭೂ ವಿಜ್ಞಾನ ಸಂಸ್ಥೆಯ ಪ್ರಕಾರ ಕೇರಳದಲ್ಲಿ ಮೊದಲ ಬಾರಿಗೆ ೧೯೬೨ರಲ್ಲಿ ನೀಲಾಂಬುರ್ ಕಾಡುಪ್ರದೇಶದಲ್ಲಿ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚಲಾಯಿತು.
 

ಕೇರಳದಲ್ಲಿ ಈಗ ದೊರೆತಿರುವ ಚಿನ್ನದ ಗಣಿಯಲ್ಲಿ ಒಂದು ಕ್ವಿಂಟಲ್ ಮಣ್ಣು ೧೩.೮೮ ಗ್ರಾಂ. ಚಿನ್ನ ಹೊಂದಿದೆ ಎಂದು ಸಂಶೋಧನೆಗಳು ತಿಳಿಸಿವೆ.

 

ಇನ್ನಷ್ಟು

ಬಿಜೆಪಿ ನಾಯಕನ ಹತ್ಯೆ: ಮರುಕಳಿಸಿದ ಹಿಂಸೆ

ಸಿದ್ಧು ಮೇಲಿದ್ದ ಕೊಲೆ ಆರೋಪ ಸಾಬೀತು

ಜನರಿಗೆ ಹೊರೆಯಾದ ಸರ್ಕಾರದ `ಕಡ್ಡಾಯಗಳು'

ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರ

ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ

ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ

ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com