|
ಪ್ರಧಾನಿಯಿಂದ ಸಶಸ್ತ್ರ ಪಡೆ ಕಾಯಿದೆಗೆ ತಿದ್ದುಪಡಿಯ ಭರವಸೆ
ಇಂಫಾಲ: ಒಂದು ದಿನದ ಭೇಟಿಗಾಗಿ ಶನಿವಾರ ಮಣಿಪುರಕ್ಕೆ
ಆಗಮಿಸಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಿವಾದಿತ
ಸಶಸ್ತ್ರ ಪಡೆ ಕಾಯಿದೆಗೆ ತಿದ್ದುಪಡಿ ತರುವುದಾಗಿ ಭರವಸೆ
ನೀಡಿದ್ದಾರೆ.
`ಸಶಸ್ತ್ರ ಪಡೆ ಕಾಯಿದೆಗೆ ತಿದ್ದುಪಡಿಯ ಅಗತ್ಯವಿದೆ
ಎನ್ನುವುದನ್ನು ಒಪ್ಪುತ್ತೇನೆ. ಸಶಸ್ತ್ರ ಪಡೆ ಕಾಯಿದೆಯಲ್ಲಿರುವ
ವೈಯಕ್ತಿಕ ಮಾನವ ಹಕ್ಕಿಗೆ ಚ್ಯುತಿ ತರುವ ಅಂಶಗಳನ್ನು
ತೆಗೆದುಹಾಕಿ, ಪ್ರಜೆಗಳಿಗೆ ಉಪಯುಕ್ತವಾಗುವ ಇನ್ನು ಕೆಲವು
ಅಂಶಗಳನ್ನು ಸೇರಿಸಲಾಗುವುದು' ಎಂದು ತಮ್ಮ ಭಾಷಣದಲ್ಲಿ
ತಿಳಿಸಿದ್ದಾರೆ.
ಈ ಕಾಯಿದೆಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು
ಪ್ರಧಾನಿಯವರ ಭೇಟಿ ಸಂದರ್ಭದಲ್ಲಿ ಮಣಿಪುರದಲ್ಲಿ ಬಂದ್‌ಗೆ
ಕರೆ ನೀಡಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ
ಸಶಸ್ತ್ರ ಪಡೆ ಕಾರ್ಯ ನಿರ್ವಹಿಸುವುದರಿಂದ ಇದನ್ನು ಸಂಪೂರ್ಣವಾಗಿ
ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ನಕ್ಸಲರ ಚಟುವಟಿಕೆ ನಿಗ್ರಹಿಸಲು ಮಣಿಪುರದಲ್ಲಿ ಸಶಸ್ತ್ರ ಪಡೆ
ಕಾಯಿದೆಯನ್ನು ಜಾರಿತರಲಾಗಿತ್ತು. ಈ ಕಾಯಿದೆ ಸೈನ್ಯಕ್ಕೆ
`ಹುಡುಕುವ' ಮತ್ತು `ಬಂಧಿಸುವ' ವಿಶೇಷ ಅಧಿಕಾರ ನೀಡುತ್ತದೆ.
ಇನ್ನಷ್ಟು
ಬಿಜೆಪಿ ನಾಯಕನ ಹತ್ಯೆ:
ಮರುಕಳಿಸಿದ ಹಿಂಸೆ
ಸಿದ್ಧು ಮೇಲಿದ್ದ ಕೊಲೆ
ಆರೋಪ ಸಾಬೀತು
ಜನರಿಗೆ ಹೊರೆಯಾದ
ಸರ್ಕಾರದ `ಕಡ್ಡಾಯಗಳು'
ಮಹಾರಾಷ್ಟ್ರದಲ್ಲಿ
ಭುಗಿಲೆದ್ದ ಹಿಂಸಾಚಾರ
ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ
ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ
ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ
|