|
ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರ
ಮುಂಬೈ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಂಬೇಡ್ಕರ್
ವಿಗ್ರಹವನ್ನು ವಿರೂಪಗೊಳಿಸಿದ ಘಟನೆಯಿಂದ ಕೆರಳಿದ ಮಹಾರಾಷ್ಟ್ರದ
ಜನರು ಹಿಂಸಾಚಾರಕ್ಕೆ ಇಳಿದ ಘಟನೆ ಗುರುವಾರ ನಡೆಯಿತು.
ಪೊಲೀಸರು ಹಿಂಸಾಚಾರ ನಿಲ್ಲಿಸಲು ಮಾಡಿದ ಗೋಲಿಬಾರ್‌ನಿಂದ ನಾಲ್ವರು
ಮೃತರಾಗಿದ್ದು ೬೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
`ಪುಣೆ-ಮುಂಬೈ ಡೆಕ್ಕನ್ ಕ್ವೀನ್' ರೈಲು ಸೇರಿದಂತೆ ಎರಡು
ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು ೧೦೦ಕ್ಕೂ ಹೆಚ್ಚು ಬಸ್ಸುಗಳಿಗೆ ಹಾನಿ
ಮಾಡಲಾಗಿದೆ.
ವಿದರ್ಭದ ಖೈರ್‌ಲಂಜಿಯಲ್ಲಿ ನಡೆದ ದಲಿತ ಕುಟುಂಬದ ಮಾರಣ
ಹೋಮವನ್ನು ಖಂಡಿಸಿ ದಲಿತರು ರಾಜ್ಯದಾದ್ಯಂತ ಅದಾಗಲೇ
ಪ್ರತಿಭಟನೆಗೆ ತೊಡಗಿದ್ದರು. ಕಾನ್ಪುರದ ಘಟನೆಯಿಂದ ಜನರು
ಮತ್ತಷ್ಟು ಕೆರಳಿದರು.
ನಾಂದೇಡ್, ನಾಸಿಕ್, ಥಾಣಾ, ಬಾಂಡುಕ್, ಕುರ್ಲಾ, ಮಾಲುಂದ್, ಟ್ರಾಂಬೇ,
ಕಲಿನಾ, ಖೇರ್ವಾಡಿ ಮುಂತಾದ ಕಡೆ ವ್ಯಾಪಕ ಹಿಂಸಾಚಾರ ನಡೆದು
ಪೊಲೀಸರು ಈ ಸಂಬಂಧ ೧೫೦೦ ಜನರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ತಮ್ಮ
ಸಿಂಗಾಪುರದ ಪ್ರವಾಸವನ್ನು ರದ್ದುಗೊಳಿಸಿ ಶುಕ್ರವಾರ ಮುಂಬೈಗೆ
ವಾಪಸ್ಸಾಗಲಿದ್ದಾರೆ.
ಜನತೆ ಶಾಂತವಾಗಲು ಮಹಾರಾಷ್ಟ್ರದ ರಾಜಕೀಯ ಪಕ್ಷಗಳು
ಕೋರಿವೆ.
ಇನ್ನಷ್ಟು
ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ
ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ
ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ
ರಿಚರ್ಡ್ಸ್ ದಾಖಲೆ ಮುರಿದ ಮಹಮದ್ ಯೂಸಫ್
ವಿಟಿಯು: ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ
ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ
ಭಾರತ-ಈಜಿಪ್ಟ್ ಐಟಿ
ಕ್ಷೇತ್ರದಲ್ಲಿ ಒಪ್ಪಂದ
ಆಯ್ಕೆ ಮಾಡಿ ಕೋರ್ಸ್
ಬದಲಾವಣೆ ಇಲ್ಲ : ಸಿಇಟಿ
ಭಾರಿ ಮೊತ್ತದ ಪ್ರಶಸ್ತಿಗೆ
ನಿರ್ಧಾರ : ಬೆಂಮಸಾಸಂ
ಶಿಬು: ಮೊದಲ ಕೊಲೆಗಾರ
ಕೇಂದ್ರ ಸಚಿವ
|