Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 December 2006 01:27 PM

ಜನರಿಗೆ ಹೊರೆಯಾದ ಸರ್ಕಾರದ `ಕಡ್ಡಾಯಗಳು'

 

ಬೆಂಗಳೂರು: ಹೆಲ್ಮೆಟ್ ಕಡ್ಡಾಯದ ಪ್ರಹಸನಕ್ಕೆ ತೆರೆ ಬೀಳುತ್ತಿದೆ ಎನ್ನುವಷ್ಟರಲ್ಲಿಯೇ ಹೊಸ ವಿದ್ಯುತ್ ಮೀಟರ್‌ಗಳನ್ನೇ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ವಿದ್ಯುತ್ ವಿತರಣಾ ಕಂಪೆನಿಗಳಿಗೆ ಆದೇಶ ಹೊರಡಿಸಿದೆ.
 

ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಹಿಡಿದು ಪ್ರಸರಣ ಹಂತದಲ್ಲಿ ಎಲ್ಲೆಲ್ಲಿ ಮೀಟರ್‌ಗಳ ಅಗತ್ಯವಿರುತ್ತದೆಯೋ ಅಲ್ಲೆಲ್ಲ ಈಗಿರುವ `ಎಲೆಕ್ಟ್ರೊ ಮೆಕ್ಯಾನಿಕಲ್ ಮೀಟರ್' ಬದಲಿಗೆ ಹೊಸ ಎಲೆಕ್ಟ್ರಾನಿಕ್ ಮೀಟರ್ ಅಳವಡಿಸಿಕೊಳ್ಳುವಂತೆ ಕೇಂದ್ರ ಆಜ್ಞೆ ಮಾಡಿದೆ. ಇದರಿಂದ ಗ್ರಾಹಕರ ಮೇಲೆ ೬೦೦ ಕೋಟಿ ರೂ. ಹೆಚ್ಚಿಗೆ ಹೊರೆ ಬೀಳಲಿರುವುದರಿಂದ ರಾಜ್ಯದಲ್ಲಿರುವ ಐದು ವಿತರಣಾ ಕಂಪೆನಿಗಳು ಈ ಆದೇಶವನ್ನು ಪಾಲಿಸಬೇಕೊ ಬೇಡವೋ ಎನ್ನುವ ಗೊಂದಲದಲ್ಲಿವೆ.
 

ಎಲೆಕ್ಟ್ರೋ ಮೀಟರ್ ಎಲೆಕ್ಟ್ರಾನಿಕ್ ಮೀಟರ್‌ಗಿಂತ ಎಲ್ಲ ರೀತಿಯಿಂದಲೂ ಉತ್ತಮವಾಗಿದ್ದು ಎಲೆಕ್ಟ್ರಾನಿಕ್ ಮೀಟರ್ ಗೃಹ ಬಳಕೆದಾರರಿಗೆ ಅಗತ್ಯವಿಲ್ಲ.
 

`ಎಲೆಕ್ಟ್ರಾನಿಕ್ ಮೀಟರ್ ಮೂಲಕ ಸುಲಭವಾಗಿ ವಿದ್ಯುತ್ ಕಳವು ಮಾಡಬಹುದಾಗಿದ್ದು ಕೇಂದ್ರದ ಆದೇಶ ಪಾಲಿಸಿದರೆ ನಮಗೆ ಇನ್ನೂ ಹೆಚ್ಚಿನ ನಷ್ಟ ಉಂಟಾಗಬಹುದು' ಎಂದು ವಿದ್ಯುತ್ ಪ್ರಸರಣ ಕಂಪೆನಿಯ ಹಿರಿ ಅಧಿಕಾರಿಗಳೊಬ್ಬರು ಕಳವಳ ವ್ಯಕ್ತಪಡಿಸುತ್ತಾರೆ.
 

ಎಲೆಕ್ಟ್ರಾನಿಕ್ ಮೀಟರ್ ಕಡ್ಡಾಯ ಮಾಡಲು ಕಾರಣವೇನೆಂಬುದನ್ನೂ ಕೇಂದ್ರ ಸರ್ಕಾರ ವಿವರಿಸಿಲ್ಲ.

 

ಇನ್ನಷ್ಟು

ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ

ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ

ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ 

ರಿಚರ್ಡ್ಸ್ ದಾಖಲೆ ಮುರಿದ ಮಹಮದ್ ಯೂಸಫ್

ವಿಟಿಯು: ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ

ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ

ಭಾರತ-ಈಜಿಪ್ಟ್ ಐಟಿ ಕ್ಷೇತ್ರದಲ್ಲಿ ಒಪ್ಪಂದ

ಆಯ್ಕೆ ಮಾಡಿ ಕೋರ್ಸ್ ಬದಲಾವಣೆ ಇಲ್ಲ : ಸಿಇಟಿ

ಭಾರಿ ಮೊತ್ತದ ಪ್ರಶಸ್ತಿಗೆ ನಿರ್ಧಾರ : ಬೆಂಮಸಾಸಂ

ಶಿಬು: ಮೊದಲ ಕೊಲೆಗಾರ ಕೇಂದ್ರ ಸಚಿವ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com