|
ರವಿವಾರದಿಂದ ಬೆಂಗಳೂರು ಹಬ್ಬ
ಬೆಂಗಳೂರು: ಕರ್ನಾಟಕ ಸುವರ್ಣೋತ್ಸವ ಆಚರಿಸುತ್ತಿರುವ
ಹಿನ್ನೆಲೆಯಲ್ಲಿ ಡಿ.೩ರಿಂದ ೧೦ರವರೆಗೆ ಕನ್ನಡ ಮತ್ತು ಸಂಸ್ಕೃತಿ
ಇಲಾಖೆ `ಬೆಂಗಳೂರು ಹಬ್ಬ-೨೦೦೬' ನ್ನು ಆಚರಿಸುತ್ತಿದೆ.
ಬೆಂಗಳೂರು ಹಬ್ಬದ ವಿಶೇಷತೆಗಳು:
ಬಾಳೆಖಾನ್
ಸಹೋದರರು, ಸಂಗೀತಾ ಕಟ್ಟಿ, ರಾಜೀವ್ ತಾರಾನಾಥ್, ಫಯಾಜ್
ಖಾನ್, ಜಯತೀರ್ಥ ಮೇವುಂಡಿ ಮತ್ತು ಕಾಶಿನಾಥ್ ಪತ್ತಾರ್ ಮುಂತಾದ
ಪ್ರಸಿದ್ಧ ಸಂಗೀತಗಾರರಿಂದ ಸಂಪೂರ್ಣ ರಾತ್ರಿಯ `ಹಿಂದುಸ್ತಾನ್
ಮೆಹಫಿಲ್' ಕಾರ್ಯಕ್ರಮ.
ರವೀಂದ್ರ
ಕಲಾಕ್ಷೇತ್ರ ಸಂಸ ರಂಗಮಂದಿರದಲ್ಲಿ ಡಿ.೩ ರಿಂದ ೭ರವರೆಗೆ ಪ್ರತಿ
ನಿತ್ಯ ಸಂಜೆ ೬.೩೦ಕ್ಕೆ ಸಂಗೀತ ಸಮಾರಂಭ. ೩ ರಂದು
ನಿತ್ಯೋತ್ಸವ ವಿಜೇತರಿಂದ ಗಾಯನ, ೪ರಂದು ಐಡಿಯಲ್ ಬ್ಲೈಂಡ್
ಬ್ಯಾಂಡ್ ತಂಡದಿಂದ ಕಾರ್ಯಕ್ರಮ, ೫ರಂದು ಜೆ. ಸಿದ್ಧರಾಜು ಅವರ
ಜನಪದ ಸಂಗೀತ, ೬ರಂದು ಯುವಜನೋತ್ಸವದಲ್ಲಿ ವಿಜೇತ
ತಂಡಗಳಿಂದ ಯುವಜನೋತ್ಸವ ಜಾನಪದ ನೃತ್ಯ ನಡೆಯಲಿದೆ.
ದಿನಾ
೩.೩೦ರಿಂದ ೫.೩೦ರ ತನಕ ಯುವ ಕಲಾವಿದರಿಂದ ಸಂಗೀತ
ಕಾರ್ಯಕ್ರಮ ಮತ್ತು ೬.೩೦ ರಿಂದ `ಹಿರಿಯ ದಿಗ್ಗಜರಿಗೆ ನಮಸ್ಕಾರ'
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಿಂದ ಕಾರ್ಯಕ್ರಮ
ನಡೆಯಲಿದೆ.
ದಾಸವಾಣಿ,
ವಚನ ಸಂಗೀತ, ನೃತ್ಯಾಂಜಲಿ, ಗೀತೋತ್ಸವ, ವಿಶ್ವ ಸಂಗೀತ
ಪ್ರದರ್ಶನ, ಕನ್ನಡ ಕವಿತೆಗಳ ಕಾವ್ಯ ಮೇಳ ಹಬ್ಬದ
ವಿಶೇಷತೆಗಳಾಗಿವೆ.
`ರಾಜ್ಯದ ಪ್ರತಿಭೆಗಳನ್ನು ಬೆಳಕಿಗೆ ತರುವುದೇ ಈ ಹಬ್ಬದ ಮುಖ್ಯ
ಉದ್ದೇಶ'ಎಂದು ಹಬ್ಬವನ್ನ ಆಯೋಜಿಸಿರುವ ಆರ್ಟಿಸ್ಟ್ ಫೌಂಡೇಶನ್
ಆಫ್ ದ ಆರ್ಟ್ಸ್ ವ್ಯವಸ್ಥಾಪಕಿ ನಂದಿನಿ ಆಳ್ವ ಹೇಳಿದ್ದಾರೆ.
ಇನ್ನಷ್ಟು
ಬಿಜೆಪಿ ನಾಯಕನ ಹತ್ಯೆ:
ಮರುಕಳಿಸಿದ ಹಿಂಸೆ
ಸಿದ್ಧು ಮೇಲಿದ್ದ ಕೊಲೆ
ಆರೋಪ ಸಾಬೀತು
ಜನರಿಗೆ ಹೊರೆಯಾದ
ಸರ್ಕಾರದ `ಕಡ್ಡಾಯಗಳು'
ಮಹಾರಾಷ್ಟ್ರದಲ್ಲಿ
ಭುಗಿಲೆದ್ದ ಹಿಂಸಾಚಾರ
ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ
ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ
ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ
|