Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 December 2006 04:46 PM

ಸಿದ್ಧು ಮೇಲಿದ್ದ ಕೊಲೆ ಆರೋಪ ಸಾಬೀತು

 

ಚಂಡಿಗಢ: ಭಾರತದ ಮಾಜಿ ಕ್ರಿಕೇಟ್ ಆಟಗಾರ ಮತ್ತು ಬಿಜೆಪಿ ಸಂಸದ ನವಜೋತ್ ಸಿಂಗ್ ಸಿದ್ಧು ಅವರನ್ನು ಹತ್ಯೆ ಮೊಕದ್ದಮೆಯೊಂದರಲ್ಲಿ ದೋಷಿ ಎಂದು ಪಂಜಾಬ ಮತ್ತು ಹರಿಯಾಣ ಉಚ್ಚ ನ್ಯಾಯಾಲಯ ಶುಕ್ರವಾರ ತೀರ್ಪಿತ್ತಿದೆ. ಈ ತೀರ್ಪು ಬಂದ ತಕ್ಷಣ ಸಿದ್ಧು ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆಯನ್ನಿತ್ತಿದ್ದಾರೆ.
 

ಹಿನ್ನೆಲೆ: ೧೯೮೮ರಲ್ಲಿ ಗುರ್‌ನಾಮ್ ಎಂಬುವವರು ಸಿದ್ಧು ಅವರಿಂದ ಹಲ್ಲೆಗೊಳಗಾಗಿ ನಂತರ ಸಾವನ್ನಪ್ಪಿದ್ದರು. ಕೆಳನ್ಯಾಯಾಲಯ ಸಿದ್ದು ಮೇಲಿದ್ದ ಈ ಆರೋಪವನ್ನು ಖುಲಾಸೆ ಗೊಳಿಸಿತ್ತು. ಗುರ್‌ನಾಮ್ ಪರಿವಾರ ೧೯೯೯ರಲ್ಲಿ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು.
 

ಈ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಮೆಹೆತಾಬ್ ಸಿಂಗ್ ಮತ್ತು ನ್ಯಾಯಮೂರ್ತಿ ಬಲದೇವ್ ಸಿಂಗ್ ಪೀಠ ೩೦೪ನೇ ಸೆಕ್ಷನ್ ಪ್ರಕಾರ ಸಿದ್ಧು ಅವರನ್ನು ಅಪರಾಧಿ ಎಂದು ಪರಿಗಣಿಸಿದೆ. ಶಿಕ್ಷೆಯ ಸ್ವರೂಪವನ್ನು ಬುಧವಾರ ಹೊರಡಿಸುವ ಸಾಧ್ಯತೆಯಿದೆ.
 

ಸಿದ್ಧು ಕೊಲೆ ಸಂಬಂಧಿ ಪ್ರಕರಣದಲ್ಲಿ ಭಾಗಿಯಾದ ಎರಡನೇ ಸಂಸದರಾಗಿದ್ದಾರೆ. ಕಾರ್ಯದರ್ಶಿಯ ಕೊಲೆ ಪ್ರಕರಣದಲ್ಲಿ ಕೇಂದ್ರ ಸಚಿವ ಶಿಬು ಸೊರೇನ್‌ಗೆ ಮಂಗಳವಾರ ದೋಷಿ ಎಂದು ನ್ಯಾಯಾಲಯ ತೀರ್ಪಿತ್ತಿದೆ.

 

ಇನ್ನಷ್ಟು

ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ

ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ

ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ 

ರಿಚರ್ಡ್ಸ್ ದಾಖಲೆ ಮುರಿದ ಮಹಮದ್ ಯೂಸಫ್

ವಿಟಿಯು: ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ

ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ

ಭಾರತ-ಈಜಿಪ್ಟ್ ಐಟಿ ಕ್ಷೇತ್ರದಲ್ಲಿ ಒಪ್ಪಂದ

ಆಯ್ಕೆ ಮಾಡಿ ಕೋರ್ಸ್ ಬದಲಾವಣೆ ಇಲ್ಲ : ಸಿಇಟಿ

ಭಾರಿ ಮೊತ್ತದ ಪ್ರಶಸ್ತಿಗೆ ನಿರ್ಧಾರ : ಬೆಂಮಸಾಸಂ

ಶಿಬು: ಮೊದಲ ಕೊಲೆಗಾರ ಕೇಂದ್ರ ಸಚಿವ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com